ಬೆಂಗಳೂರು: ಮಹಿಳೆಯರಿಗೆ ಸಂಬಂಧಿಸಿದ ಕಾಯಿಲೆಗಳ ದೂರದೃಷ್ಟಿ ಇಟ್ಟುಕೊಂಡು, ಅವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನೂತನ ಡಾ.ಕಾಮಿನಿ ರಾವ್ ಆಸ್ಪತ್ರೆ ಸ್ಥಾಪಿಸಲಾಗಿದೆ ಎಂದು ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರು,ಪದ್ಮಶ್ರೀ ಪುರಸ್ಕೃತರು,ಶ್ರೀ ರೋಗ ತಜ್ಞೆ ಡಾ.ಕಾಮಿನಿ ಎ ರಾವ್ ತಿಳಿಸಿದರು.
ನಗರದ ಶೇಷಾದ್ರಿಪುರಂ ನ ಕುಮಾರ ಕೃಪ ಪಾರ್ಕ್ ಸಮೀಪದಲ್ಲಿ ಡಾ.ಕಾಮಿನಿ ಎ ರಾವ್ ನೂತನ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿ ಮಾತನಾಡಿ, ಸರಳ ಚಿಕಿತ್ಸೆ ಮೂಲಕ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಹಾಗು ಕಾರ್ಪೊರೇಟ್ ಸಹಭಾಗಿತ್ವದಿಂದ ಹೊರಬಂದು ಆರೋಗ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಸಮಾಜ ಸೇವೆ ಮಾಡುವ ಮೂಲಕ ಹೊಸ ಭಾಷ್ಯ ಬರೆಯುವ ಕೆಲಸವನ್ನು ಮಾಡಲ್ಲಗುತ್ತದೆ.
ಭಾರತದಲ್ಲಿ ಮಹಿಳಾ ಆರೋಗ್ಯ ಕ್ಷೇತ್ರವು ಪ್ರಮುಖ ಬದಲಾವಣೆ ಅನುಭವಿಸಿದ್ದು, ಇದೀಗ IVF ಕ್ಷೇತ್ರವು ಸುಮಾರು USD 95 ಬಿಲಿಯನ್ ಮೌಲ್ಯ ಹೊಂದಿದೆ. ಡಾ. ಕಾಮಿನಿ ರಾವ್ ಆಸ್ಪತ್ರೆ ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಒಂದು ಕುಟುಂಬವಾಗಿ ಮಹಿಳೆಯರ ಆರೋಗ್ಯದಲ್ಲಿ ಮುಂದುವರೆಯುವ ಒಂದು ಚಲ ಹಾಗು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ವಿನೂತನ ಹೆಜ್ಜೆ ಹಾಕಲಾಗುತ್ತದೆ.
ಆಸ್ಪತ್ರೆ ಹೊಂದಿರುವ ದೃಷ್ಟಿಕೋನ:
ಕಾಮಿನಿ ಕೇರ್ಸ್ ಸಂಸ್ಥೆ ಮೂಲಕ ತಲುಪಲಾಗದ ರೋಗಿಗಳಿಗೆ ಗುಣಮಟ್ಟದ ಸೇವೆ ನೀಡುವುದು, ಎಲ್ಲರಿಗೂ ಸುಲಭ, ಕಡಿಮೆ ಖರ್ಚಿನ ಅನುಗುಣವಾಗಿ ಚಿಕಿತ್ಸೆ ಆಯ್ಕೆ ಒದಗಿಸುವುದು,ಮಹಿಳೆಯರ ಆರೋಗ್ಯದಲ್ಲಿ ಎಲ್ಲಾ ರೀತಿಯಿಂದಲೂ ಮೆನಾರ್ಕ್ನಿಂದ ಮೆನೋಪಾಸ್ ವರೆಗೆ ಹಾಗೂ ಅದಕ್ಕಿಂತ ಮುಂದಿನ ಅಗತ್ಯಗಳನ್ನು ಪೂರೈಸ ಲಾಗುತ್ತದೆ. ರಾವ್ ಅವರ ಪಯಣವನ್ನು ಮುಂದಿನ ಪೀಳಿಗೆಗಳಿಗೆ ಮುಂದುವರೆಸುವ ಗುರಿ ಹೊಂದಲಾಗಿದೆ ಎಂದರು.
ಮಹಿಳೆಯರಿಗೆ ಫಲವತ್ತತೆ ಬಗ್ಗೆ ಸಾಕಷ್ಟು ಅಧ್ಯಯನವನ್ನು ದೂರದ ಅಮೆರಿಕದಲ್ಲಿ ಮಾಡಿ ಸಾಕಷ್ಟು ತರಬೇತಿ ಪೂರ್ಣಗೊಳಿಸಿದ್ದಾರೆ. ಮಹಿಳಾ ಆರೋಗ್ಯ ಕ್ಷೇತ್ರದಲ್ಲಿ 40 ಕ್ಕಿಂತ ಹೆಚ್ಚು ಕಾಲ ಅನುಭವವನ್ನು ಹೊಂದಿದ್ದಾರೆ. ಮಹಿಳಾ ಆರೋಗ್ಯ ಮತ್ತು reproductive Medicin ನಲ್ಲಿ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಆಸ್ಪತ್ರೆಯಲ್ಲಿ ಉದ್ಯೋಗ ನೀಡುವ, ಸಮಾಜಕ್ಕೆ ಸಂಸ್ಥೆಯಿಂದ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರಲಾಗುತ್ತದೆ.
ಬಂಜೆತನಕ್ಕೆ ಕಾರಣಗಳು ಪರಿಹಾರೋಪಾಯಗಳು:
ಮಹಿಳೆಯರ ಬಂಜೆತನಕ್ಕೆ ಪ್ರಮುಖವಾಗಿ ಸರಿಯಾದ ಜೀವನ ಕ್ರಮ ಇಲ್ಲದಿರುವುದು, ಜಂಕ್ ಆಹಾರ ಹೆಚ್ಚು ಬಳಕೆ ಮಾಡುವುದು, ಮಾನಸಿಕವಾಗಿ ಒತ್ತಡ, ಕೆಲವೊಂದು ವಂಶವಾಹಿ ತೊಂದರೆ ಕಂಡುಬರುತ್ತವೆ. ಪರಿಹಾರಗಳು ಎಂದರೆ ಮೊದಲು ನುರಿತ ಮಹಿಳಾ ರೋಗ ತಜ್ಞರ ಬಳಿ ತಪಾಸಣೆ ಮಾಡಿಕೊಳ್ಳುವುದು ಮುಖ್ಯ, ಅದರಲ್ಲಿ ತೊಂದರೆ ಕಂಡುಬಂದರೆ ಕಾಯಿಲೆಯನ್ನು ಗುರುತಿಸಬೇಕು, ತದ ನಂತರ ಚಿಕಿತ್ಸಾ ವಿಧಾನವನ್ನು ಮಾಡಬೇಕು, ಅದರ ಜೊತೆಗೆ ರೋಗಿಗಳಿಗೆ ಸಾಂತ್ವಾನ, ಆಪ್ತ ಸಮಾಲೋಚನೆ ಮಾಡುವುದು ಬಹಳ ಮುಖ್ಯ ಎಂದರು. ಮಹಿಳೆಯರು ಅಂಡಾಣು ಬಗ್ಗೆ ತಿಳಿಯಬೇಕು, ನೊಂದಿರುವವರಿಗೆ ಸಮಾಧಾನ ಮಾಡಿ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಶುದ್ಧವಾದ ತರಕಾರಿ, ಹಣ್ಣು ಹಂಪಲು, ನೀರು, ಕಾಲ ಕಾಲಕ್ಕೆ ಆಹಾರ ಪದಾರ್ಥ ಸೇವನೆ ಜೀವನ ಕ್ರಮದ ತಿಳಿಯಬೇಕು.
ಸಂಸ್ಥೆಯ ಸಹ ಸಂಸ್ಥಾಪಕರಾದ ಪೂಜಾ ಸಿದ್ಧಾರ್ಥ್ ರಾವ್ ಮಾತನಾಡಿ, ಸಮಾಜಕ್ಕೆ ಆರೋಗ್ಯದಲ್ಲಿ ಸೇವೆ ಮಾಡುವ ಹಿನ್ನೆಲೆ ಯಾವ ಸಂಘ ಸಂಸ್ಥೆಗಳ, ಕಾರ್ಪೊರೇಟ್ ಕಂಪನಿ ಜೊತೆ ಮೊದಲು ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ತದನಂತರ ಅಲ್ಲಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಕಾಮಿನಿ ರಾವ್ ಹಾಗು ಕುಟುಂಬ ವರ್ಗದವರು ಸಹಭಾಗಿತ್ವದಲ್ಲಿ ಆಸ್ಪತ್ರೆ ನಡೆಸಲು ತೀರ್ಮಾನಿಸಿ ನಡೆಸಲಾಗುತ್ತಿದೆ. ಬಡವರಿಗೆ ಕೈಲಾದ ಮಟ್ಟಿಗೆ ಸಹಕಾರ ಮಾಡಲಾಗುತ್ತದೆ, ಕಂಪನಿಗಳ ವಿಮೆ ಸೌಲಭ್ಯ ಇದೆ. ಅದೇ ರೀತಿ ಮುಂದಿನ ದಿನಗಳಲ್ಲಿ CSR ನೇತೃತ್ವದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತದೆ ಎಂದರು.
ರೋಗಿಗಳಿಗೆ ಚಿಕಿತ್ಸೆ ವಿಧಾನಗಳ ಬಗ್ಗೆ ತಿಳಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಣಬೆಗಳಂತೆಯೇ IVF ಕೇಂದ್ರಗಳು ತಲೆ ಎತ್ತಿವೆ, ಸಾರ್ವಜನಿಕರು ಜಾಗೃತರಾಗಿ ಪರಿಶೀಲನೆ ನಡೆಸಿ ದುಡುಕುವ ಕೆಲಸ ಮಾಡುತ್ತಾರೆ ಎಂದರು.
ನೂತನ ಆಸ್ಪತ್ರೆ ಉದ್ಘಾಟನೆಯಲ್ಲಿ ಸಂಸ್ಥೆಯ ಹಿರಿಯ ಉಪ ನಿರ್ದೇಶಕರು, ಮಹಿಳೆಯರ ರೋಗದ ಹಿರಿಯ ತಜ್ಞರಾದ ಡಾ.ದಿಲೀಪ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.