ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರ ಕ್ಷೇತ್ರದಲ್ಲಿ ಯಾವ ಜ್ಯೋತಿಷಿಗಳು ಮಾಡದಂತ ಕಾರ್ಯಗಳನ್ನು ಗೋಲ್ಡ್ ಟ್ರೀ ನಕ್ಷತ್ರ ನಾಡಿ ಸಂಸ್ಥೆ ಮಾಡುತ್ತಿದ್ದು, ಪ್ರತಿವರ್ಷದಂತೆ ಈ ಬಾರಿಯೂ 85 ಜನರಿಗೆ ಪದವಿ ಪ್ರದಾನ ಮಾಡಲಾಗಿದೆ ಎಂದು ಗೋಲ್ಡ್ ಟ್ರೀ ಆಸ್ಟ್ರೋ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ದಿನೇಶ್ ತಿಳಿಸಿದರು.
ಬೆಂಗಳೂರಿನ ವಿದ್ಯಾರಣ್ಯಪುರದ ಕಲತ್ತೂರು ಗಾರ್ಡನ್ ನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ 85 ವಿವಿಧ ಕ್ಷೇತ್ರದ ಜ್ಯೋತಿಷ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಇಲ್ಲಿಯ ವರೆಗೆ 65 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ದೇಶದ ಮೂಲೆ ಮೂಲೆಯಲ್ಲಿರುವ ಸಾಧಕರನ್ನು ಗುರುತಿಸಿ ಪದವಿ ಪ್ರದಾನ ಮಾಡಲಾಗಿದೆ. ಉದ್ದೇಶ ಎಲ್ಲರೂ ಜ್ಯೋತಿಷ್ಯವನ್ನು ಕಲಿಯಬೇಕು, ತಿಳಿದುಕೊಳ್ಳುವ ಅವಶ್ಯಕತೆ ಇದೆ, ಮೂಡನಂಬಿಕೆ, ಕಂದಾಚಾರ ತೊಲಗಿಸಬೇಕು ಎಂಬುದೇ ನಮ್ಮ ಮೂಲ ಮನಾತ್ರವಾಗಿದೆ ಎಂದರು.
ಎಲ್ಲರೂ ಸಹಾ ವೈಜ್ಞಾನಿಕವಾಗಿ ಜ್ಯೋತಿಷ್ಯವನ್ನು ಕಲಿಯಬೇಕು, ಯಾರು ಮೋಸ ಮಾಡಬಾರದು, ನಮ್ಮ ಸಂಸ್ಥೆ ಕಳೆದ 10 ವರ್ಷಗಳಿಂದ ಅಂದರೆ 2016 ರಲ್ಲಿ ಗೋಲ್ಡ್ ಟ್ರೀ ಸಂಸ್ಥೆ ಪ್ರಾರಂಭವಾಗಿದ್ದು, ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ತಿಳಿಸುವ ಕಾಯಕ ಮಾಡುತ್ತಿದೆ. ಸನಾತನ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಸಂಸ್ಥೆ ಹಗಲಿರುಳು ಕೆಲಸ ಮಾಡುತ್ತಿದೆ.
85 ಜನ ಜ್ಯೋತಿಷ್ಯ ರತ್ನ ಪಡೆದಿದ್ದಾರೆ, ಹಾಡುಭಾಷೆಯಲ್ಲಿ ಪದವಿ ಪ್ರದಾನ ಎಂದು ಕರೆಯುತಾರೆ, ಆದರೆ ಸಂಸ್ಕೃತದಲ್ಲಿ ಜ್ಯೋತಿಷ್ಯ ರತ್ನ ಎಂದು ಕರೆಯುತ್ತಾರೆ. ಯಾರಿಗೆ ವೈಜ್ಞಾನಿಕ ತಲೆಗಟ್ಟಿನಲ್ಲಿ ಜ್ಯೋತಿಷ್ಯ ಕಲಿಯುವ ಹಂಬಲ ಇದೆಯೋ ಅವರು ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆಯಬಹುದು, ಪ್ರತಿ ವರ್ಷವೂ ಸಹಾ ಪದವಿ ಪ್ರದಾನ ಕಾರ್ಯಕ್ರಮವನ್ನು ವಿಶೇಷವಾಗಿ ಮಾಡಲಾಗುತ್ತದೆ ಎಂದರು.
NCSK ಮಾಜಿ ಸದಸ್ಯ ಜಗದೀಶ್ ಹಿರಿಮನಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಜ್ಯೋತಿಷ್ಯದಲ್ಲಿ ಯಾರು ಮಾಡದ ಸಾಧನೆಯನ್ನು ದಿನೇಶ್ ಗುರೂಜಿ ಮಾಡುತ್ತಿದ್ದಾರೆ, ಅದು ಸಹಾ ವೈಜ್ಞಾನಿಕ ನೆಲೆಗಟ್ಟಿನಲ್ಲಿ,ಅವರನ್ನು ನಾವೆಲ್ಲರೂ ಸೇರಿಕೊಂಡು ದೊಡ್ಡ ಗುರೂಜಿ ಮಾಡಿದಾಗ ಮಾತ್ರ, ನಾವೆಲ್ಲ ಸಣ್ಣ ಗುರುಗಳಾಗಲು ಸಾಧ್ಯ ಎಂದರು.
ವಿಶ್ವ ಮಟ್ಟದಲ್ಲಿ ಪ್ರಧಾನಮಂತ್ರಿ ಮೋದಿಯವರು ಭಾರತವನ್ನು ಮೊದಲನೇ ಸ್ಥಾನಕ್ಕೆ ತರಲು ಸಾಕಷ್ಟು ಪಣತೊಟ್ಟಿದ್ದಾರೆ.ಆದರೆ ಇದೇ ಜಾಗದಲ್ಲಿ ಬೇರೆಯಾರೆ ಇದ್ದರು, ಭಾರತವನ್ನು, ಸನಾತನ ಧರ್ಮವನ್ನು ಮಾರಾಟ ಮಾಡಿಕೊಂಡು ಹೋಗಬೇಕಿತ್ತು, ಪ್ರಸ್ತುತ 40 ರಷ್ಟು ಜನ ಸನಾತನ ಧರ್ಮವನ್ನು ಮರೆಯುತ್ತಿರುವುದು ದುರಂತದ ಸಂಗತಿಯಾಗಿದೆ, ಸೀಮಿತವಾಗಿದ್ದ ಜ್ಯೋತಿಷ್ಯ ಶಾಸ್ತ್ರವನ್ನು ಆಧುನಿಕತೆಗೆ ಟಚ್ ಕೊಟ್ಟು ಹೆಮ್ಮರವಾಗಿ ಬೆಳೆಯಲು ಮೂಲಪುರುಷರಾಗಿದ್ದಾರೆ.
ನಕ್ಷತ್ರ ನಾಡಿ ಕಾರ್ಯಕ್ರಮ ಎಲ್ಲಾ ವರ್ಗದವರಿಗೂ ಅನುಕೂಲವಾಗಲು, ಜ್ಯೋತಿಷ್ಯ ಶಾಸ್ತ್ರದ ಮೇಲೆ ದೇಶದ ರಾಜ ಮಹಾರಾಜರೂ ಆಡಳಿತ ನಡೆಸುತ್ತಿದ್ದರು. ಆಗ ಒಂದು ನಂಬಿಕೆ ಇತ್ತು
ಜ್ಯೋತಿಷ್ಯದಲ್ಲಿ ಮೌಡ್ಯತೆಯನ್ನು ತೊಲಗಿಸಬೇಕು , ಆಧುನಿಕತೆ ಇದೆ, ಮುಂದಿನ ಪೀಳಿಗೆಗೆ ತಿಳಿಸುವ , ಸನಾತನ ಉಳಿಸುವ ಸಲುವಾಗಿ ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದರು. ಗೋಲ್ಡ್ ಟ್ರೀ ಸಂಸ್ಥೆಯಲ್ಲಿ ಕೇವಲ ಜ್ಯೋತಿಷ್ಯ ಶಾಸ್ತ್ರವಲ್ಲದೆ, ಮನೋರಂಜನೆಯ ತಾಣವಾಗಿದೆ. ಒಂದಕ್ಕೆ ಸೀಮಿತವಾಗದೆ ಬೇರೆ ಕ್ಷೇತ್ರದಲ್ಲಿಯೂ ಬೆಳೆಯಲು ಸಾಧ್ಯವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಕ್ಷೇತ್ರದಲ್ಲಿ ವಿವಿಧೆ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪಿಜಿ ಡಿಪ್ಲೋಮೋ ಮತ್ತು ಸ್ನಾತಕೋತ್ತರ ಪದವಿತರರಿಗೆ ಪದವಿ ಪ್ರಧಾನವನ್ನು ಮಾಡಲಾಯಿತು.