ಬೆಂಗಳೂರು: ಬಿಗ್ ಬಾಸ್ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಗ್ರ್ಯಾಂಡ್ ಫೈನಾಲೆಯಲ್ಲಿ ಸರಿಗಮಪ ಖ್ಯಾತಿಯ ಹನುಮಂತ ಅವರು win ಆಗುವ ಮೂಲಕ ಮೊದಲ ಬಹುಮಾನವಾಗಿ 50 ಲಕ್ಷ ನಗದು ಗಿಟ್ಟಿಸಿಕೊಂಡರು.
ಬಿಗ್ ಬಾಸ್ 11ನೇ ಆವೃತ್ತಿಯಲ್ಲಿ ಆಟ ಪ್ರಾರಂಭವಾಗಿ 50 ದಿನಗಳ ನಂತರ wild Card ಮೂಲಕ ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡಿ, ಬಿಗ್ ಬಾಸ್ ಇತಿಹಾಸದಲ್ಲಿ wild Card ಸ್ಪರ್ಧಿ ಬಿಗ್ ಬಾಸ್ ಶೋದಲ್ಲಿ ಜಯಗಳಿಸಿದ್ದಾರೆ ಎಂದರೆ ಇದೆ ಮೊದಲು ಎಂಬುದು ಕುತೂಹಲ ವಿಚಾರವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ನಯವಾಗಿ, ನಾಜೂಕು,ಬುದ್ಧಿವಂತಿಕೆಯಿಂದ ಅಚುಕ್ಕಟಾಗಿ ಸುಮಾರು 5 ಕೋಟಿಗಿಂತ ಹೆಚ್ಚು ಜನರು ರಾಜ್ಯದ ಜನರು ಮತವನ್ನು ಹಾಕುವ ಮೂಲಕ ಅಮೋಘವಾಗಿ ಕನ್ನಡಿಗರು ಕೈಹಿಡಿದು ಬಿಗ್ ಬಾಸ್ ಟ್ರೋಫಿ ಹಿಡಿಯುವಂತೆ ಮಾಡಿ ಉನ್ನತ ಶಿಕಾರಕ್ಕೆ ದಾಪುಗಾಲು ಇಟ್ಟಿದ್ದಾರೆ. ಮನೆಯಲ್ಲಿ ಪ್ರತಿ ಆಟದಲ್ಲಿ ಭಾಗವಹಿಸಿ ಗಲಾಟೆ ಗದ್ದಲ ಮಾಡಿಕೊಳ್ಳದೆ ತಮ್ಮಪಾಡಿಗೆ ತಾವು ಎನ್ನುವ ಹಾಗೆ ಆಟದ ಚಮತ್ಕಾರವನ್ನು ತೋರಿಸಿ ಕರ್ನಾಟಕದ ಜನರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.
ಇಡೀ ಬಿಗ್ ಬಾಸ್ ಮನೆಯಲ್ಲಿ ವಿಶೇಷವಾಗಿ, ಅರ್ಥ ಗರ್ಭಿತವಾಗಿ ಆಟವಾಡಿ ಇಂದಿನ ಹಳೆಯ ಸ್ಪರ್ಧಾಳುಗಳಿಗೆ ಮಾದರಿಯಾಗಿದ್ದಾರೆ. ಸರಳವಾಗಿ ಮನೆಯಲ್ಲಿ ಜೀವಿಸಿ ಅಮೋಘವಾದ ಸಾಧನೆ ಮಾಡಿ ಹನುಮಂತ ಮತ್ತೊಂದು ಮೈಲುಗಲ್ಲು ತಲುಪಿದ್ದಾನೆ.
2ನೇ ರನ್ನರ್ ಅಪ್ ಆಗಿ ತ್ರಿವಿಕ್ರಂ ಅವರು ಹೊರ ಹುಮ್ಮಿ 15 ಲಕ್ಷ ಬಹುಮಾನ ಪಡೆದುಕೊಂಡಿದ್ದಾರೆ. 3ನೇ ಬಹುಮಾನಕ್ಕೆ wild Card ಸ್ಪರ್ಧಿ ರಜತ್ ಅವರು ಸಹಾ 2 ವ್ಯಕ್ತಿಯಾಗಿ ಪದಾರ್ಪಣೆ ಮಾಡಿ TOP 5 ರಲ್ಲಿ ಒಬ್ಬರಾಗಿದ್ದರು. 7 ಲಕ್ಷ ನಗದು ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 4ನೇ ಸ್ಪರ್ಧಿಯಾಗಿ ಮನೆಯಿಂದ ಹೊರಹೋದ ಮೋಕ್ಷಿತ ಪೈ ಅವರು ಪ್ರಾರಂಭದಿಂದ TOP 5 ರಲ್ಲಿ ಮಿಂಚಿದ್ದರು. ಅವರು ಸಹ 7 ಲಕ್ಷ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಮನೆಯ 5ನೇ ಸೋರ್ಧಿಯಲ್ಲಿದ್ದ ಭವ್ಯ ಗೌಡ ಅವರು ಪ್ರಾರಂಭದಿಂದ ಹಿಡಿದು ಕೊನೆಯವರೆಗೆ ಆಟವಾಡಿ 5ನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಳ್ಳುವ ಮೂಲಕ 3 ಬಹುಮಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಇಂದಿನಿಂದ ಬಿಗ್ ಬಾಸ್ ಮನೆಯಲ್ಲಿ ಮೌನ
ಬಿಗ್ ಬಾಸ್ ಶೋದ. 11ರ ಆವೃತ್ತಿ ಮುಗಿದಿದ್ದು ಇದೀಗ ಮನೆಯಲ್ಲಿ ನೀರವ ಮೌನ ಆವರಿಸಿದೆ, ಮನೆಯಲ್ಲಿ ಯಾರು ಇಲ್ಲ, ಕೇವಲ ಕತ್ತಲು ತುಂಬಿದೆ. ಬಿಗ್ ಬಾಸ್ ಮಾತು ನಿಂತಿದೆ. ಸ್ಪರ್ಧಾಳುಗಳು ಮನೆಯಿಂದ ಹೊರ ಬಂದ ಕೂಡಲೇ ಬಿಗ್ ಬಾಸ್ 11 ಶೋಗಳ ನಿರೂಪಕ ಸುದೀಪ್ ಮನೆಯ ದೀಪ ಹಾರಿಸಿ ಇಬ್ಬರನ್ನು ವೇದಿಕೆ ಮೇಲೆ ಕರೆದುಕೊಂಡು ಬಂದ್ರು. ಬಿಗ್ ಬಾಸ್ 12ರ ಶೋಗೆ ಕಿಚಾ ಸುದೀಪ್ ಅವರು ವಿದಾಯ ಹೇಳಿದ್ದಾರೆ. ಮುಂದೆ ನಿರೂಪಕರಾಗಿ ಯಾರು ಬರುತ್ತಾರೆ ಎಂಬುದಕ್ಕೆ ಮುಂದಿನ ಆವೃತ್ತಿಯ ವರೆಗೂ ಕಾಯಲೇ ಬೇಕು!