ಬೆಂಗಳೂರು: ಕನ್ನಡದ ಮನಸುಗಳು ಜಾಗೃತರಾಗದಿದ್ದರೆ ಕನ್ನಡವನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಕನ್ನಡ ಚಳುವಳಿಯ ನಾಯಕ ಗುರುದೇವ್ ನಾರಾಯಣ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರು ಪ್ರೆಸ್ ಕ್ಲಬ್ ಶನಿವಾರ ಆಯೋಜಿಸಿದ್ದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಂದು ಚಳುವಳಿಗೆ ಸರ್ಕಾರವನ್ನು ತೆಗೆಯುವಂತಹ ಶಕ್ತಿಯಿದೆ , ಕನ್ನಡಪರ ಹೋರಾಟಗಾರರ ಹಿತಾಸಕ್ತಿಯನ್ನು ಕಡೆಗಣಿಸಿ ಕನ್ನಡಿಗರ ಮೇಲೆ ದಬ್ಬಾಳಿಕೆ- ಲಾಠಿ ಪ್ರಹಾರ ಮಾಡಿದ ಗುಂಡೂರಾಯರ ಸರ್ಕಾರ ಅಧಿಕಾರ ಕಳೆದುಕೊಂಡ ನಿದರ್ಶನವನ್ನು ಅವರು ಎಳೆ ಎಳೆಯಾಗಿ ಬಿಡಿಸಿಟ್ಟರು.
ಕನ್ನಡಪರ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಕನ್ನಡದ ಹಿತಕಿಂತಲೂ ಲಾಭ -ನಷ್ಟಗಳನ್ನೇ ಲೆಕ್ಕಾಚಾರ ಹಾಕುತ್ತಿರುವುದು ನಾಡಿನ ದುರಂತವಾಗಿದೆ.
ಕನ್ನಡ ಮಣ್ಣಿನ ಎಲ್ಲ ಪ್ರಯೋಜನಗಳನ್ನು ಪಡೆದುಕೊಂಡು ನಂತರ ಕನ್ನಡವನ್ನೇ ಮರೆತು ವಿದೇಶದಲ್ಲಿ ಬದುಕುವಂತಹ ಮನಸ್ಥಿತಿ ಇತ್ತೀಚಿಗೆ ಹೆಚ್ಚಾಗುತ್ತಿದೆ. ಇದು ಬದಲಾಗದೇ ಹೋದರೆ ಕನ್ನಡಕ್ಕೆ ಮತ್ತಷ್ಟು ಅಪಾಯ ಎದುರಾಗಲಿದೆ ಎಂದು ಹೇಳಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಮಾತನಾಡಿ ಕನ್ನಡ ಉಳಿಸುವ ಮತ್ತು ಬೆಳೆಸುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಮುಂದೆಯೂ ನಡೆಯಬೇಕಾದ ಅನಿವಾರ್ಯತೆ ಇದೆ ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ ಬೇರೆ ರಾಜ್ಯಗಳಲ್ಲಿ ಇಲ್ಲದಂತಹ ಪರಿಸ್ಥಿತಿ ಕರ್ನಾಟಕದಲ್ಲಿದೆ ಈ ಬಗ್ಗೆ ಸರ್ಕಾರಗಳು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆಯಿದೆ. ಎಂದರು.
ಇತಿಹಾಸ ತಜ್ಞ ಹಾಗೂ ಕನ್ನಡ ಚಳವಳಿಗಾರ ಭುವನೇಶ್ ಅವರು ಮಾತನಾಡಿ, ದೂರದ ಜಪಾನ್ ಮತ್ತು ಜರ್ಮನಿಯಲ್ಲಿ ಭಾಷೆಯನ್ನು ಕಲಿಯದಿದ್ದರೆ ಮತ್ತೊಂದು ಅವಧಿಗೆ ಅಲ್ಲಿನ ಸರ್ಕಾರಗಳು ವೀಸಾ ನವೀಕರಣ ಮಾಡುವುದಿಲ್ಲ ಒಂದು ಭಾಷೆ ಉಳಿಸುವಲ್ಲಿ, ಸಂಸ್ಕೃತಿ ಪರಂಪರೆಯನ್ನು ಬೆಳೆಸುವಲ್ಲಿ ದೇಶದ ಆಡಳಿತ ಎಷ್ಟು ಮುಖ್ಯವಾಗಿದೆ ಎಂಬುದನ್ನು ನಾವು ಅವರನ್ನು ನೋಡಿ ಕಲಿಯಬೇಕಾಗಿದೆ ಎಂದು ಒತ್ತಿ ಹೇಳಿದರು.
ಸಾಂಸ್ಕೃತಿಕ ಸಮಿತಿಯ ಸಂಚಾಲಕ ಮಮ್ತಾಜ್ ಅಲೀಮ್ ಮಾತನಾಡಿ ಈ ಹಿಂದೆ ಬಹುವರ್ಷಗಳಿಂದ ನೆರೆ ರಾಜ್ಯಗಳ ಪರಭಾಷಿಕರು ಬೆಂಗಳೂರಿಗೆ ಬಂದು ನೆಲೆಯೂರಿದವರು ಕಾಲಕ್ರಮೇಣ ಕನ್ನಡ ನಾಡು-ನುಡಿ ಕಲಿತು ಸ್ಥಳೀಯ ಭಾಷೆ ಸಂಸ್ಕೃತಿಗೆ ಹೊಂದಿಕೊಂಡರು. ಆದರೆ ಇತ್ತೀಚೆಗೆ ಯುಪಿ,ಬಿಹಾರ ಸೇರಿದಂತೆ ಬೆಂಗಳೂರಿಗೆ ಬರುವ ಉತ್ತರ ಭಾರತೀಯರ ಹಾವಳಿ ವಿಪರೀತವಾಗಿದೆ
ನೇಪಾಳಿಗಳು ಸಹ ಇಲ್ಲಿಗೆ ಬಂದು ನೆಲೆಸಿ,ಬದುಕು ಕಂಡುಕೊಳ್ಳುತ್ತಿದ್ದಾರೆ. ಅವರನ್ನು ನಾಡಿನ ಭಾಷೆ-ಸಂಸ್ಕೃತಿಗೆ ಒಗ್ಗಿಸಬೇಕಾದ್ದು ಒಂದು ಸವಾಲು ಎಂದರು.
ಪ್ರೆಸ್ ಕ್ಲಬ್ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿ ತಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ತದನಂತರ ಎರಡು ಗಂಟೆಗಳ ಕಾಲ ಕನ್ನಡ ಚಿತ್ರಗೀತೆಗಳ ವಾದ್ಯ ಗೋಷ್ಠಿ ಸಭಿಕರಿಗೆ ರಸದೌತಣ ನೀಡಿತು.
“ಕನ್ನಡದ ಮನಸ್ಸುಗಳು ಜಾಗೃತ ರಾಗದಿದ್ದರೆ ಭಾಷೆಗೆ ಅಪಾಯ