ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಗೋಪಲಕರ ಸಂಘದಿಂದ ನಗರದ ಗಾಂಧಿನಗರ ಕ್ಷೇತ್ರದ ಶಿರೂರು ಪಾರ್ಕ್ ನಲ್ಲಿ 3 ದಿನಗಳ ಕಾಲ ಅಧಿಕ ಹಾಲು ಕರೆಯುವ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ರಾಜ್ಯ ಮಟ್ಟದಲ್ಲಿ ಸುಮಾರು ವರ್ಷಗಳಿಂದ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಸಂಘದ ಅಧ್ಯಕ್ಷರಾದ ಮನೋಹರ್ ಅವರು ಆಯೋಜನೆ ಮಾಡುತ್ತಾ ಬಂದಿದ್ದಾರೆ.
ಸ್ಪರ್ಧೆಯ ಬಗ್ಗೆ ಅಧ್ಯಕ್ಷರಾದ ಮನೋಹರ್ ಮಾತನಾಡಿ, ಸುಮಾರು 40 ವರ್ಷಗಳಿಗಿಂತಲೂ ಹೆಚ್ಚು ಕಾರ್ಯಕ್ರಮವನ್ನು ಹಮಿಕೊಳ್ಳಾಗುತ್ತಿದೆ. ಬೆಂಗಳೂರು, ಗ್ರಾಮಾಂತರ, ಹಾಗು ರಾಜ್ಯದ ವಿವಿಧ ಜಿಲ್ಲೆಗಳಿಂದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ರಾಸುಗಳು ಭಾಗವಹಿಸಿ ಪ್ರತಿ ಭಾರಿಯೂ ಒಂದೊಂದು ಜಿಲ್ಲೆಯಲ್ಲಿ ಬಹುಮಾನಗಳನ್ನು ಪಡೆಯುತ್ತಿದ್ದವು. ಒಟ್ಟು 3 ದಿನ ಅಧಿಕ ಹಾಲು ಕರೆಯುವ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಭಾನುವಾರ ಸಂಜೆ 5 ಗಂಟೆಗೆ ಅಂತಿಮವಾಗಿ ಯಾರು ಗೆದ್ದಿದ್ದಾರೆಂದು ತಿಳಿಯಲಿದೆ ಎಂದರು.
ಇನ್ನು ಗೆಲುವನ್ನು ದಾಖಲಿಸಿದ ಹಸುವಿನ ಮಾಲೀಕರಿಗೆ ಮೊದಲನೇ ಬಹುಮಾನ 1 ಕೆಜಿ ಬೆಳ್ಳಿ, 2ನೇ ಬಹುಮಾನ 80 ಸಾವಿರ, ತೃತೀಯ ಬಹುಮಾನ 50 ಸಾವಿರ, 4ನೆ ಬಹುಮಾನ 25 ಸಾವಿರ, 5ನೇ ಬಹುಮಾನ 10 ಸಾವಿರ ಎಂದು ತಿಳಿಸಲಾಗಿದೆ.
ಹಾಲು ಕರೆಯುವ ನಿಯಮಗಳು:
ರಾಸುಗಳ ಹಾಲು ಕರೆಯಲು ಯಂತ್ರದ ಮೂಲಕವೇ ಕರೆಯಬೇಕು, ಕೈಯಿಂದ ಕರೆಯುವಂತಿಲ್ಲ.
ಹಸುಗಳಿಗೆ ಯಾವುದೇ ಚುಚ್ಚುಮದ್ದು ಕೊಡಿಸದೆ/ಹಾಕಿಸದೆಯೇ ಎಂಬುದನ್ನು ತಿಳಿದುಕೊಂಡು ಸ್ಪರ್ಧೆಗೆ ಬಿಡುವುದು.
ಹಾಲಿನ ತೂಕದಲ್ಲಿ ಯಾವುದೇ ಮೋಸವಿಲ್ಲ, ಹಾಕಿಗೆ ಯಾವುದೇ ನೀರು ಸೇರಿಸುವುದಿಲ್ಲ.
ಆರೋಗ್ಯಕರ ಹಸುಗಳಿಗೆ ಮಾತ್ರ ಸ್ಪರ್ಧೆಗೆ ಅವಕಾಶ.
ಎಲ್ಲರ ಸಮ್ಮುಖದಲ್ಲಿಯೇ ಅಳತೆ ಮಾಡಲಾಗುತ್ತದೆ, ಡಿಜಿಟಲ್ ಯಂತ್ರದ ಮೂಲಕ.
DOG ಶೋ ರೀತಿ ಹಸುವಿನ Cattle ಶೋ ಮಾಡಲು ಒತ್ತಾಯ
ರಾಜ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ತರಹೇವಾರಿ ಪ್ರಾಣಿಗಳ ಶೋಗಳು ನಡೆಯುತ್ತವೆ, ಆದರೆ ಆಕಳು ರ್ಯಾಂಪ್ ವಾಕ್ ಕಾರ್ಯಕ್ರಮ ನಡೆಯುತ್ತಿಲ್ಲ, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹಸುವಿನ ಶೋ ನಡೆಯುವಂತೆ ಮಾಡಬೇಕು ಎಂದು ಸಂಬಂಧಪಟ್ಟ ಮಂತ್ರಿಗಳಿಗೆ,ಸರ್ಕಾರಕ್ಕೆ, ಇಲಾಖೆಗೆ ಸಂಘದವರು ಮನವಿ ಪತ್ರವನ್ನು ನೀಡಲಾಗಿದೆ. ಆದರೆ ಪತ್ರಗಳಿಗೆ ಯಾರು ಸಹಾ ಕಿವಿಗೆ ಹಾಕಿಕೊಂಡಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಅಲ್ಲದೆ ಬೆಂಗಳೂರಿನಲ್ಲಿರುವ ಹಸುಗಳ ಹಾಲುನ್ನುನ್ನು ಡೈರಿಗೆ ಹಾಕಿಸಿಕೊಳ್ಳುತ್ತಿಲ್ಲ ಎನ್ನುವ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿವೆ, ಹೀಗಾಗಿ ನಿಯಮಾವಳಿ ರೂಪಿಸಿ ಹಾಲು ಹಾಕಿಸಿಕೊಂಡರೆ ನಗರದಲ್ಲಿ ಹಸುಗಳನ್ನೇ ಸಾಕಿ ಅದರಿಂದ ಬರುವ ಹಾಲನ್ನು ಮಾರಾಟ ಮಾಡಿಕೊಂಡು ಬದುಕು ಕಟ್ಟಿಕೊಂಡವರಿಗೆ ಸಹಾಯವಾಗುತ್ತದೆ.
ಗೋ ರಕ್ಷಣೆ ನಮ್ಮೆಲ್ಲರ ಹೊಣೆ
ರಾಜಕೀಯ ಪ್ರತಿನಿಧಿಗಳು, ಜನಸಾಮಾನ್ಯರು ಗೋವುಗಳಿಗೆ ಧಕ್ಕೆಯಾದರೆ ಕೇವಲ ಒಂದೆರಡು ದಿನ ಹೋರಾಟ ಮಾಡಿ ಕೈಬಿಡುವ ಕೆಲಸಗಳು ನಡೆಯುತ್ತಿವೆ, ಇದನ್ನು ಬಿಟ್ಟು, ಪೂಜನೀಯ ಸ್ಥಾನದಲ್ಲಿರುವ ಹಸುಗಳನ್ನು ರಕ್ಷಣೆ ಮಾಡಬೇಕು, ಪಾಲನೆ ಪೋಷಣೆ ಮಾಡಬೇಕು, ಗೊ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ, ತಾಯಿ ಎಂದು ಕರೆಯುವ ಗೋ ಮಾತೆಗೆ ನಾವುಗಳು ಎಂದೆಂದಿಗೂ ಚಿರಋಣಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಜಿ ದಯಾಳು, ಕಾರ್ಯಧ್ಯಕ್ಷರಾದ ಗೋಪಿ ಚೌಡಯ್ಯ, ರಘು ಪಶು ವೈದ್ಯಾಧಿಕಾರಿ ಸೇರಿದಂತೆ ಸಂಘದ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.