ಬೆಂಗಳೂರು: ಯೋಗ ಕೇವಲ ಒಂದು ಕಲೆಯಲ್ಲ ಅದು ಒಂದು ಮನುಷ್ಯನ ಆರೋಗ್ಯ ಕಾಪಾಡುವ ಮದ್ದು ಆಗಿದ್ದು ಪ್ರತಿಯೊಬ್ಬರೂ ಯೋಗ ಅಭ್ಯಾಸ ಮಾಡಬೇಕು, ಅದರಿಂದ ಹೆಚ್ಚು ಹೆಚ್ಚು ಲಾಭ ಪಡೆದುಕೊಳ್ಳಬೇಕು ಎಂದು APS ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಸಿಎ.ವಿಷ್ಣುಭರತ್ ಅಲಂಪಲ್ಲಿ ತಿಳಿಸಿದರು.
ಆಚಾರ್ಯ ಪಾಠಶಾಲಾ ಕಲೆ,ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ರಥಸಪ್ತಮಿಯ ಅಂಗವಾಗಿ ಪದವಿ ಪೂರ್ವ ಕಾಲೇಜಿನಲ್ಲಿ “ರಥಸಪ್ತಮಿ ಯೋಗೋತ್ಸವ-2025ರ ಕಾರ್ಯಕ್ರಮ ಆಚರಿಸಲಾಯಿತು. ನಂತರ ಮಾತನಾಡಿದ ಅವರು, ರಥಸಪ್ತಮಿ ದಿಂದೊಂದು ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ. ಹೀಗಾಗಿ ಸೂರ್ಯ ಪುತ್ರನನ್ನು ಸ್ಮರಿಸುವ ದಿನವಾಗಿದೆ. ಹೀಗಾಗಿ ವಿಶೇಷವಾಗಿ ಯೋಗವನ್ನು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನಮ್ಮ ಸಂಸ್ಥೆಯಲ್ಲಿ ಯೋಗ ಶಿಕ್ಷಕಿ ಧನಲಕ್ಷ್ಮಿಯವರು ಮಕ್ಕಳಿಗೆ ಯೋಗ ತರಬೇತಿ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ, ಅದ್ಬುತವಾಗಿ ಯೋಗದಲ್ಲಿ ಸಾಕಷ್ಟು ಪ್ರಾವಿಣ್ಯತೆ ಪಡೆದಿದ್ದಾರೆ. ಮಕ್ಕಳ ಆರೋಗ್ಯ, ಬುದ್ಧಿವಂತಿಕೆ,ಕೈ. ಶಿಕ್ಷಣದ ಬೆಳವಣಿಗೆ ಸಹಾಕವಾಗಿದೆ. ಮಕ್ಕಳು ಸೂರ್ಯ ನಮಸ್ಕಾರವನ್ನು ಮಕ್ಕಳು ಅಚ್ಚುಕಟ್ಟಾಗಿ ಮಾಡಿದರು, ಶಿಕ್ಷಣದ ಜೊತೆಗೆ ಯೋಗ ಕಲಿತುಕೊಂಡರೆ ಜೀವನಕ್ಕೆ ಒಂದು ದಾರಿಯಾಗಲಿದೆ. ಯೋಗದಿಂದ ಹತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.
ಸಂಸ್ಥೆಯ ಟ್ರಸ್ಟೆ ಹಾಗು ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಛೇರ್ಮನ್ರಾದ ಡಾ.ಟಿ.ವಿ,ಗುರುದೇವಯ್ಯ ಮಾತನಾಡಿ, ಸೂರ್ಯ ದೇವನ ಹುಟ್ಟಿದ ದಿನ ಎಂದು ಹೇಳುತ್ತಾರೆ, ಸೂರ್ಯ ನಮಸ್ಕಾರದಿಂದ ಹಲವು ಉಪಯೋಗಗಳಿವೆ. ನಾವು ಸೇರಿದಂತೆ ಮಕ್ಕಳೆಲ್ಲರೂ ಸೂರ್ಯ ದೇವನಿಗೆ ಕೃತಜ್ಞತೆ ಸಲ್ಲಿಸಿದರು. ಮತ್ತೊಂದುಕದೆ ಸೂರ್ಯ ತನ್ನ ಪಥವನ್ನು ಬದಲಾಯಿಸಿ ಚಾಲನೆ ಮಾಡುತ್ತಾನೆ ಎಂದು ಹೇಳುತ್ತಾರೆ. ಈ ಮೂಲಕ ತನ್ನ ವಾಹನವನ್ನು ಬದಲಾಯಿಸುತ್ತಾರೆ. ಅದರಲ್ಲಿ ಸಂಚಾರ ಮಾಡುತ್ತಾನೆ. ಸೂರ್ಯ ನಮಸ್ಕಾರ ಸರ್ವಾಂಗ ಗಳಿಗೂ ಚೈತನ್ಯ ಕೊಡುವ ಯೋಗ, ವ್ಯಾಯಮ, ಎಲ್ಲರೂ ಮಾಡಬೇಕು ಅದರಿಂದ ಸಾಕಷ್ಟು ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಸೂರ್ಯ ನಮಸ್ಕಾರ ಮಾಡುವುದರಿಂದ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂಬ ನಂಬಿಕೆ ಇದೆ, ಅದು ನಿಜ, ಸೂರ್ಯ ದೇವನಿಗೆ ನಿತ್ಯ ನಮಸ್ಕಾರ ಮಾಡುವುದರಿಂದ ಪ್ರಾರ್ಥನೆ ಮಾಡಿದಂಗೆ, ನೆನೆಸಿಕೊಳ್ಳುವುದು,ಆಶೀರ್ವಾದ ತೆಗೆದುಕೊಳ್ಳುವ ಕೆಲಸ ವಾಗುತ್ತದೆ ಎಂದರು.
ಸೂರ್ಯನಿಂದ ಕಲಿಯುವ ಪಾಠ ನಮಗೆ ಬಹಳ ಇದೆ
ಸಂಸ್ಥೆಯ ಪ್ರಾಚಾರ್ಯರಾದ ನಾಗರಾಜು ಎನ್, ಉಪ ಪ್ರಾಚಾರ್ಯರಾದ ರಂಜನಿ ಮಾತನಾಡಿ, ಸೃಷ್ಟಿಕರ್ತ ಸೂರ್ಯದೇವನಿಗೆ ನಮಿಸುವ ಕೆಲಸವಾಗಿದೆ, ಸೂರ್ಯ ನಮಸ್ಕಾರ ಆರೋಗ್ಯಕ್ಕೆ ಹೇಳಿ ಮಾಡಿಸಿದ ವ್ಯಾಯಾಮ, ಎಲ್ಲರೂ ಆರೋಗ್ಯಕರವಾದ ಜೀವನ ನಡೆಸುವಂತಾಗಲಿ ಎಂದರು, ಸೂರ್ಯನಿಂದ ಕಲಿಯುವ ಪಾಠ ಸಾಕಷ್ಟಸ್ತಿದೆ, ಕೇವಲ ಒಂದು ದಿನಕ್ಕೆ ಮಾತ್ರ ಆಚರಣೆ ಸೀಮಿತವಾಗಬಾರದು, ನಿತ್ಯವೂ ಸಹಾ ಸೂರ್ಯ ಪುತ್ರನಿಗೆ ನಮಸ್ಕಾರ ಮಾಡುವುದನ್ನು ಕಲಿಯಬೇಕು, ಸೂರ್ಯ ನಿಗೆ ನಮಸ್ಕಾರ ಮಾಡುವುದರಿಂದ ನಮ್ಮ ಸ್ಥಿರತೆ ಕಾಪಾಡಿಕೊಳ್ಳುವುದು ಹಾಗು ನಮಗೆ ಆರೋಗ್ಯ ಕಾಪಾಡಿಕೊಳ್ಳುವ ಆಲೋಚನೆ ಬರಬೇಕು, ಹೀಗಾಗಿ ಮಕ್ಕಳು ಪ್ರಸ್ತುತದಲ್ಲಿಯೇ ಆರೋಗ್ಯ ಕಾಪಾಡಿಕೊಂಡು ಹೋಗಬೇಕು, ಅವರಿಗೆ ಭವಿಷ್ಯದಲ್ಲಿ ಉತ್ತಮ ಆರೋಗ್ಯ ಸಿಗುತ್ತದೆ ಎಂದರು.
ಸಂಸ್ಥೆಯ ಯೋಗ ಶಿಕ್ಷಕಿ ಧನಲಕ್ಷ್ಮಿ ಸಿಪಿ ಮಾತನಾಡಿ, ಶಾಲೆಯಲ್ಲಿ ನೂರಕ್ಕಿಂತ ಹೆಚ್ಚಿನ ಮಕ್ಕಳು ಯೋಗದಲ್ಲಿ ಭಾಗವಹಿಸಿದ್ದರು, ಶಿವ ಜ್ಯೋತಿ ಯೋಗಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ಪ್ರದರ್ಶನ ನೀಡಿದವರಿಗೆ ಯೋಗ ಪ್ರತಿಭಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ, ಅಲ್ಲದೆ 5 ಜನ ಮಕ್ಕಳು ಆನ್ಲೈನ್ ನಲ್ಲಿ ಯೋಗ ಕಲಿತು ವಿಶೇಷ ಆಸನಗಳನ್ನು ಅಚ್ಚುಕಟ್ಟಾಗಿ ಮಾಡಿ ಪ್ರಶಸ್ತಿ ಪಡೆದುಕೊಂಡರು, ಕಾಲೇಜಿನಲ್ಲಿ ರಥಸಪ್ತಮಿ ಆಚರಣೆ ವರ್ಷದಿಂದ ವರ್ಷಕ್ಕೆ ವೈಭವೂ ಪೇರಿತವಾಗಿ ಆಚರಸಲಿ, ಅದರ ಜೊತೆಗೆ ವಿಶೇಷ ಕಾರ್ಯಕ್ರಮಗಳನ್ನು ಮಾಡಲಿ ಎಂದು ದೇವರಲ್ಲಿ ಬೇಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಸಿಎ.ವಿಷ್ಣುಭರತ್ ಅಲಂಪಲ್ಲಿ, ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಛೇರ್ಮನ್ರಾದ ಡಾ.ಟಿ.ವಿ,ಗುರುದೇವಯ್ಯ, ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ.ಎಸ್, ಉಪಪ್ರಾಂಶುಪಾಲರಾದ ರಂಜನಿ.ಹೆಚ್.ಎಸ್. ಯೋಗ ಶಿಕ್ಷಕಿಯಾದ ಧನಲಕ್ಷ್ಮಿ, ಕಾಲೇಜಿನ ಉಪನ್ಯಾಸಕರು ಹಾಗೂ ಬೋಧಕೇತರವರ್ಗದವರು ಹಾಗೂ ಮುಖ್ಯವಾಗಿ 100 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. 108 ಬಾರಿ ಸೂರ್ಯ ನಮಸ್ಕಾರ ಆಸನ ಮಾಡುವ ಮೂಲಕ ವಿದ್ಯಾರ್ಥಿಗಳು ಪಥ ಬದಲಿಸಿದ ಸೂರ್ಯನಿಗೆ ನಮನ ಸಲ್ಲಿಸಿದರು.ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ ವಿತರಿಸಲಾಯಿತು.