ಬೆಂಗಳೂರು: ದಾಸರಹಳ್ಳಿ ವಲದಲ್ಲಿ 60 ಕಿ.ಮೀ ಉದ್ದದ ಪ್ರಮುಖ ರಸ್ತೆಗಳ ಸೈಡ್ ಡ್ರೈನ್ಗಳನ್ನು 60 ದಿನಗಳ ಕಾಲಾವಧಿಯಲ್ಲಿ ಸ್ವಚ್ಛತೆ ಮಾಡಲು *ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್* ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾಸರಹಳ್ಳಿ ವಲಯದಲ್ಲಿ ಇಂದು ನಡೆದ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ವೇಳೆ ಮಾತನಾಡಿದ ಅವರು, ದಾಸರಹಳ್ಳಿ ವಲದಲ್ಲಿ 60 ಕಿ.ಮೀ ಉದ್ದದ 24 ರಸ್ತೆಗಳು ಪ್ರಮುಖ ರಸ್ತೆಗಳು ಬರಲಿದ್ದು, ಈ ರಸ್ತೆಗಳ ಸೈಡ್ ಡ್ರೈನ್ಗಳಲ್ಲಿ ಸ್ವಚ್ಛತಾ ಕಾರ್ಯವನ್ನು 60 ದಿನಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಯಿತು.
ರಸ್ತೆ ಕತ್ತರಿಸಲು(ಅಗೆಯಲು) ಪಾಲಿಕೆಯಿಂದ ಅನುಮತಿ ಪಡೆಯಬೇಕು:
ಪಾಲಿಕೆ ವ್ಯಾಪ್ತಿಯಲ್ಲಿ ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಇಲಾಖೆಗಳು ಪಾಲಿಕೆಯ ಅನುಮತಿ ಪಡೆಯದೆ ರಸ್ತೆಗಳನ್ನು ಕತ್ತರಿಸುತ್ತಿದ್ದು, ರಸ್ತೆ ಪುನಃಸ್ಥಾಪನೆ ಸರಿಯಾಗಿ ಮಾಡದಿರುವ ಕಾರಣ ರಸ್ತೆಗಳು ಹಾಳಾಗುತ್ತಿವೆ. ಈ ನಿಟ್ಟಿನಲ್ಲಿ ಇನ್ನು ಮುಂದೆ ಆನ್ಲೈನ್ ಮೂಲಕ ಪಾಲಿಕೆಯಿಂದ ಅನುಮತಿ ಪಡೆದು ನಂತರ ರಸ್ತೆ ಕತ್ತರಿಸಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕಾಮಗಾರಿ ನಡೆದಿರುವ ಸ್ಥಳದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್.ಇ.ಡಿ ಬೀದಿ ದೀಪಗಳ ಅಳವಡಿಕೆಗೆ ಹೊಸ ಟೆಂಡರ್:
ಪಾಲಿಕೆ ವ್ಯಾಪ್ತಿಯಲ್ಲಿ ಎಲ್.ಇ.ಡಿ ಬಿದಿ ದೀಪಗಳನ್ನು ಅಳವಡಿಸಲು ಹೊಸದಾಗಿ ಟೆಂಡರ್ ಕರೆಯಲಾಗುತ್ತಿದ್ದು, ಶಿಘ್ರ ಎಲ್ಲಾ ಕಡೆ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸಲಾಗುವುದೆಂದು ತಿಳಿಸಿದರು.
ಸಾರ್ವಜನಿಕರಿಂದ ಬಂದ ಪ್ರಮುಖ ಅಹವಾಲುಗಳ ವಿವರ:
1. ಹೆಚ್.ಎಂ.ಟಿ ಲೇವಟ್ ನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಲು ಮನವಿ.
2. ರಸ್ತೆ ಬದಿ ತ್ಯಾಜ್ಯ ಬಿಸಾಡುತ್ತಿದ್ದು, ಅದನ್ನು ನಿಯಂತ್ರಿಸಲು ಮನವಿ.
3. ಕಮ್ಮಗೊಂಡನಹಳ್ಳಿ ಕೆ.ಜಿ ಹಳ್ಳಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳು ಹೆಚ್ಚಿದ್ದು, ಅದನ್ನು ಮುಚ್ಚಲು ಮನವಿ.
4. ಉದ್ಯಾನವನ ಹಾಗೂ ಜಿಮ್ ಉಪಕರಣಗಳ ಅಳವಡಿಕೆ ಮಾಡಲು ಮನವಿ
5. ಬೀದಿ ದೀಪಗಳನ್ನು ಅಳವಡಿಸಲು ಮನವಿ
6. ನಾಗಸಂದ್ರದ ಸೌಂದರ್ಯ ಬಡಾವಣೆಯಲ್ಲಿ ರಸ್ತೆ ಹಾಗೂ ಡ್ರೈನ್ ಕಾಮಗಾರಿ ಪೂರ್ಣಗೊಳಿಸಿಕೊಡಲು ಮನವಿ
7. ರಾಘವೇಂದ್ರ ಲೇಔಟ್ ರಸ್ತೆ ಅಭಿವೃದ್ಧಿ ಕೆಲಸ ಹಾಗೂ ಸೈಡ್ ಡ್ರೈನ್ಸ್ ಸ್ವಚ್ಛತೆ ಮಾಡಲು ಮನವಿ
8. ಪೀಣ್ಯ 2ನೇ ಹಂತದಲ್ಲಿ ವೈಜ್ಞಾನಿಕ ಹಂಪ್ ಹಾಗೂ ಸಿಸಿ ಕ್ಯಾಮೆರಾ ಹಾಕಿಸಿಕೊಡಲು ಮನವಿ
9. ಆದರ್ಶ ನಗರ ರಸ್ತೆಗಳಿಗೆ ಡಾಂಬರೀಕರಣ ಮಾಡಿಕೊಡಲು ಮನವಿ.
10. ವಿಡಿಯಾ ಸ್ಕೂಲ್ ಬಳಿ ಬಸ್ ತಂಗುದಾಣ ನಿರ್ಮಾಣ ಮಾಡಿಕೊಡಲು ಮನವಿ.
11. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಮನವಿ.
ಈ ವೇಳೆ ವಲಯ ಆಯುಕ್ತರಾದ ಗಿರೀಶ್, ವಲಯ ಜಂಟಿ ಆಯುಕ್ತರಾದ ಪ್ರೀತಮ್ ನಸಲಾಪುರ್, ಮುಖ್ಯ ಅಭಿಯಂತರರಾದ ರವಿ, ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.