ಮಂಡ್ಯ :ಮೂಡ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ನೇರವಾಗಿ ಭಾಗಿಯಾಗಿದ್ದು ಸತ್ಯವಾಗಿದೆ.ಮೂಡಾ ಕೇಸ್ನಲ್ಲಿ ಕ್ಲೀನ್ ಚೀಟ್ ಹೊರಬರಲಿ ಎಂದು ನಾನು ಅಪೇಕ್ಷೆ ಪಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಕೆ ಆರ್ ಪೇಟೆಯ ಬೋಳಮಾರನಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀದೇವಮ್ಮನವರ ದೇವಾಲಯ ಲೋಕಾರ್ಪಣೆ ಸಮಾರಂಭ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರುಪಾಲ್ಗೊಂಡು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದರು.
ತನಿಖಾ ಸಂಸ್ಥೆಯ ಮೇಲೆ ಒತ್ತಡ
ನಂತರ ಮಾಧ್ಯಮಗಳ ಮಾತನಾಡಿದ ಅವರು ; ರಾಜ್ಯ ಸರ್ಕಾರ ತನಿಖಾ ಸಂಸ್ಥೆಯ ಮುಖ್ಯಸ್ಥರನ್ನೇ ಹಿಡಿತಕ್ಕೆ ತೆಗೆದುಕೊಂಡು ಒತ್ತಡ ಹೇರುತ್ತಿದೆ.
ಆ ಒತ್ತಡದಿಂದ ತನಿಖಾ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸತ್ಯವನ್ನು ಮಾತನಾಡಲು ಆಗುತ್ತಿಲ್ಲ. ಮೂಡ ಹಗರಣದಲ್ಲಿ ಪಾರದರ್ಶಕ ತನಿಖೆ ಆಗಬೇಕು ಎಂದು ನಿಖಿಲ್ ಅವರು ಆಗ್ರಹಿಸಿದರು.
ರಾಜಕೀಯ ದ್ವೇಷಕ್ಕೆ ನಾವು ಪಾದಯಾತ್ರೆ ಮಾಡಿಲ್ಲ
ಮೂಡಾ ಹಗರಣದಲ್ಲಿ ರಾಜಕೀಯ ದ್ವೇಷಕ್ಕೆ ನಾವು ಪಾದಯಾತ್ರೆ ಮಾಡಿಲ್ಲ.ಜನರಲ್ಲಿ ಜಾಗೃತಿ ಮೂಡುವ ಸಲುವಾಗಿ ನಾವು ಈ ಪಾದಯಾತ್ರೆ ಮಾಡಿದ್ದು. ಈ ಮೂಡಾ ಹಗರಣ ಬರೀ ಲೋಕಾಯುಕ್ತಕ್ಕೆ ಸೀಮಿತಗೊಳ್ಳಬಾರದು..ಪಾರದರ್ಶಕವಾಗಿ ತನಿಖೆ ಆಗಬೇಕು ಎಂದು ರಾಜ್ಯದ ಜನತೆ ಬಯಕೆಯಾಗಿದೆ ಎಂದು ತಿಳಿಸಿದರು.