ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಪರಿಷತ್ ಚುನಾವಣೆಯಲ್ಲಿ ಅಬಕಾರಿ ಉಪ ನಿರೀಕ್ಷಕರಾದಂತಹ ಭರತೇಶ್ ಕುಮಾರ್ ಅವರು 350ಕ್ಕಿಂತ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜಯಶಾಲಿಯಾಗಿದ್ದಾರೆ.
ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯಪರಿಷತ್ ಚುನಾವಣೆ ಮಂಗಳವಾರ ಕಬ್ಬನ್ ಉದ್ಯಾನವನದಲ್ಲಿರುವ ಕರ್ನಾಟಕ ರಾಜ್ಯ ನೌಕರರ ಸಂಘದಲ್ಲಿ ನಡೆಯಿತು. ಬೆಳಿಗ್ಗೆ 9 ಗಂಟೆಗೆ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಿತು. ಇಲಾಖೆಯ ಸುಮಾರು 515ಕ್ಕಿಂತ ಹೆಚ್ಚು ಮತದಾರರು ಈ ಒಂದು ಇಲಾಖೆಯಲ್ಲಿದ್ದರು, ಅದರಲ್ಲಿ ಕ್ರಮ ಸಂಖ್ಯೆ 1 ಅಭ್ಯರ್ಥಿ ಆದಂತಹ ಭರತೇಶ್ ಕುಮಾರ್ ಅವರು ಹಾಗೂ ಕ್ರಮ ಸಂಖ್ಯೆ 2ರ ಅಭ್ಯರ್ಥಿ ರಂಗಯ್ಯ ಸ್ಪರ್ಧೆ ಮಾಡಿದ್ದರು. ಅದರಲ್ಲಿ ಭರತೇಶ್ ಕುಮಾರ್ ಅವರು 350ಕ್ಕಿಂತ ಹೆಚ್ಚು ಮತಗಳನ್ನು ಪಡೆಯುವ ಮೂಲಕ ರಾಜ್ಯ ಪರಿಷತ್ ಚುನಾವಣೆಯಲ್ಲಿ ಜಯಶಾಲಿಯಾಗಿದ್ದಾರೆ. 255 ಮತಗಳ ಅಂತರದಲ್ಲಿ ಅಮೋಘವಾಗಿ ಗೆದ್ದು ಬೀಗಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ನೌಕರರ ಅಹವಾಲು,ಬೇಡಿಕೆಗಳ ಈಡೇರಿಕೆ ಬಗ್ಗೆ ಶ್ರಮವಹಿಸಿ ಕೆಲಸ ಮಾಡುತ್ತೇನೆ, ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸವನ್ನು ಹಾಗೂ ಅವರ ಸಮಸ್ಯೆಗಳಿಗೆ ಈಡೇರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ಇನ್ನು ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಧ್ಯಕ್ಷರಾದಂತ ಷಡಕ್ಷರಿ ಅವರ ಒಂದು ತಂಡದೋಪಾದಿಯಲ್ಲಿ ನೌಕರರ ಬಹುದಿನಗಳ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟು, ಹೋರಾಟಗಳನ್ನು ಮಾಡುವ ಮೂಲಕ ಬೇಡಿಕೆ ಈಡೇರಿಸುವ ಕೆಲಸ ಮಾಡಲು ಇಚ್ಛಿಸುತ್ತೇವೆ ಎಂದರು.
ಇದೆ ವೇಳೆ ರಾಜ್ಯ ಸರ್ಕಾರಿ ನೌಕರರ ನಿಕಟಪೂರ್ವ ಅಧ್ಯಕ್ಷರಾದ ಎಸ್ ಷಡಕ್ಷರಿ ಅವರು ಅಬಕಾರಿ ಇಲಾಖೆಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಭರತೇಶ್ ಕುಮಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ನಂತರ ಷಡಕ್ಷರಿ ಮಾತನಾಡಿ, ನಮ್ಮ ಜೊತೆ ನೀವು ಕೈಜೋಡಿಸಿದ್ದೆ ಆದರೆ ಇಲಾಖೆಯಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ. ಒಂದು ಟೀಮ್ ರೀತಿ ಕೆಲಸ ಮಾಡಿಕೊಂಡು ಹೋಗಬೇಕಾಗುತ್ತದೆ ಎಂದರು.
ರಾಜ್ಯ ಪರಿಷತ್ ಚುನಾವಣೆಯಲ್ಲಿ ಗೆದ್ದಿರುವ ಭರತೇಶ್ ಕುಮಾರ್ ಅವರಿಗೆ ಬೃಹತ್ ಹೂವಿನ ಮಾಲೆಯನ್ನು ಹಾಕುವ ಮೂಲಕ ಶುಭಾಶಯ ಕೋರಲಾಯಿತು. ಅಲ್ಲದೆ ಅಭಿಮಾನಿಗಳು, ಇಲಾಖೆಯ ಸಿಬ್ಬಂದಿ ವರ್ಗ ಜೈ ಕಾರ ಹಾಕಿ ವಿಶೇಷ ರೀತಿಯಲ್ಲಿ ಅಭಿನಂದಿಸಲಾಯಿತು.