ಚನ್ನಪಟ್ಟಣ,ರಾಮನಗರ : ಒಂದೇ ಪಕ್ಷದಲ್ಲಿ ಸಿಪಿ ಯೋಗೇಶ್ವರ್ ಅವರು ಆರು ವರ್ಷಕ್ಕಿಂತ ಹೆಚ್ಚು ಇರಲಿಲ್ಲ ಅಂಥದ್ರಲ್ಲಿ ಇವರು ಚನ್ನಪಟ್ಟಣ ಏನು ಪ್ರತಿನಿಧಿಸ್ತಾರೆ ಎಂದು ಕಿಡಿಕಾರಿದರು.
ಯೋಗೇಶ್ವರ್ ರವರಿಗೆ ಕರೆದಿದ್ವಿ, ಜನತಾದಳ ಚಿಹ್ನೆಯಡಿ ನಿಂತುಕೊಳ್ಳಿ ಅಂದ್ವಿ, ಬರ್ತೀವಿ ಅಂತ ಹೇಳಿ ಬರಲಿಲ್ಲ.ಆ ಮೇಲೆ ಬಿಜೆಪಿ ಟಿಕೆಟ್ ಬೇಕು ಅಂದ್ರು ಕೇಳಿದ್ರು ಅಯ್ತು ಅಂತ ಕುಮಾರಣ್ಣ ಬಿಜೆಪಿ ಜತೆ ಸಂಬಂಧ ಹಾಳು ಮಾಡ್ಕೊಬಾರದು ಅಂತ ಬಿಜೆಪಿಯಿಂದ ಟಿಕೆಟ್ ನೀಡಲು ಒಪ್ಪಿದರು,ಸಚಿವ ಸ್ಥಾನ ಕೊಟ್ಟಿದ್ದ ಬಿಜೆಪಿಗೆ ಮೋಸ ಮಾಡಿ ಕಾಂಗ್ರೆಸ್ ಗೆ ಹೋಗಿದ್ದಾರೆ ಎಂದರು.
ಇವತ್ತು ರಸ್ತೆಗಳ ಅಭಿವೃದ್ಧಿ, ಚರಂಡಿಗಳ ಅಭಿವೃದ್ಧಿ ಕುಮಾರಣ್ಣ ಅವರು ಮಾಡಿದ್ದಾರೆ. ಮೂರ್ನಾಲ್ಕು ತಿಂಗಳಿಂದ ಕುಮಾರಸ್ವಾಮಿ ಕ್ಷೇತ್ರ ಬಿಟ್ಟ ಮೇಲೆ ಕೆರೆಗಳು ತುಂಬಿಲ್ಲ.ಕುಮಾರಣ್ಣ ಅವರು 107 ಕೆರೆ ತುಂಬಿಸಿದ್ರು. ನಾವು ಪ್ರಚಾರ ಪಡೆದಿಲ್ಲ. ಜಾಹಿರಾತು ಕೊಟ್ಟಿಲ್ಲ ಎಂದರು.
ಬೇರೆ ಅವರ ತರಹ ನಾವೇ ಕೆರೆ ತುಂಬಿಸಿದ್ದೇವೆ ಅಂತ ಹೇಳಿಕೊಳ್ಳಲಿಲ್ಲ, ಪ್ರಚಾರ ತೆಗೆದುಕೊಂಡಿಲ್ಲ ಕುಮಾರಸ್ವಾಮಿ ಸಾರಾಯಿ, ಲಾಟರಿ ನಿಷೇಧ ಮಾಡಿದ್ರು.ತಾಯಂದಿರ ನೋವಿಗೆ ಪರಿಹಾರ ಕೊಡೋಕೆ ಈ ಕೆಲಸ ಕುಮಾರಸ್ವಾಮಿಯವರು ಮಾಡಿದ್ರು ಎಂದರು.
ಕೇಂದ್ರದಲ್ಲಿ ಕುಮಾರಸ್ವಾಮಿ ಮಂತ್ರಿ ಆಗಿದ್ದರೆ.ನಮ್ಮ ಭವಿಷ್ಯದ ಪೀಳಿಗೆಗೆ ಸ್ವಾಭಿಮಾನದಿಂದ ಬದುಕುಬೇಕು. ಸ್ವಾಭಿಮಾನದ ಬದುಕಿಗಾಗಿ ಉದ್ಯೋಗ ಬೇಕು. ಇದಕ್ಕಾಗಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಉದ್ಯೋಗ ಮಾಡಿದ್ರು. 1200 ಜನರಿಗೆ ಉದ್ಯೋಗ ಕೊಡಲಾಗಿದೆ ಎಂದು ತಿಳಿಸಿದರು.
ಕುಮಾರಸ್ವಾಮಿಯವರು ಕ್ಷೇತ್ರ ತೆರವು ಆದ ಕೂಡಲೇ ಡಿ.ಕೆ ಶಿವಕುಮಾರ್ ಅವರು ಉದ್ಯೋಗ ಮೇಳ ಮಾಡ್ತೀನಿ ಅಂತ ಬಂದರು. 10 ಸಾವಿರ ಅರ್ಜಿ ಪಡೆದ್ರು. ಆದರೆ ಎಷ್ಟು ಜನರಿಗೆ ಕೆಲಸ ಕೊಟ್ಟರು. ಇದಕ್ಕೆ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.
ಹಾಲಿನ ಪ್ರೊತ್ಸಾಹ ಧನ ಕೊಡುತ್ತಿಲ್ಲ. 200 ಯುನಿಟ್ ವಿದ್ಯುತ್ ಕೊಡ್ತೀನಿ ಅಂತ ಸುಳ್ಳಿನ ಕಂತೆ ಕಾಂಗ್ರೆಸ್ ಅವರು ಹೇಳ್ತಿದ್ದಾರೆ.ಇದನ್ನ ಯಾರು ನಂಬಬೇಡಿ.ಕಾಂಗ್ರೆಸ್ ಗ್ಯಾರಂಟಿ ವಿರುದ್ದ ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.
ಇಗ್ಗಲೂರು ಡ್ಯಾಂ ಗೂ ದೇವೇಗೌಡರಿಗೆ ಸಂಬಂಧವಿಲ್ಲ ಅಂತ ಕಾಂಗ್ರೆಸ್ ಅವರು ಹೇಳ್ತಾರೆ. ಇಂತಹ ಕಾಂಗ್ರೆಸ್ ಸುಳ್ಳು ನಂಬಬೇಡಿ.ನನ್ನನ್ನ ಎರಡು ಬಾರಿ ಕಾಂಗ್ರೆಸ್ ನವರು ಕುತಂತ್ರದಿಂದ ನನ್ನನ್ನ ಸೋಲಿಸಿದ್ರು.ಈ ಬಾರಿ ನನಗೆ ಅವಕಾಶ ಒಂದು ಕೊಡಿ. ನನ್ನನ್ನ ಕೈ ಬಿಡಬೇಡಿ.ಒಂದು ಬಾರಿ ನನ್ನನ್ನ ಪರೀಕ್ಷೆ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಮನವಿ ಮಾಡಿದರು.
ನಿಖಿಲ್ ಕುಮಾರಸ್ವಾಮಿಗೆ ನೆಗಿಲು ನೀಡಿದ ರೈತರು
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಚಕ್ಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಬೃಹತ್ ಪ್ರಚಾರ ಸಭೆ ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಹೆಚ್.ಡಿ.ದೇವೇಗೌಡ ಅವರು, ಚನ್ನಪಟ್ಟಣ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಪಾಲ್ಗೊಂಡಿದ್ದರು.
ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ನೆಗಿಲು ನೀಡಿ ರೈತರು ಸನ್ಮಾನಿಸಿದರು.