ಬೆಂಗಳೂರು: ಶ್ರೀ ಮಡಿವಾಳ ಮಾಚಿ ದೇವರ ಜಯಂತೋತ್ಸವದ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಡಿವಾಳ ಜಾಗೃತಿ ವೇದಿಕೆ ಟ್ರಸ್ಟ್ ನ ಅಧ್ಯಕ್ಷರಾದ ಮಂಜುನಾಥ್ ಆರ್ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೋವಿಂದರಾಜನಗರ ಹಾಗೂ ವಿಜಯನಗರ ಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಶ್ರೀ ಮಡಿವಾಳ ಮಾಚಿ ದೇವರ ಜಯಂತೋತ್ಸವವನ್ನು ಪ್ರತಿ ವರ್ಷ ಸರ್ಕಾರ ಆಚರಿಸಿಕೊಂಡು ಬಂದಿದ್ದು, ಸ್ವಾಗತ ಮಾಡುತ್ತಾ ಈ ವರ್ಷ ವಿಶೇಷವಾಗಿ ಟ್ರಸ್ಟ್ ನಿಂದ ಗುರು ಹಿರಿಯರ ಮಾರ್ಗದರ್ಶನದಲ್ಲಿ ನಮ್ಮ ಸಮಾಜದ ಬಂಧುಗಳ ಉಚಿತವಾಗಿ ವಧುವರರ ವಿವಾಹವನ್ನು ಏರ್ಪಡಿಸಲಾಗಿದೆ.
ಸಮುದಾಯದಿಂದ ವರ್ಷದ ಉದ್ದಕ್ಕೂ ಸಮಾಜ ಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತದೆ ಅದರಲ್ಲಿ ವಿದ್ಯಾರ್ಥಿ ವೇತನ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಹಾಸ್ಟೆಲ್ ಸೌಲಭ್ಯ, ಕಡು ಬಡವರಿಗೆ ಆರ್ಥಿಕ ಸಹಾಯ, ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ, ಇತರೆ ಸಮುದಾಯದಂತೆ ನಮ್ಮ ಸಮಾಜದ ಜನರು ಎಲ್ಲಾ ಕೇತ್ರದಲ್ಲಿ ಮುಂದೆ ಬರಲಿ ಎಂಬ ದೃಷ್ಟಿಯಿಂದ ಈ ಭಾರಿ ಸಮಾಜದ ಬಡ, ಮಧ್ಯಮದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉಚಿತ ಸಾಮೂಹಿಕ ವಿವಾಹದ ನಿಯಮಾವಳಿಗಳು:
ದಿನಾಂಕ: 14.04 2025 ರಂದು ಆದಿಚುಂಚನಗಿರಿ ಸಮುದಾಯ ಭವನ. ವಿಜಯನಗರದಲ್ಲಿ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ವಧುವಿಗೆ ಮಾಂಗಲ್ಯ,ಮದುವೆ ಬಟ್ಟೆ,ಪಾದರಕ್ಷೆ, ಬಳೆ, ವರನಿಗೆ ಗಡಿಯಾರ, ಮದುವೆ ಬಟ್ಟೆ, ಚಪ್ಪಲಿ, ಕೊಡಲಿದ್ದೇವೆ. ಮದುವೆ ಮಾಡಿಕೊಳ್ಳಲು ಕಾರ್ಯಕ್ರಮಕ್ಕೆ ಬರುವವರು, ನೋಂದಾವಣೆ ಮಾಡುವಾಗ ವರನಿಗೆ 21 ವರ್ಷ, ವಧುವಿಗೆ 18 ವರ್ಷ ಕಡ್ಡಾಯವಾಗಿ ಆಗಿರಬೇಕು, ಅದಕ್ಕೆ ಸಂಬಂಧಪಟ್ಟ ಗ್ರಾಮಪಂಚಾಯತ್ ನಿಂದ ಪತ್ರವನ್ನು ನೀಡುವುದು ಅಗತ್ಯವಾಗಿದೆ.
ರಾಜ್ಯ ಮಡಿವಾಳ ಸಂಘದ ಅಧ್ಯಕ್ಷರಾದ ನಂಜಪ್ಪ ಮಾತನಾಡಿ, ರಾಜ್ಯ ಸಂಘ ಹಾಗು ಜಾಗೃತಿ ವೇದಿಕೆ, ಟ್ರಸ್ಟ್ ನಿಂದ ಕೂಡಿಕೊಂಡು ವಿಶೇಷ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಲಾಗುತ್ತಿದ್ದು, ವರ್ಷದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ, ಬೆಂಗಳೂರಿನಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿರಲಿಲ್ಲ ಬಳ್ಳಾರಿಯ ಜಿಲ್ಲಾ ಮಟ್ಟದಲ್ಲಿ ಬೃಹತ್ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುತ್ತಿದ್ದರು, ಈ ಭಾರಿ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ, ಬಳ್ಳಾರಿಯಲ್ಲಿ ನಡೆಯುವ ಕಾರ್ಯವನ್ನು ಬೆಂಗಳೂರಿಗೆ ಕಳುಹಿಸಿ ಎಂದು ಜಿಲ್ಲಾ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ನಾವು 25 ಜೋಡಿಗಳು ಬರುತ್ತಾರೆ ಎನ್ನುವ ನಿರೀಕ್ಷೆ ಇದೆ, ಅದಕ್ಕಿಂತ ಹೆಚ್ಚಿನದಾಗಿ ಎಸ್ಟು ಬೇಕಾದರೂ ಬಂದರು ಸಂತೋಷ ಎಂದರು. ಎಲ್ಲರಿಗೂ ನಿಯಮಗಳು ಅನ್ವಯವಾಗುತ್ತವೆ, ಅದನ್ನು ಮೀರಿ ನಡೆದುಕೊಳ್ಳುವಂತಿಲ್ಲ, ಅದಕ್ಕೆ ಸಂಘದಿಂದ ಪ್ರತ್ಯೇಕ ಕಮಿಟಿ ಮಾಡಲಾಗಿದ್ದು, ತಾಲುಕು, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಕಳುಹಿಸಿ ಕೊಡಲಾಗುತ್ತದೆ ಎಂದರು.
ಕಾರ್ಯಕ್ರಮಕ್ಕೆ ಗಣ್ಯರು ಯಾರು?
ಬೆಂಗಳೂರು ಇಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿ ಶ್ರೀಕ್ಷೇತ್ರ ಆದಿಚುಂಜನಗಿರಿ ಮಠ, ಸಮಾಜದ ಸ್ವಾಮೀಜಿಗಳಾದ, ಶ್ರೀ ಮುಕ್ತಾನಂದ ಸ್ವಾಮೀಜಿ ಮೂಡಬಿದಿರೆ, ಶ್ರೀ ಬಸವ ಮಾಚಿ ದೇವ ಸ್ವಾಮೀಜಿ ಚಿತ್ರದುರ್ಗ. ಮುಖ್ಯ ಅತಿಥಿಯಾಗಿ ವಿ.ಸೋಮಣ್ಣ ರವರು ಕೇಂದ್ರ ರೈಲ್ವೆ ಖಾತೆ ಸಚಿವರು ಹಾಗೂ ಸಮಾಜದ ಮುಖಂಡರುಗಳು ಸ್ಥಳೀಯ ಮುಖಂಡರುಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ಉಚಿತ ಸಾಮೂಹಿಕ ವಿವಾಹದ ಸದುಪಯೋಗವನ್ನು ಪಡೆಯಲು ಈ ಕೆಳಗೆ ತಿಳಿಸಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬೇಕಾಗಿ ವಿನಂತಿ.
ಶ್ರೀ ನಂಜಪ್ಪ, ರಾಜ್ಯ ಮಡಿವಾಳ ಸಂಘದ ಅಧ್ಯಕ್ಷರು. ಮೊ: 7892217442
ಶ್ರೀ ಪ್ರಕಾಶ್, ಪ್ರಧಾನ ಕಾರ್ಯದರ್ಶಿ, ಮೊ: 9242882872
ಶ್ರೀ ವೆಂಕಟರಾಮು, ಕಾರ್ಯಾಧ್ಯಕ್ಷರು, ಮೊ: 9611989147
ಶ್ರೀ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ, ಮೊ: 9945209072
ಶ್ರೀ ಚಂದ್ರಶೇಖರ್. ಸಂಘಟನಾ ಕಾರ್ಯದರ್ಶಿ, ಮೊ: 9886329314
ಶ್ರೀ ಸುರೇಶ್, ಸಂಘಟನಾ ಕಾರ್ಯದರ್ಶಿ, ಮೊ: 7411944196