ಬೆಂಗಳೂರು: ನಾತ್ಯಾಂಜಲಿ ಕಲಾ ಸಂಘಮಕ್ಕೇ 13 ವರ್ಷ ತುಂಬಿದ ಹಿನ್ನೆಲೆ ಮಕ್ಕಳಿಂದ ವಿಶೇಷ ಭರತ ನಾಟ್ಯ ನೃತ್ಯ ಪ್ರದರ್ಶನ ಮಾಡಲಾಯಿತು. ಬೆಂಗಳೂರಿನ ಟೌನ್ ಹಾಲ್ ನಲ್ಲಿರುವ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಹಮ್ಮಿಕೊಂಡಿದ್ದ ಭರತನಾಟ್ಯ ನೃತ್ಯ ಪ್ರದರ್ಶನ ಬಹಳ ವಿಶೇಷವಾಗಿತ್ತು.
ಕೊಲ್ಲೂರು ಮೂಕಾಂಬಿಕೆ ಸಂಸ್ಥೆಯ ಟ್ರಸ್ಟಿ ಸುರೇಂದ್ರ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ನಗರ ಪ್ರದೇಶಗಳಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಕೆಲಸ ಮಾಡಲಾಗುತ್ತದೆ, ಅಂತಹ ಕೆಲಸವನ್ನು ನ್ಯಾತ್ಯಾಂಜಲಿ ಕಲಾ ಸಂಘಮ ಸಂಸ್ಥೆ ಮಾಡುತ್ತಿದೆ. , ಕಲೆಯನ್ನು ನಗರ ಪ್ರದೇಶ ಮಕ್ಕಳಿಗೆ ಕಲಿಸುವ ಕೆಲಸವನ್ನು ಮಾಡುತ್ತಿದ್ದಾರೆ, ದೂರದ ಕರಾವಳಿ ಪ್ರಾಂತ್ಯದಿಂದ ಬಂದು ಬೆಂಗಳೂರಿನಲ್ಲಿ ಸಂಗೀತದ ಮೂಲಕ ಮಕ್ಕಳಿಗೆ ಸಂಗೀತ ಕಲಿಸುವ ಕಾಯಕ ಮಹತ್ ಕಾರ್ಯ ಎಂದರು.
ಕನ್ನಡ ಮಕ್ಕಳಿಗೆ ನ್ಯೂಯಾರ್ಕ್ ನಲ್ಲಿ ನೃತ್ಯ ಮಾಡಲು ಅವಕಾಶ ಕೊಡಲಾಗಿದೆ, ಮುಂದಿನ ವರ್ಷ ಕಾನನದ ಕಹಳೆಯನ್ನು ಮೊಳಗಿಸಲು ದೂರದ ನ್ಯೂಯಾರ್ಕ್ ಗೆ ಕರೆದುಕೊಂಡು ಹೋಗಿ ಕನ್ನಡದ ಕಂಪನ್ನು ಬೆಳಗಿಸುವ ಕಾರ್ಯ ಮಾಡಲಾಗುತ್ತದೆ. ಅಮೆರಿಕದಲ್ಲಿ ಸುಮಾರು
50 ರಿಂದ 70 ರಷ್ಟು ಕನ್ನಡ ಸಂಘಗಳು ಇದ್ದಾವೆ. ಕಾನನದ ಸಂಘನೆಗಳನ್ನು ಹಲವಾರು ಕುಟುಂಬಗಳು ಸ್ವೀಕರಿಸುತ್ತವೆ, ಅಲ್ಲಿರುವ ಪೇರೆಂಟ್ಸ್ ಗಳು ನಾಡಿನಲ್ಲಿ ಮಾಡುವುದು ಹಾಗೆ ಮಾಡಲು ಆಗುತ್ತಿಲ್ಲ, ಹೀಗಾಗಿ ನಾಡಿನ ಕಲೆಗಳನ್ನು ದೂರದಲ್ಲಿ ಉಣಬಡಿಸುವ ಕೆಲಸವನ್ನು ಅಲ್ಲಿನ ಕನ್ನಡ ಸಂಘಗಳು ಮಾಡುತ್ತಿವೆ. ಪ್ರತಿ ವರ್ಷ 10 ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ನಾಡಿನಲ್ಲಿರುವ ಖ್ಯಾತ ಕಲಾವಿದರನ್ನು ಗುರುತಿಸಿ ಅವರಿಗೆ ಅವಕಾಶ ಕೊಡುವ ಕೆಲಸ ಮಾಡಲಾಗುತ್ತದೆ ಎಂದರು.
3 ವಿಭಾಗಳನ್ನು ಆರಿಸಿಕೊಂಡು ಮಾಡಿರುವ ಕಾರ್ಯಕ್ರಮವಾಗಿದ್ದು, 1 ತಿಂಗಳಿಂದ ಕಠಿಣ ಶ್ರಮಕ್ಕೆ ಪ್ರತಿಫಲವಾಗಿ ಸಿಕ್ಕಿದೆ, ಮಕ್ಕಳು ಸಹಾ ಶ್ರದ್ಧೆ, ತಾಳ್ಮೆ,ಸಹನೆಯಿಂದ ಭಾರತ ನಾಟ್ಯದ ಎಲ್ಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪುಟಾಣಿಗಳಿಂದ ಹಿಡಿದು ವಯಸ್ಕರು ಸಹಾ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೈದ್ರಾಬಾದ್ ನಲ್ಲಿ ರಾಷ್ಟ್ರಮಟ್ಟದಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಕೆಕೆಆರ್ ಪ್ರಶಸ್ತಿ ಸಿಕ್ಕಿರುವುದು ನಮ್ಮ ಹೆಮ್ಮೆ, ಅಲ್ಲಿ ಬಹುತೇಕವಾಗಿ ಕೂಚುಪುಡಿ ಹೆಚ್ಚಿಸುವ ಕಾರಣ ನಮ್ಮ ಕಾಲೇಜ್ ಎಷ್ಟರ ಮಟ್ಟಕ್ಕೆ ಗೌರವ ಸಿಗುತ್ತದೆ ಎಂಬುದು ತಿಳಿದಿರಲಿಲ್ಲ, ಮಕ್ಕಳ ನೃತ್ಯ ಮೆಚ್ಚಿ ಪ್ರಶಸ್ತಿ ಲಭಿಸಿದೆ. ನನ್ನ ಎಲ್ಲಾ ಕಾರ್ಯಕ್ರಮಗಳಿಗೆ ಸಹೋದರ ಸಹಕಾರ ನೀಡುತ್ತಾರೆ, ನಮ್ಮ ಮನೆಯಲ್ಲಿ ಒಂದು ರೀತಿಯಲ್ಲಿ ಎಲ್ಲರೂ ಕಲಾವಿದರು, ಕಲಾ ಪೋಷಣೆಯನ್ನು ಬೆಳೆಸುತ್ತಾರೆ ಎಂದರೆ ತಪ್ಪಾಗಲಾರದು.
ತೋಡಿಯಂ, ಮೋಶಿಕ ವಾಹನ, ಹರಿ ಕುಣಿಗ, ನಾಟ್ಯ ಗಣಪತಿ, ಸರಸ್ವತಿ ಕೌತು, ಸೋಲೋ ನೃತ್ಯದಲ್ಲಿ ಕೀರ್ತಿ ಪ್ರಸಾದ್,ಪ್ರಭು ಗಣಪತಿ, ಗೋವರ್ಧನ ಗುರಿದರ, ಕುಣಿದಾಡಿ ರಂಗ ಕುಣಿದಾಡಿ, ಸೋಲೋ ನೃತ್ಯದಲ್ಲಿ ಡಾ.ಮೇಘ, ಸ್ವಾಗತಂ ಕೃಷ್ಣ,ಆನಂದ ನಾಟ್ಯ ಗಣಪತಿ, ಜಯೇ ಜಾನಕಿ ರಮಣ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮೋಘವಾಗಿ ಪ್ರದರ್ಶನವನ್ನು ನೀಡಿದರು.
ಭರತನಾಟ್ಯ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅದೇ ರೀತಿ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಸತ್ಕರಿಸಿ ಗೌರವಿಸುವ ಕೆಲಸ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಜಿತ್ ಶೆಟ್ಟಿ ಭಾರತ ನಾಟ್ಯ ಗುರು ಅಮೃತ, ಹೇಮಂತ್ ಶೆಟ್ಟಿ , ಗುರು ಅಜಿತ್ ಭಾಸ್ಕರ್ ಶೆಟ್ಟಿ, ಸಂಸ್ಥೆಯ ಅಧ್ಯಕ್ಷರು ರತ್ನ ಪ್ರಕಾಶ್, ಸಂಗೀತ ಗುರುಗಳು ಭಾಗವಗಿದ್ದರು.