ಬೆಂಗಳೂರು : ಹೆಸರಾಂತ ಕಂಸಾಳೆ ಕಲಾವಿದ ಮೈಸೂರು ಕುಮಾರಸ್ವಾಮಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
ಜನಪದ ಕಲಾವಿದರ ಕುಟುಂಬದಲ್ಲೇ ಜನಿಸಿದ್ದ ಕುಮಾರಸ್ವಾಮಿ ಅವರಿಗೆ ಅವರ ತಂದೆಯವರಾದ ಕಲಾವಿದ ಕಂಸಾಳೆ ಮಹದೇವಯ್ಯನವರೇ ಪ್ರೇರಣೆ ಆಗಿದ್ದರು. ಕಂಸಾಳೆಯನ್ನು ತಮ್ಮ ಬದುಕಿನ ಅವಿಭಾಜ್ಯ ಮಾಡಿಕೊಂಡಿದ್ದ ತಂದೆಯವರಂತೆಯೇ ಮಗ ಕುಮಾರಸ್ವಾಮಿ ಅವರೂ ಕಲಾವಿದರ ತಂಡ ಕಟ್ಟಿ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನಗಳನ್ನು ನೀಡಿದ್ದರು ಎಂದು ಸಿದ್ದರಾಮಯ್ಯ ಅವರು ಸ್ಮರಿಸಿದ್ದಾರೆ.
ಜಾನಪದ ಕ್ಷೇತ್ರದಲ್ಲಿ ಕಂಸಾಳೆ ಕುಮಾರಸ್ವಾಮಿ ಅವರ ಹೆಜ್ಜೆ ಗುರುಗಳು ಶಾಶ್ವತವಾಗಿ ಉಳಿಯಲಿವೆ. ದೇವರು ಇವರ ಕುಟುಂಬಕ್ಕೆ ಅಗಲಿಕೆಯನ್ನು ಸಹಿಸುವ ಶಕ್ತಿ ನೀಡಲಿ. ಕುಟುಂಬದ ನೋವಿನಲ್ಲಿ ನಾನೂ ಭಾಗಿ ಆಗಿದ್ದೇನೆ.