ಬೆಂಗಳೂರು: ವಿಕಲಚೇತನರಿಗಾಗಿ ಸದಾ ಕಾರ್ಯ ನಿರ್ವಹಿಸುತ್ತಿರುವ ಸಮರ್ಥನಂ ಟ್ರಸ್ಟ್ ಓಪನ್ ಟೆಕ್ಸ್ ಸಹಭಾಗಿತ್ವದಲ್ಲಿ ‘ಸರ್ವರಿಗೂ ಆರೋಗ್ಯ” ಎಂಬ ಉದಾತ್ತ ಉದ್ದೇಶದಿಂದ ಡಿಸೆಂಬರ್ 14ರಂದು ಜಯನಗರದ 3ನೇ ಬ್ಲಾಕ್ ನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 18ನೇ ವಾರ್ಷಿಕ ಬೆಂಗಳೂರು ವಾಕಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಸಮರ್ಥನಮ್ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ಡಾ.ಮಹಾಂತೇಶ್ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬೆಂಗಳೂರು ವಾಕಥಾನ್ ಏಕತೆಯ ಸಂಭ್ರಮಾಚರಣೆಯಾಗಿದೆ ಮತ್ತು ಅರೋಗ್ಯವಾಗಿರಲು ಎಲ್ಲರನ್ನೂ ಪ್ರೇರೇಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ’ ಈ ವಕಥಾನ್ 18ನೇ ವರ್ಷದಾಗಿದ್ದು, ವಿಕಲಚೇತನರಿಗೆ ವಿಶೇಷವಾಗಿ ಆರೋಗ್ಯದ ದೃಷ್ಟಿಯಿಂದ ಪ್ರತಿ ವರ್ಷದ ಕೊನೆಯ ತಿಂಗಳು 2ನೇ ವಾರದಲ್ಲಿ ವಾಕಥಾನ್ ಆಯೋಜನೆ ಮಾಡಲಾಗುತ್ತದೆ. ಇದರಲ್ಲಿ ಕೇವಲ ವಿಕಲ ಚೇತನರೂ ಮಾತ್ರವಲ್ಲದೆ ಸಾರ್ವಜನಿಕರು ಭಾಗವಹಿಸಬಹುದು. ಅದಕ್ಕೆ ನಾಮಿನಲ್ ನೋಂದಣಿ ಶುಲ್ಕ ಇರುತ್ತದೆ ಅದರಲ್ಲಿಯೇ ವಾಕಥಾನ್ ಗೆ ಬೇಕಾದ ಕಿಟ್ ಕೊಡಲಾಗುತ್ತದೆ.
ಪ್ರತಿ ವರ್ಷವೂ ಸಹಾ ಒಂದೊಂದು ಥೀಮ್ ಇಟ್ಟುಕೊಂಡು ವಾಕಥಾನ್ ಮಾಡಲಾಗುತ್ತದೆ ಈ ಭಾರಿ ಸರ್ವರಿಗೂ ಆರೋಗ್ಯ ಕಲ್ಪನೆ ಇಟ್ಟುಕೊಂಡು ಮಾಡಲಾಗುತ್ತಿದ್ದು, ಜಯನಗರದ ಕ್ರೀಡಾಂಗಣದ ಸುತ್ತ 3 ಕಿಮೀ ವಾಕಥಾನ್ ನಡೆಯುತ್ತಿದ್ದು, ಕ್ರೀಡಾಂಗಣದಿಂದ ಪ್ರಾರಂಭವಾಗಿ 3 ಕಿಮೀ ನಾಡಿಗೆ ಮಾಡಿ ಪುನಃ ಪ್ರಾರಂಭವಾದ ಸ್ಥಳದಲ್ಲಿಯೇ ಅಂತ್ಯವಾಗುತ್ತದೆ ಎಂದರು. ಕಾರ್ಯಕ್ರಮಕ್ಕೆ ಬ್ರಾಂಡ್ ಅಂಬಾಸಿಡರ್ ಆದ ನಟ ದಾಲಿ ಧನಂಜಯ ಭಾಗವಹಿಸಲಿದ್ದಾರೆ, ಅದೇ ರೀತಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಶಾಸಕರಾದ ಸಿಕೆ ರಾಮಮೂರ್ತಿ, ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ.
ಈ ಕುರಿತು ಓಪನ್ ಟೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ನಾಗ್ ಪಾಲ್ ಮಾತನಾಡಿ, “ಈ ವಾಕಥಾನ್ ಗೆ ಸಹಭಾಗಿತ್ವ ಒದಗಿಸುವ ಅವಕಾಶ ದೊರಕಿದ್ದು ನಮಗೆ ಸಿಕ್ಕ ಗೌರವವಾಗಿದೆ. ಈ ವಾಕಥಾನ್ ಮೂಲಕ ಸಾರ್ವಜನಿಕರಲ್ಲಿ ಸಕಾರಾತ್ಮಕ ಬದಲಾವಣೆ ಉಂಟುಮಾಡುವ ಗುರಿಯನ್ನು ನಾವು ಹೊಂದಿದ್ದೇವೆ’ ಎಂದು ಹೇಳಿದರು.ಉತ್ತಮ ಜೀವನಶೈಲಿ ಪಾಲಿಸಲು ಪ್ರೇರೇಪಿಸುವ, ಅಂಗವೈಕಲ್ಯದ ಕುರಿತು ಅರಿವು ಮೂಡಿಸುವ ಮತ್ತು ಎಲ್ಲಾ ವಿಕಲಚೇತನರಿಗೆ ಸಮಾನ ಅವಕಾಶ ಒದಗಿಸಬೇಕೆಂದು ಸಾರುವ ಕೆಲಸವನ್ನು ಈ ವಾಕಥಾನ್ ಮೂಲಕ ಮಾಡಲಾಗುತ್ತದೆ.
ಓಪನ್ ಟೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ನಾಗ್ ಪಾಲ್ ಮತ್ತು ಸಮರ್ಥನಂ ಟ್ರಸ್ಟ್ ನ ಸಂಸ್ಥಾಪಕ ಟ್ರಸ್ಟಿ ಮತ್ತು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬೈಂಡ್ ಇನ್ ಇಂಡಿಯಾ (ಸಿಎಬಿಐ) ಅಧ್ಯಕ್ಷರಾದ ಡಾ.ಮಹಾಂತೇಶ್ ಜಿ.ಕಿವಡಸನ್ನವರ್ ವಾಕಥಾನ್ ನ ಅಧಿಕೃತ ಟಿಷರ್ಟ್ ಅನ್ನು ಅನಾವರಣಗೊಳಿಸಿದರು.
ಕ್ಯೂಬರ್ ಲೂಬ್ರಿಕೇಶನ್, ಬ್ಲೂ ಯೋಂಡರ್, ಮೈಕ್ರೋಸಾಫ್ಟ್, ಜಿಕೆಎನ್ ಏರೋಸ್ಪೇಸ್, ಎಫ್ಐಎಸ್, ಸಿಎನ್ಸಿ ಮತ್ತು ಹೈರ್ ರೈಟ್ ಸಂಸ್ಥೆಗಳು ಈ ವಾಕಥಾನ್ ಗೆ ಬೆಂಬಲ ಸೂಚಿಸಿವೆ.