ಮಲಯಾಳಂ ಸಿನಿಮಾ ಇಂಡಿಸ್ಟ್ರಿಸ್ ನಲ್ಲಿ ಲೈಂಗಿಕ ದೌರ್ಜನ್ಯದ ಘಾಟು ಸಖತ್ ಸದ್ದು ಮಾಡಿತ್ತು, ಅದು ಮಾಸುವ ಮುನ್ನವೇ ಮಲಯಾಳಂ ನಟರ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಪಾರ್ವತಿ ನಾಯರ್ ಅವೆಲ್ಲವನ್ನೂ ಬದಿಗೊತ್ತಿ ಪುನಃ ಸ್ಯಾಂಡಲ್ ವುಡ್ ನಲ್ಲಿ ಸಖತ್ ಕಾಮಿಡಿ ಯಾಗಿರುವ ಮಿ. ರಾಣಿ ಸಿನಿಮಾ ಬೆಳ್ಳಿ ತೆರೆಮೇಲೆ ಬರಲು ಸಿದ್ಧವಾಗಿದೆ.
ಪಾರ್ವತಿ ನಾಯರ್ ಮಲಯಾಳಿ, ತಮಿಳ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಸಾಕಷ್ಟು ಸಿನಿಮಾ ಮಾಡಿರುವ ಅನುಭವಿದೆ. ಹೀಗಾಗಿ ಮಿ. ರಾಣಿ ಸಮಾಜಕ್ಕೆ ಒಂದು ಸಂದೇಶ ಕೊಡುವ ಸಲುವಾಗಿ ಕಾಮಿಡಿ ಮೂಲಕ ಹೊಸ ಆಯಾಮ ತಂದುಕೊಟ್ಟಿದೆ. ದೊಡ್ಡ ದೊಡ್ಡ ಪರದೆ ಹಂಚಿಕೊಂಡಿರುವ ನಾಯರ್ 10 ವರ್ಷಗಳ ನಂತರ ಕನ್ನಡ ಸಿನಿ ಜಗತ್ತಿಗೆ ಮಿ.ರಾಣಿ ಮೂಲಕ ಬಂದಿರುವುದು ಸಿನಿ ಪ್ರಿಯರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಪಾರ್ವತಿ ನಾಯರ್ ಯಾರು?
ಅಬು ಧಾಬಿಯಲ್ಲಿ ಮಲಯಾಳಂ ಕುಟುಂಬವೊಂದರಲ್ಲಿ ಜನಿಸಿದ ಪಾರ್ವತಿ ನಾಯರ್, ಮೊದಲು ಸಾಫ್ಟವೇರ್ ಉದ್ಯೋಗಿಯಾಗಿದ್ದರು, ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದು ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಕನ್ನಡದ ವಾಸ್ಕೋಡಿಗಾಮ ಚಿತ್ರದಲ್ಲಿ ಪಾರ್ವತಿ ನಾಯರ್ ನಟಿಸಿದ್ದಾರೆ. ಕನ್ನಡಲ್ಲಿ ಒಟ್ಟು 3 ಸಿನಿಮಾಗಳನ್ನು ಮಾಡಿದ್ದಾರೆ. ನಾಡಿನ ಪರಿಚಯನ್ಸ್ ಇದ್ದು, ಇದೀಗ ಮಿ.ರಾಣಿ ಸಿನಿಮಾ ಹೊಸ ಸಂಚಲನ ಸೃಷ್ಟಿಸಲು ಮುಂದಾಗಿದೆ.
ಪಾರ್ವತಿ ನಾಯರ್ ಎಲ್ಲಾ ತರಹದ ಬ್ಯಾನರ್ ನ ಅಡಿಯಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಸಿನಿಮಾ ಚಿತ್ರೀಕರಣವನ್ನು ಬೆಂಗಳೂರು, ಮೈಸೂರ್ ಹಾಗು ಸುತ್ತಲಿನ ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಮುಕ್ತಾಯವಾಗಿದೆ, ಮಾಧ್ಯಮದವರ ಜೊತೆ ಕೆಲ ವಿಚಾರ ಹಂಚಿಕೊಂಡರು. 10 ವರ್ಷಗಳಿಂದ ಸಾಕಷ್ಟು ತಮಿಳು, ಮಲಯಾಳಿ ಸಿನಿಮಾದಲ್ಲಿ ಬಿಜಿಯಾಗಿದ್ದ ಕಾರಣ ಕನ್ನಡದಲ್ಲಿ ನಟಿಸಲು ಆಗಲಿಲ್ಲ, ಇದೀಗ ಕಾಲ ಕೂಡಿಬಂದಿದೆ, ಈಗಾಗಲೇ ನಾನು ಸೀರಿಯಸ್, ದುಃಖ, ಸಿನಿಮಾಗಳಲ್ಲಿ ಸಾಕಷ್ಟು ಕಾಲ್ ಶೀಟ್ ಗಳು ಇದ್ದವು, ಇದ್ದೀಗ ನಾನು ಫನ್ನಿ, ಕಾಮಿಡಿ ಸಿನಿಮಾ ಮಾಡುವ ಬಯಕೆ ಇತ್ತು, ಮಿ.ರಾಣಿ ಚಿತ್ರದ ನಿರ್ದೇಶಕರು ಅವಕಾಶ ಮಾಡಿಕೊಡಲಾಗಿದೆ. ಮಿ.ರಾಣಿಗೂ ಸಹ 3 ಕೋಟಿ ರೂಪಾಯಿಯಷ್ಟು ಸರಾಸರಿ ಬಜೆಟ್ ಆಗಿದೆ ಎಂದು ಅವರೇ ಹೇಳಿದ್ರು.
ಈಗಾಗಲೇ ಸಾಕಷ್ಟು ಸ್ಯಾಡ್ ಸಿನಿಮಾಗಳನ್ನು ಮಾಡಿ ಬೋರು ಆಗಿತ್ತು, ಕಾಮಿಡಿ ಸಿನಿಮಾ ಮಾಡುವ ಅವಕಾಶ ನನಗೆ ಸಿಕ್ಕಿರುವುದು ಸಂತೋಷವಾಗಿದೆ. ಸಿನಿಮಾದ ಸ್ಕ್ರಿಪ್ಟ್, ಸಾಂಗ್ ಲಿರಿಕ್ಸ್,ಟ್ರೈಲರ್ ಎಲ್ಲವೂ ಕಾಮಿಡಿಗೆ ಹೇಳಿ ಮಾಡಿಸಿದ್ದಾಗಿದೆ. ಇಡೀ ಸಿನಿಮಾ ನೋಡುವಾಗಲೆಲ್ಲ ನಗುವೇ ತುಂಬಿರುತ್ತದೆ. ಸಿನಿಮಾಗಳಲ್ಲಿ ಎಲ್ಲಾ ಪಾತ್ರಗಳನ್ನು ಮಾಡಿದ್ದೇನೆ, ಆದರೆ ಕನ್ನಡದಲ್ಲಿ ಫನ್ ಆಗಿ ನಟಿಸುವ ಅವಕಾಶ ಸಿಕ್ಕಿದೆ ನನಗೆ ಬಹಳ ಸಂತೋಷವಾಗಿದೆ ಎಂದರು.
ಕನ್ನಡಲ್ಲಿ ವಾಸ್ಕೋಡಿಗಾಮ ಚಿತ್ರ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ, ಅದರಲ್ಲೂ ನನಗೆ ವೈಯಕ್ತಿಕವಾಗಿ ಹೆಚ್ಚು ಕುಶಿ ತಂದುಕೊಟ್ಟಿದೆ. ಕನ್ನಡ ಸಿನಿಮಾ ಇಂಡಸ್ಟ್ರೀಸ್ ನಲ್ಲಿ ನಾನು ಬಹಳ ಲೀಲಾಜಾಲವಾಗಿ ಕೆಲಸ ಮಾಡುತ್ತೇನೆ, ಇಲ್ಲಿನ ವಿಷಯ,ನಿರ್ದೇಶನ, ಸ್ಕ್ರಿಪ್ಟ್ ಎಲ್ಲವೂ ಇಷ್ಟವಾಗಿದೆ.
ಮಿ.ರಾಣಿ ಸಿನಿಮಾದಲ್ಲಿ ಬಹಳ ಮುಖ್ಯವಾಗಿ ಮನೋರಂಜನೆಯದಾಗಿದೆ.ಒಬ್ಬ ಸಿನಿಮಾ ನಟನಾಗಲು ಹೇಗೆಲ್ಲಾ ಕಷ್ಟ ಪಡುತ್ತಾನೆ, ಪೋಷಕರಿಂದ, ಅದಕ್ಕೆ ಮನೆಯವ್ರು ಹೇಗೆಲ್ಲಾ ಸಾಥ್ ನೀಡುತ್ತಾರೆ ಎಂಬುದರ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಒಂದು ರೀತಿಯಲ್ಲಿ ನಿಜ ಜೀವನದಲ್ಲಿ ನಡೆಯುವ ಕಥೆಯಾಗಿದೆ. ಕೇವಲ ಸಿನಿಮಾದಲ್ಲಿ ಅಲ್ಲದೆ ದಿನಿ ನಿತ್ಯದ ಜೀವನದಲ್ಲಿ ಚಾಲೆಂಜ್ ಆಗಿ ಬದುಕುವ ಕಲೆ ಪ್ರತಿಯೊಬ್ಬರಿಗೂ ಇರುತ್ತದೆ, ಅದು ನನಗೂ ಇದೆ, ಸಿನಿಮಾದಲ್ಲೂ ಇರುತ್ತದೆ. ಜನರಿಗೆ ಅರ್ಥ,ಇಷ್ಟವಾಗುವ ಸಿನಿಮಾಗಳನ್ನು ಮಾಡಿದರೆ ಉತ್ತಮ, ನಾನು ಯಾವ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ, ಸಿನಿಮಾದಲ್ಲಿ ಪ್ರತಿನಿತ್ಯ ಚಾಲೆಂಜ್ ಇದ್ದೆ ಇರುತ್ತದೆ ಅದನ್ನು ಎದುರಿಸಿಕೊಂಡು ಮುನ್ನಡೆಯಬೇಕು.
ಸಿನಿಮಾದಲ್ಲಿ ನಟನೆಯಲ್ಲಿ ಮೊದಲು ಹಣಗಳಿಸುವ ವ್ಯಾಮೋಹ ಬಂದರೆ ಮುಂದಿನ ದಿನಗಳಲ್ಲಿ ನಿರೀಕ್ಷೆಗಳನ್ನು ಮುಟ್ಟಲು ಸಾಧ್ಯವಾಗುವುದಿಲ್ಲ, ಅದೊಂದು ಫ್ಯಾಷನ್ ಆಗಿ ತಗೆದುಕೊಂಡು ಹೋದರೆ ಮಾತ್ರ ಉತ್ತಮ ಕಲಾವಿದನಾಗಲು ಸಾಧ್ಯ. ನನಗೆ ಕನ್ನಡ ಎಲ್ಲಾ ಕಲಾವಿದರೂ ಇಸ್ಟ, ಕೆಜಿಎಫ್, ಕಾಂತಾರ, ಸಿನಿಮಾಗಳು ಬರಬೇಕು.
ನಾನು ಯಾವುದೇ ಕಾರಣಕ್ಕೂ OTT, web serious ವೇದಿಕೆ ಬಹಳ ಉಪಯೋಗಕಾರಿ,ಆದರೆ ಅಲ್ಲಿಗೆ ಹೋಗುವುದಿಲ್ಲ, ಜನರಿಗೆ ಇಷ್ಟವಾಗುವ, ಕುಳಿದುಕೊಂಡು ಚಿತ್ರಮಂದಿರಗಳಲ್ಲಿ ನೋಡುವ ಬಗ್ಗೆ ಹೆಚ್ಚು ಚಿಂತನೆ.
ಸಧ್ಯ ಕನ್ನಡದಲ್ಲಿ ಮುಂದಿನ ಪ್ರೊಜೆಕ್ಟ್ಗಳು ಯಾವುದು ಇಲ್ಲ, ನನಗೆ ಸದ್ಯ ಇರುವುದು ತಮಿಳಿನಲ್ಲಿ, ಮುಂದೆ ಕನ್ನಡಲ್ಲಿ ಮಾಡುವ ಆಸೆ ಇದೆ. ನೋಡೋಣ
ಮಿ.ರಾಣಿ ಚಿತ್ರ ತಂಡ ಹಾಗು ನಿರ್ದೇಶಕ, ಸಹ ಕಲಾವಿದರು ಎಲ್ಲವೂ ಇಸ್ಟವಾಗಿದೆ, ನಾನು ಎಂಜಾಯ್ ಮಾಡಿಕೊಂಡು ಸಿನಿಮಾ ಮಾಡಿದ್ದೇನೆ. ಕಠಿಣ ಪರಿಶ್ರಮ,ಏಕಾಗ್ರತೆಯಿಂದ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಸಿನಿಮಾ ರಿಲೀಸ್ ಆಗಲು ಸಿದ್ಧವಾಗಿದೆ, ಪ್ರೇಕ್ಷಕರು ಸಿನಿಮಾ ಬಗ್ಗೆ ಮಾತನಾಡಬೇಕು, ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಮೂವೀ ಮಾಡುತ್ತೇನೆ, ನನಗೆ ಬಹಳ ಇಷ್ಟ ಎಂದು ಮನಸಾರೆ ಹೇಳಿಕೊಂಡರು.