ಬೆಂಗಳೂರು: CSR ಉಪಕ್ರಮದ ಭಾಗವಾಗಿ ಏಸರ್ ಇಂಡಿಯಾ ಸಂಸ್ಥೆ ಬೆಂಗಳೂರಿನ ರಾಜಾಜಿನಗರದಲ್ಲಿ ಕೇರ್ For Life Dayalisys ಕೇಂದ್ರವನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ಡಯಾಲಿಸಿಸ್ ತೆರೆಯುವ ಮೂಲಕ ಬದ ರೋಗಿಗಳಿಗೆ ಆಸರೆಯಾಗಿದ್ದಾರೆ ಎಂದು ಏಸರ್ ಇಂಡಿಯಾ ಅಧ್ಯಕ್ಷ ಹಾಗು ಎಂಡಿ ಹರೀಶ್ ಕೊಹ್ಲಿ ತಿಳಿಸಿದರು.
ಏಸರ್ ಇಂಡಿಯಾ ಸಹಭಾಗಿತ್ವದಲ್ಲಿ Care For Life Dayalisys ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅತ್ಯುನ್ನತ ಗುಣಮಟ್ಟದ ಡಯಾಲಿಸಿಸ್ ಆರೈಕೆಯನ್ನು ಅತ್ಯಲ್ಪ ವೆಚ್ಚದಲ್ಲಿ ಒದಗಿಸುವ ಈ ಹೊಸ ಸೌಲಭ್ಯ, ಏಸರ್ ನ ಸಿಎಸ್ ಆರ್ ಉಪಕ್ರಮಗಳ ಮೂಲಕ ಸಮುದಾಯ ಆರೋಗ್ಯ ರಕ್ಷಣೆಯ ಬಗ್ಗೆ ಹೊಂದಿರುವ ಬದ್ಧತೆಯ ಭಾಗವಾಗಿದೆ. ಮೂತ್ರಪಿಂಡದ ಆರೈಕೆಯ ಅಗತ್ಯವಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಕೇಂದ್ರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಜೀವನ ಮತ್ತು ಸಮುದಾಯಗಳ ನಮ್ಮ ಅಚಲವಾದ ಬದ್ಧತೆಗೆ ಸಾಕ್ಷಿಯಾಗಿದೆ. ಕೇರ್ ಫಾರ್ ಲೈಫ್ ಡಯಾಲಿಸಿಸ್ ಸೆಂಟರ್, ಟೀ ಪ್ಲಾಂಟ್ ಡ್ರೈವ್ ಗಳು ಮತ್ತು ಹೀಲ್-ಆನ್-ವೀಲ್ಸ್ನಂತಹ ಯೋಜನೆಗಳ ಮೂಲಕ, ಏಸರ್ ಆರೋಗ್ಯ ರಕ್ಷಣೆಯಲ್ಲಿ ಅಂತರವನ್ನು ಕಡಿಮೆ ಮಾಡಲು ಮತ್ತು ಪರಿಸರ ಮತ್ತು ಸಮಾಜದ ಮೇಲೆ ಶಾಶ್ವತವಾದ ಪರಿಣಾಮವನ್ನು ಸೃಷ್ಟಿಸಲು ಶ್ರಮಿಸುತ್ತದೆ ಎಂದರು.
ಡಿಸ್ಟ್.ರಾಜ್ಯಪಾಲ ಎನ್ ಎಸ್ ಮಹದೇವ್ ಪ್ರಸಾದ್ ಮಾತನಾಡಿ, ರಾಜಾಜಿನಗರ ಕ್ಷೇತ್ರದ ಶಾಸಕರಾದ ಸುರೇಶ್ ಕುಮಾರ್ ಅವರು ರೋಟರಿಯ ಕಾರ್ಯವೈಖರಿ ಮೆಚ್ಚಿ ಸಾಕಷ್ಟು ಅನುದಾನವನ್ನು ನೀಡಿದ್ದಾರೆ, ಅದೇ ರೀತಿ ದೊಮ್ಮಲೂರು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಸುಪ್ರಿಯಾ ಖಂಡ್ರೆ ಅವರ ಸಹಭಾಗಿತ್ವದಲ್ಲಿ 5 ನೂತನ ಡಯಾಲಿಸಿಸ್ ಯಂತ್ರಗಳನ್ನು ಕೇಂದ್ರಕ್ಕೆ ನೀಡಲಾಗಿದೆ ಎಂದರು. ಇದರಿಂದ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತವಾಗಿದ್ದು, ಐಪಿಎಲ್ ಕಾರ್ಡ್ ಹೊಂದಿದವರಿಗೆ ಕೇವಲ 500 ರೂಪಾಯಿಯಲ್ಲಿ ಗುಣಮಟ್ಟದ ಡಯಾಲಿಸಿಸ್ ಮಾಡಲಾಗುತ್ತದೆ ಎಂದರು.
ಕೇವಲ ಬೆಂಗಳೂರು ಮಾತ್ರವಲ್ಲದೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ನಾಯಕನಹತ್ತಿಯಲ್ಲಿನ ಹುಲ್ಲುಗಾವಲು ಪ್ರದೇಶವನ್ನು ನೀರಾವರಿಗೆ 2ರಿಂದ 3 ಎಕರೆ ಜಾಗವನ್ನು ಪರಿವರ್ತನೆ ಮಾಡಕೊಡಲಾಗಿದೆ. ಅದೇ ರೀತಿ ಶ್ರೀರಂಗ ಪಟ್ಟಣದಲ್ಲಿಯೂ ಸಹ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದೆ ಎಂದರು.
ದೂರದ ಪ್ರದೇಶಗಳಲ್ಲಿನ ಬುಡಕಟ್ಟು ಸಮುದಾಯಗಳಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಮೊಬೈಲ್ ಹೆಲ್ತ್ ಕೇರ್ ಉಪಕ್ರಮವಾದ ‘ಹೀಲ್- ಆನ್-ವೀಲ್ಸ್ ಯೋಜನೆಯನ್ನು ಕೂಡ ಏಸರ್ ಜಾರಿಗೊಳಿಸುತ್ತಿದೆ. 25,000+ ವ್ಯಕ್ತಿಗಳು ಈ ಸೇವೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಇದು ವೈದ್ಯರು, ದಾದಿಯರು ಮತ್ತು ಅಗತ್ಯ ಔಷಧಿಗಳನ್ನು ನೇರವಾಗಿ ಅವರ ಮನೆ ಬಾಗಿಲಿಗೇ ತರುತ್ತದೆ; ನಿಯಮಿತ, ಸುಲಭಲಭ್ಯ ಚಿಕಿತ್ಸೆಯನ್ನು ಖಾತ್ರಿಪಡಿಸುತ್ತದೆ. ಏಸರ್ ಇಂಡಿಯಾವು ಯೋಜನೆಗಳು ಮತ್ತು ಮರ ನೆಡುವ ಉಪಕ್ರಮಗಳಿಗೆ ಸಹ ವ್ಯಾಪಕ ಬೆಂಬಲ ನೀಡುತ್ತಿದೆ. ಅಲ್ಲಿ ನೆಟ್ಟ ಮರಗಳು ತಮ್ಮ ಉತ್ಪನ್ನಗಳ ಮೂಲಕ ಗ್ರಾಮೀಣ ಸಮುದಾಯಕ್ಕೆ ಮರಳಿ ಕೊಡುಗೆ ನೀಡುತ್ತವೆ.
ಹೊಸ ಡಯಾಲಿಸಿಸ್ ಕೇಂದ್ರದೊಂದಿಗೆ ಏಸರ್ ಸಂಸ್ಥೆ ಸಮುದಾಯಗಳನ್ನು ಬೆಂಬಲಿಸಲು, ಉನ್ನತಿಕರಿಸಲು ಸಂಪನ್ಮೂಲಗಳನ್ನು ಬಳಸುವ ಬದ್ಧತೆಯನ್ನು ಮುಂದುವರೆಸಿದೆ. ಆರೋಗ್ಯಕರ ಸಮಾಜವನ್ನು ಬೆಳೆಸಲು ಸಹಾಯ ಮಾಡುತ್ತದೆ.
ಅಶ್ವತ್ಥ್ ನಾರಾಯಣ, ಏಸರ್ ಇಂಕ್ ಅಧ್ಯಕ್ಷ ಆಂಡ್ರ್ಯೂ ಹೌ,ಸುಪ್ರಿಯಾ ಖಂದರಿಯ, ಡಿಜಿ ಎನ್ ಎಸ್ ಮಹದೇವ್ ಪ್ರಸಾದ್,ಹರೀಶ್ ಕೊಹ್ಲಿ ಸೇರಿದಂತೆ ಇಂದಿರಾನಗರ ರೊಟೀರಿಯನ್,ಪೀಣ್ಯ ರೋಟರಿನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.