ಬೆಂಗಳೂರು: ನಗರದ ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ಆಯುಕ್ತರ ನಡೆ ಕಾರ್ಯಕ್ರಮದಡಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ವಲಯ ಕಛೇರಿಯ ಸಭಾಂಗಣ ಕೊಠಡಿಯಲ್ಲಿ ಸಾರ್ವಜನಿಕರಿಂದ 35ಕ್ಕೂ ಹೆಚ್ಚು ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಯುಕ್ತರ ನಡೆ ವಲಯದ ಕಡೆ”ಯಲ್ಲಿ ನಾಗರೀಕರಿಂದ ಬಂದ ಪ್ರಮುಖ ಅಹವಾಲುಗಳು:
1. ಜಾಲಹಳ್ಳಿ, ಹೆಚ್.ಎಂ.ಟಿ ಬಳಿಯ ಟಾಟಾ ಐಕ್ಯುಲೈಟ್ಸ್ ಅಪಾರ್ಟ್ಮೆಂಟ್ ಬಳಿ ಒಂದೂವರೆ ವರ್ಷದಿಂದ ಕಳಿಂಗ ರಸ್ತೆ ದುರಸ್ತಿ ಮಾಡಿಲ್ಲ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತುದ್ದು, ಮಳೆ ನೀರು ಕೂಡಾ ನಿಲ್ಲುತ್ತದೆ. ಅದನ್ನು ಸರಿಪಡಿಸಿ, ಡ್ರೈನ್ ವ್ಯವಸ್ಥೆ ಸರಿಪಡಿಸಲು ಮನವಿ ಮಾಡಿದರು.
*ಮುಖ್ಯ ಆಯುಕ್ತರ ಪ್ರತಿಕ್ರಿಯೆ:* ಈ ಸ್ಥಳದಲ್ಲಿ ಕೆ.ರೈಡ್ ಕಾಮಗಾರಿ ಪ್ರಗತಿಯಲ್ಲಿದ್ದು, ಅಲ್ಲಿ ಯಾಕೆ ನೀರು ನಿಲ್ಲುತ್ತದೆ ಎಂಬುದನ್ನು ಗಮನಿಸಿ ಜಂಟಿ ಪರಿಶೀಲನೆ ನಡೆಸಿ ಕೂಡಲೆ ಸಮಸ್ಯೆ ಬಗೆಹರಿಸಿ. ಸೈಡ್ ಡ್ರೈನ್ ನಲ್ಲಿ ಹೂಳೆತ್ತಿ ಸ್ವಚ್ಚಗೊಳಿಸಲು ಸೂಚನೆ ನೀಡಿದರು.
2. ಆರ್.ಆರ್ ನಗರ ಬೆಮೆಲ್ 5ನೇ ಹಂತದಲ್ಲಿ ಡೆಕ್ಕನ್ ಆರ್ಕೆಡ್ ಅಪಾಟ್ಮೆಂಟ್ ಬಳಿ ಖಾಸಗಿ ಖಾಲಿ ಜಾಗದಲ್ಲಿ ದೊಡ್ಡ ಮರ ಇದ್ದು, ಅದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಆದ್ದರಿಂದ ಮರದ ಕೊಂಬೆಗಳನ್ನು ಕಟಾವು ಮಾಡಲು ಮನವಿ ಮಾಡಿದರು.
*ಪ್ರತಿಕ್ರಿಯೆ:* ಸ್ಥಳ ಪರಿಶೀಲಿಸಿ ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.
3. ಪಟ್ಟಣಗೆರೆ ನಂದಾದೀಪ ಬಡಾವಣೆ ಮಲ್ಲಿಗೆ ರಸ್ತೆಯಲ್ಲಿರುವ ಉದ್ಯಾನವನ ಕಾಮಗಾರಿ ಸ್ಥಗಿತಗೊಳಿಸಿದ್ದು, ಅದನ್ನು ಪೂರ್ಣಗೊಳಿಸಲು ಮನವಿ.
*ಪ್ರತಿಕ್ರಿಯೆ:* ವಲಯ ಆಯುಕ್ತರು ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಲು ಸೂನಚೆ.
4. ಹೊಸಕೆರೆಹಳ್ಳಿ ಕೆರೆ ಕೋಡಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದನ್ನು ಕೂಡಲೆ ಸರಿಪಡಿಸಲು ಮನವಿ
*ಪ್ರತಿಕ್ರಿಯೆ:* ಕೆರೆ ಕೋಡಿ ರಸ್ತೆಗೆ ಈಗಾಗಲೇ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಕೂಡಲೆ ಕೆಲಸ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
5. 1ನೇ ಕ್ರಾಸ್, 18ನೇ ಕ್ರಾಸ್, ಐಡಿಯಲ್ ಹೋಮ್ ಟೌನ್ ಶಿಪ್ನಲ್ಲಿ ಟುಲೈಟ್ ರೆಸ್ಟೋರಂಟ್ ಚಿಮಣಿಯಿಂದ ಬರುವ ಹೊಗೆ ಮನೆಯೊಳಗೆ ನುಗ್ಗುತ್ತಿದೆ, ಒಣ ತ್ಯಾಜ್ಯ ಸಂಗ್ರಹಣಾ ಘಟಕದಿಂದ ದುರ್ವಾಸನೆ ಹಾಗೂ ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಲ್ಲುತ್ತದೆ. ಆ ಸಮಸ್ಯೆಯನ್ನು ಬಗೆಹರಿಸಲು ಮನವಿ.
*ಪ್ರತಿಕ್ರಿಯೆ:* ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೆಸ್ಟೋರೆಂಟ್ ಗೆ ಲೈಸೆನ್ಸ್ ಇದಿಯಾ ಇಲ್ಲವಾ ಪರಿಶೀಲಿಸಿ, ನೋಟೀಸ್ ನೀಡಿ ಚಿಮಣಿ ಬದಲಾಯಿಸಲು ಒಂದು ವಾರ ಕಾಲಾವಕಾಶ ನೀಡಬೇಕು. ನೀರು ನಿಲ್ಲುವ ರಸ್ತೆಯ ಸ್ಥಳ ಪರಿಶೀಲಿಸಿ, ಸಮಸ್ಯೆ ಬಗೆಹರಿಸಬೇಕು. ಒಣ ತ್ಯಾಜ್ಯ ಸಂಗ್ರಹಣಾ ಘಟಕದಿಂದ ದುರ್ವಾಸನೆ ಬರುತ್ತಿರುವ ಸಂಬAಧ ಸ್ಥಳ ಪರಿಶೀಲಿಸಿ ಸಮಸ್ಯೆ ಇತ್ಯರ್ಥ ಪಡಿಸಲು ಸೂಚಿಸಿದರು.
6. ಮಲ್ಲತ್ತಹಳ್ಳಿ ಬಳಿ ಬಾಲಾಜಿ ಬಡಾವಣೆಯಲ್ಲಿ ರಸ್ತೆ ಗುಂಡಿ ಹಾಗೂ ಚಿಕನ್ ಕತ್ತರಿಸುವ ಅಂಗಡಿ ತೆರವುಗೊಳಿಸಲು ಮನವಿ
*ಪ್ರತಿಕ್ರಿಯೆ:* ಸ್ಥಳೀಯರ ದೂರಿನ ಆಧಾರದ ಮೇಲೆ ಚಿಕನ್ ಅಂಗಡಿ ಮಾಲೀಕರಿಗೆ ನೋಟೀಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಿದರು.
7. ಲಗ್ಗೆರೆ ಮುನೀಶ್ವರ ಬಡಾವಣೆಯ ಸ.ಸಂ 92 ರಲ್ಲಿ ಆಶ್ರಯ ಯೋಜನೆಯಡಿ 38 ಜನರಿಗೆ ಜಾಗ ಹಸ್ತಾಂತರ ಆಗಿರುತ್ತದೆ. ಆದರೆ ಇದುವರೆಗೆ ಹಕ್ಕುಪತ್ರ ವಿತರಣೆ ಮಾಡಿರುವುದಿಲ್ಲ.
*ಪ್ರತಿಕ್ರಿಯೆ:* ವಲಯ ಆಯುಕ್ತರು ಕೂಡಲೆ ಕಡತ ಪರಿಶೀಲಿಸಿ ಆ ಬಗ್ಗೆ ಸೂಕ್ತ ಕ್ರಮ ವಹಿಸಲು ಸೂಚನೆ
8. ಹೇರೋಹಳ್ಳಿಯಲ್ಲಿ ರುದ್ರಭೂಮಿ ಒತ್ತುವರಿ ಹಾಗೂ ಸರಿಯಾಗಿ ನಿರ್ವಹಣೆ ಮಾಡಲು ಮನವಿ
*ಪ್ರತಿಕ್ರಿಯೆ:* ರುದ್ರಭೂಮಿಗಳಲ್ಲಿ ಸಮಗ್ರ ನಿರ್ವಹಣೆ ಮಾಡಲು ಹಾಗೂ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು,
9. ಹೇರೋಹಳ್ಳಿ ಕಾಲೋನಿಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮನವಿ.
*ಪ್ರತಿಕ್ರಿಯೆ:* ಕೂಡಲೆ ಸ್ಥಳ ಪರಿಶೀಲಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸೂಚನೆ
10. ರಾಜರಾಜೇಶ್ವರಿ ನಗರ ಬಂಗಾರಪ್ಪ ನಗರ ಮೊಬೈಲ್ ಟವರ್ ಗೆ ಅಳವಡಿಸಿರುವ ಕಬ್ಬಿಣದ ತಂತಿಗಳು ತುಕ್ಕು ಹಿಡಿದು ಬೀಳುವ ಸ್ಥಿತಿಯಲ್ಲಿದ್ದು, ಅದನ್ನು ತೆರವುಗೊಳಿಸಲು ಮನವಿ
*ಪ್ರತಿಕ್ರಿಯೆ:* ಸಂಬಂಧಪಟ್ಟ ನಗರ ಯೋಜನೆ ವಿಭಾಗದ ಅಧಿಕಾರಿಗಳು ಸ್ಟçಚರಲ್ ಸ್ಟೆಬಿಲಿಟಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
11. ಪೌರಕಾರ್ಮಿಕರಾದ ಕಣ್ಣಮ್ಮ ರವರ ವಯಸ್ಸು ತಪ್ಪಾಗಿದ್ದು, ಖಾಯಂ ಮಾಡಿಕೊಳ್ಳಲು ಮನವಿ.
*ಪ್ರತಿಕ್ರಿಯೆ:* ಪರಿಶೀಲಿಸಿ ಕ್ರಮ ಕೈಗೊಳ್ಳಲು ವಲಯ ಆಯುಕ್ತರಿಗೆ ಸೂಚನೆ
12. ಮಲ್ಲತ್ತಹಳ್ಳಿ ಎನ್.ಜಿ.ಎಫ್ ಲೇವಟ್ ನಲ್ಲಿರುವ ಉದ್ಯಾನವನದ ನಿರ್ವಹಣೆ ಹಾಗೂ ಒತ್ತುವರಿಯನ್ನು ತೆರವುಗೊಳಿಸಲು ಮನವಿ.
*ಪ್ರತಿಕ್ರಿಯೆ:* ಉದ್ಯಾನವಣ ನಿರ್ವಹಣೆಗಾಗಿ ಟೆಂಡರ್ ಕರೆಯಲಾಗಿದ್ದು, ಸರಿಯಾಗಿ ನಿರ್ವಹಣೆ ಮಾಡಬೇಕು. ಒತ್ತುವರಿಯಾಗಿರುವುದನ್ನು ಪರಿಶೀಲಿಸಿ ತೆರವುಗೊಳಿಸಲು ಕ್ರಮವಹಿಸಲು ಸೂಚನೆ.
13. ಮಲ್ಲತ್ತಹಳ್ಳಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಕೊಡಿ ಹಾಗೂ ಸರ್ಕಾರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಕಿಸಿಕೊಡಲು ಮನವಿ.
*ಪ್ರತಿಕ್ರಿಯೆ:* ಶುದ್ಧ ಕುಡಿಯುವ ನೀರಿನ ಘಟಕ ಪರಿಶೀಲಿಸಿ ಹಾಗೂ ಶಾಲೆ ಬಳಿ ಆರ್.ಒ ಪ್ಲಾಂಟ್ ಮಾಡಲು ಸೂಚನೆ ನೀಡಿದರು.
14. ಬಸವರಾಜ ಲೇಔಟ್ ಜವರಾಯನ ದೊಡ್ಡಿ ಬಳಿ ಸೈಡ್ ಡ್ರೈನ್ ಒಡೆದು ನೀರು ಮನೆಗಳಿಗೆ ನುಗ್ಗುತ್ತದೆ ಅದನ್ನು ಸರಿಪಡಿಸಲು ಮನವಿ.
*ಪ್ರತಿಕ್ರಿಯೆ:* ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಲು ಸೂಚನೆ
15. ರಸ್ತೆ ಬದಿ ಕಸ ಬಿಸಾಡುವುದು ಹೆಚ್ಚಾಗಿದ್ದು, ಅದನ್ನು ತಡೆಯಬೇಕು ಹಾಗೂ ಒಮ್ಮೆ ಬಳಸುವ ಪ್ಲಾಸ್ಟಿಕ್ ನಿಷೇಧಿಸಲು ಕ್ರಮವಹಿಸಲು ಮನವಿ.
*ಪ್ರತಿಕ್ರಿಯೆ:* ರಸ್ತೆ ಬದಿ ಕಸ ಬಸಾಡುವ ಸ್ಥಳಗಳನ್ನು ಸ್ವಚ್ಛಗೊಳಿಸಿ ನಿರ್ಮೂಲನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಇನ್ನು ಒಮ್ಮೆ ಬಳಸುವ ಪ್ಲಾಸ್ಟಿಕ್ ಮಾರಾಟ ಗೋಡನ್/ಮಳಿಗಗಳಿಗೆ ಅನಿರೀಕ್ಷಿತ ಭೇಟಿ ನೀಡಿ ವಶಪಡಿಸಿಕೊಳ್ಳುವುದರ ಜೊತೆಗೆ ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ.
16. ಜವರೇಗೌಡ ನಗರದಲ್ಲಿ ಸತ್ಯ ಎಂಬುವವರಿಗೆ ಒಂಟಿ ಮನೆ ಯೋಜನೆಯಡಿ ಬಾಕಿ ಅನುದಾನ ಬಿಡುಗಡೆ ಮಾಡಲು ಮನವಿ.
*ಪ್ರತಿಕ್ರಿಯೆ:* ಕಡತ ಪರಿಶೀಲಿಸಿ ಕೂಡಲೆ ಬಾಕಿ ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಿದರು.
17. ಪಾದಚಾರಿ ಮಾರ್ಗಗಳು ಒತ್ತುವರಿ ಹಾಗೂ ನಿರ್ವಹಣೆ ಮಾಡಬೇಕಿದ್ದು, ಅದನ್ನು ಸರಿಪಡಿಸಲು ಮನವಿ
*ಪ್ರತಿಕ್ರಿಯೆ:* ಪಾಲಿಕೆಯಿಂದ ಈಗಾಗಲೇ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಮಾಡಲಾಗುತ್ತಿದ್ದು, ವೆಂಡಿಂಗ್ ಜೋನ್ಗಳನ್ನು ಗುರುತಿಸಲಾಗುತ್ತಿದೆ. ಯಾರೇ ಆಗಲಿ ಪಾದಚಾರಿ ಮಆರ್ಗದಲ್ಲಿ ಶಾಶ್ವತವಾಗಿ ಪೆಟ್ಟಿಗೆಗಳನ್ನು ಅಳವಡಿಸುವಂತಿಲ್ಲ.
18 ತಲಗಟ್ಟಪುರ ಪೊಲೀಸ್ ಠಾಣೆ ಮುಂಬಾಗದ ಬಸ್ ನಿಲ್ದಾಣದಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಅದನ್ನು ಬೇರೆಡೆ ಸ್ಥಳಾಂತರಿಸಲು ಮನವಿ
*ಪ್ರತಿಕ್ರಿಯೆ:* ಕೂಡಲೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ
19. ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಮನವಿ.
*ಪ್ರತಿಕ್ರಿಯೆ:* ಅನಧಿಕೃತ ಕಟ್ಟಡ ಎಂಬುದು ಕಂಡುಬಂದರೆ ನೋಟೀಸ್ ನೀಡಿ, ಮಾಲೀಕರಿಗೆ ಸಮಯಾವಕಾಶ ನೀಡಿ ಅನಧಿಕೃತ ಕಟ್ಟಡ ತೆರವುಗೊಳಿಸಲಾಗುವುದು.
20. ಇ-ಖಾತಾ ವಿಚಾರವಾಗಿ ಸಾಕಷ್ಟು ಗೊಂದಲಗಳಿದ್ದು, ಆ ಸಮಸ್ಯೆಯನ್ನು ಬಗೆಹರಿಸಿ ತ್ವರಿತವಾಗಿ ಇ-ಖಾತಾ ಸಿಗುವಂತೆ ಮಾಡಲು ಮನವಿ.
*ಪ್ರತಿಕ್ರಿಯೆ:* ಸಾಕಷ್ಟು ಮಂದಿಯಿಂದ ಇ-ಖಾತಾ ವಿಚಾರವಾಗಿ ಪ್ರಶ್ನೆಗಳು ಬಂದಿದ್ದು, ಕರಡು ಇ-ಖಾತಾ ಪಡೆಯಲು ಇಸಿಯ ಅಗತ್ಯವಿರುವುದಿಲ್ಲ. ತಾಂತ್ರಿಕ ಸಮಸ್ಯೆಯಿದ್ದರೆ ವಲಯವಾರು ಸಹಾಯ ಕೇಂದ್ರಗಳನ್ನು ತೆರೆದಿದ್ದು, ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಸಹಾಯಕ ಕಂದಾಯ ಅಧಿಕಾರಿ ಕಛೇರಿಯಲ್ಲಿ ಮಾರಾಟ ಮಾಡುವವರಿಗೆ ಕೂಡಲೆ ಇ-ಖಾತಾ ವ್ಯವಸ್ಥೆ ಮಾಡಿಕೊಡಲಾಗುವುದು. ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಖಾತಾ ನೀಡುವ ವ್ಯವಸ್ಥೆ ಮಾಡಲಾಗಿದ್ದು, 45 ರೂ. ಕಟ್ಟಿದರೆ ಇ-ಖಾತಾ ಸಿಗಲಿದೆ. ಮ್ಯಾನ್ಯುವಲ್ ಖಾತಾ ಇನ್ನೂ ರದ್ದು ಮಾಡಿರುವುದಿಲ್ಲ ಎಂದು ಮಾಹಿತಿ ನೀಡಿದರು.
21. ಪಟ್ಟಣಗೆರೆ ಹೆಮ್ಮಿಗೆಪುರದಲ್ಲಿ ನಕ್ಷೆ ಉಲ್ಲಂಘನೆ ಮಾಡಿ, ಹೆಚ್ಚುವರಿ ಮಹಡಿಗಳನ್ನು ಕಟ್ಟುತ್ತಿದ್ದಾರೆ. ಅದನ್ನು ತೆರವುಗೊಳಿಸಲು ಮನವಿ.
*ಪ್ತಿತಿ ಕ್ರಿಯೆ:* ಸಂಬಂಧಪಟ್ಟ ಅಧಿಕಾರಿಗಳು ಸ್ಥಳಪರಿಶೀಲಿಸಿ ಉಲ್ಲಂಘನೆ ಮಾಡಿದ್ದರೆ ಪಾಲಿಕೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಈ ವೇಳೆ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ವಲಯ ಆಯುಕ್ತರಾದ ಸತೀಶ್, ವಲಯ ಜಂಟಿ ಆಯುಕ್ತರಾದ ಅಜಯ್, ಮುಖ್ಯ ಅಭಿಯಂತರರಾದ ಸ್ವಯಂಪ್ರಭ, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.