ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮುದಾಯದ ಪ್ರಾಣಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಾರ್ವಜನಿಕರೊಂದಿಗೆ ಸಮನ್ವಯವನ್ನು ಸುಧಾರಿಸುವ ನಿಟ್ಟಿನಲ್ಲಿ, ಬಿಬಿಎಂಪಿಯ ಪಶುಪಾಲನಾ ವಿಭಾಗವು 1533 ಸಹಾಯವಾಣಿ ಮೂಲಕ
ಕಾಲಮಿತಿಯೊಳಗಾಗಿ/ತ್ವರಿತಗತಿಯಲ್ಲಿ ಬಗೆಹರಿಸಲು ಕ್ರಮ ವಹಿಸಲಾಗಿದೆ ಎಂದು ಪಶುಸಂಗೋಪನಾ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದ್ದಾರೆ.
ಪ್ರಸ್ತುತ, ನಾಗರೀಕರು ತಮ್ಮ ಪ್ರಶ್ನೆಗಳನ್ನು ಪರಿಹರಿಸಲು ವಾಟ್ಸಾಪ್ ಗುಂಪುಗಳು, ಫೇಸ್ಬುಕ್ ಗುಂಪುಗಳು, ವೈಯಕ್ತಿಕ ಸಹಾಯಕ ನಿರ್ದೇಶಕರ ಸಂಖ್ಯೆಗಳಿಗೆ ಕರೆ ನೀಡಿ, ಇಮೇಲ್ಗಳು ಮತ್ತು ಇನ್ನಿತರ ವೇದಿಕೆಗಳನ್ನು ತಲುಪುತ್ತಿದ್ದಾರೆ.
ಈ ರೀತಿಯ ಗೂಂದಲಗಳಿಂದಾಗಿ ನಾಗರೀಕರಿಗೆ ಹತಾಶೆಗೆಯಾಗುತ್ತಿದೆ. ಹಾಗೆಯೇ ಇಂತಹ ಆಫ್ಲೈನ್ ವಿಧಾನಗಳ ಮೂಲಕ ಪ್ರಕರಣಗಳನ್ನು ನಿರ್ವಹಿಸುವುದು ಇಲಾಖೆಗೆ ದಾಖಲಾತಿಯಲ್ಲಿ ಅಂತರವನ್ನು ಉಂಟುಮಾಡುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು, ಸಂಘಟಿತ ಬೆಂಬಲವನ್ನು ಸಹಾಯವಾಣಿ ಒದಗಿಸಲಿದೆ.
*ಬೆಂಬಲದ ವ್ಯಾಪ್ತಿಯನ್ನು ವಿಸ್ತರಿಸಿಲಾಗಿದೆ:*
ಸಹಾಯವಾಣಿಯು ಈಗ ಅಧಿಕ ವಿವರವಾದ ವರ್ಗಗಳನ್ನು ಹೊಂದಿದೆ ಜೊತೆಗೆ ಕೆಲಸದ ವ್ಯಾಪ್ತಿಯನ್ನು ಹೆಚ್ಚಿಸಿದೆ. ಪ್ರಾಣಿಗಳ ಜನನ ನಿಯಂತ್ರಣ, ಆಂಟಿ-ರೇಬಿಸ್ ವ್ಯಾಕ್ಸಿನೇಷನ್ ವಿನಂತಿಗಳು, ನಾಯಿ ಕಡಿತ ನಿರ್ವಹಣೆಯಂತಹ ಸಾಮಾನ್ಯ ದೂರುಗಳ ಹೊರತು, ನಾವು ಈಗ ಪ್ರಾಣಿಗಳಿಗೆ ಆಹಾರ ನೀಡುವವರಿಗೆ ಕಿರುಕುಳ, ಪ್ರಾಣಿಗಳ ಮೇಲಿನ ಕ್ರೌರ್ಯ, ಪ್ರಾಣಿಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದು ಮತ್ತು ಅದಕ್ಕೆ ಪರವಾನಗಿ ನೀಡುವಲ್ಲಿ ಸಹಾಯ ಮಾಡುವ ಬಗ್ಗೆಯು ಸಹಾಯ ನೀಡಿದ್ದೇವೆ.
*ರಿಕ್ವೆಸ್ಟ್ ಗಳನ್ನು ದಾಖಲಿಸುವ ವೇದಿಕೆ:*
ನಾಗರೀಕರು 1533 ಗೆ ಕರೆ ಮಾಡುವ ಮೂಲಕ ಅಥವಾ ಸಹಾಯ ಅಪ್ಲಿಕೇಶನ್ನಲ್ಲಿ ರಿಕ್ವೆಸ್ಟ್ ಗಳನ್ನು ಲಾಗ್ ಮಾಡುವ ಮೂಲಕ ಅಥವಾ ಬೆಂಗಳೂರು ಒನ್ ಸಿಟಿ ಒನ್ ಮೊಬೈಲ್ ಅಪ್ಲಿಕೇಶನ್ಗೆ ಲಾಗ್ ಇನ್ ಮಾಡುವ ಮೂಲಕ ನಮ್ಮನ್ನು ಸಂಪರ್ಕಿಸಬಹುದು. ರಿಕ್ವೆಸ್ಟ್ ಲಾಗಿನ್ ಆದ ನಂತರ, ಪ್ರತಿ ವಾರ್ಡ್ಗೆ ನಮ್ಮ ಅಧಿಕೃತ ಕ್ರೌರ್ಯ ವಿರೋಧಿ ನಿರೀಕ್ಷಕರೂ ಆಗಿರುವ ಪಶುವೈದ್ಯಕೀಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸುತ್ತಾರೆ.
ಸುಧಾರಿತ ಸಮಯ:
ಎಲ್ಲಾ ರಿಕ್ವೆಸ್ಟಗಳಿಗೆ ತನ್ನದೆ ಆದ ಪ್ರತಿಕ್ರಿಯೆ ಸಮಯವನ್ನು ನಿಗದಿಪಡಿಸಲಾಗಿದೆ. ನಾಗರೀಕರ ಅನುಭವವನ್ನು ಮತ್ತಷ್ಟು ಸುಸೂತ್ರಗೂಳಿಸಲು ಸ್ವಯಂಚಾಲಿತವಾಗಿ ವಿಳಂಬವಾದ ಅಥವಾ ಕ್ರಮಬದ್ಧವಾಗಿಲ್ಲದ ರಿಕ್ವೆಸ್ಟ್ ಗಳನ್ನು ಪರಿಹರಿಸಲು ಒನ್ ಮೊಬೈಲ್ ಅಪ್ಲಿಕೇಶನ್ಗೆ ಮಾತ್ರ ಲಾಗ್ ಇನ್ ಮಾಡುವ ಮೂಲಕ ಪ್ರತಿಯೊಂದು ರಿಕ್ವೆಸ್ಟ್ ಗಳನ್ನು ಲಾಗ್ ಮಾಡುವ ಮೂಲಕ ನಮ್ಮ ಸಹಾಯವಾಣಿಯ ಬೆಂಬಲವನ್ನು ಪೂರ್ಣವಾಗಿ ಬಳಸಿಕೊಳ್ಳುವಂತೆ ನಾವು ನಾಗರೀಕರನ್ನು ಒತ್ತಾಯಿಸುತ್ತೇವೆ.
*ಪ್ರತಿ ದೂರುಗಳಿಗೂ ಸಮಯ ನಿಗದಿ:*
1. ಪ್ರಾಣಿಗಳ ಜನನ ನಿಯಂತ್ರಣ ಮತ್ತು ಅವರ ವಾರ್ಡ್ಗೆ ಆಂಟಿ ರೇಬೀಸ್ ವ್ಯಾಕ್ಸಿನೇಷನ್ ವಿನಂತಿ – 5 ದಿನಗಳು.
2. ನಾಯಿ ಕಡಿತ / ಜಾನುವಾರು ದಾಳಿ [ಬೀದಾಡಿ ಮಾತ್ರ] – 2 ದಿನಗಳು.
3. ವಸತಿ ಸಂಘಗಳು ಅಥವಾ ವ್ಯಕ್ತಿಗಳಿಂದ ಫೀಡರ್ಗಳಿಗೆ ಕಿರುಕುಳ – 2 ರಿಂದ 3 ದಿನಗಳು.
4. ಬ್ರೀಡರ್ / ಪೆಟ್ ಶಾಪ್ / ಮಾಂಸದ ಅಂಗಡಿ ಪರವಾನಗಿ – 7 ದಿನಗಳು.
5. ಪ್ರಾಣಿ ಹಿಂಸೆ ಪ್ರಕರಣಗಳು [ಸಾಕು ಹಾಗೂ ಬೀದಿ ಪ್ರಾಣಿಗಳು] – 2 ದಿನಗಳು.
6. ಪಾರುಗಾಣಿಕಾ – ಸೀಮಿತ ಸಾಮರ್ಥ್ಯದಲ್ಲಿ – 1 ರಿಂದ 2 ದಿನಗಳು.
*ಪಾಲಿಕೆ ಸಹಾಯವಾಣಿ ಸಂಖ್ಯೆ:* 1533
*ನಮ್ಮ ಬೆಂಗಳೂರು(ಸಹಾಯ ತಂತ್ರಾಂಶ):*
https://play.google.com/store/apps/details?id=com.nammabengaluru.org