ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕರ ಆರೋಗ್ಯ, ಸಹಬಾಳ್ವೆ(Co-existence) ಬಗ್ಗೆ ಶಾಲೆಗಳಲ್ಲಿ ಅರಿವು, ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳಲು ನೋಂದಾಯಿತ ಆಸಕ್ತಿಯುಳ್ಳ ಕಲ್ಯಾಣ ಸಂಸ್ಥೆಗಳು/ ಪ್ರಾಣಿ ಪ್ರಿಯರನ್ನು ಆಹ್ವಾನಿಸಲಾಗಿದೆ.
ಬಿಬಿಎಂಪಿಯ ಪಶುಪಾಲನ ವಿಭಾಗದ ವತಿಯಿಂದ ಪಾಲಿಕೆಯ ವ್ಯಾಪ್ತಿಯಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಿಯಮಗಳು 2023(ABC Rules 2023)ರ ಪ್ರಕಾರ ಈ ಕೆಳಕಂಡ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುವುದು.
1. ಸಮುದಾಯ ನಾಯಿಗಳ ನಿಯಂತ್ರಣಕ್ಕೆ ನಿಯಮನುಸಾರ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಹಾಗೂ ರೇಬಿಸ್ ರೋಗವನ್ನು ತಡೆಗಟ್ಟಲು ARV ಕಾರ್ಯಕ್ರಮವನ್ನು ನಿರ್ವಹಿಸಲಾಗುತ್ತಿದೆ.
2. ಸಾರ್ವಜನಿಕರು ಸಮುದಾಯ ನಾಯಿಗಳ ಜೊತೆಯಲ್ಲಿ ಯಾವ ರೀತಿ ಸ್ಪಂದಿಸುವುದು ಹಾಗೂ ಅವುಗಳಿಗೆ ಆಹಾರ ನೀಡುವ ಬಗ್ಗೆ ಜಾಗೃತಿ
3. ಮೂಲವಾಸ ಸ್ಥಳದಿಂದ ಸಮುದಾಯ ನಾಯಿಗಳ ಸ್ಥಳಾಂತರವನ್ನು ನಿಷೇದಿಸಿರುವ ಬಗ್ಗೆ ಹಾಗೂ ಗಾಯಗೊಂಡ ಸಮುದಾಯ ನಾಯಿಗಳ ಆರೈಕೆ ಹಾಗೂ ನಿರ್ವಹಣೆ.
ಶಾಲಾ ಮಕ್ಕಳಲ್ಲಿ ಮೇಲಿನ ವಿಷಯಗಳ ಬಗ್ಗೆ ಹಾಗೂ ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕರ ಆರೋಗ್ಯ, ಸಹಬಾಳ್ವೆ(Co-existence) ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರ್ವಹಿಸಬೇಕಾದ ಅಗತ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿಯೂ ವಲಯಕ್ಕೆ 100 ಕಾರ್ಯಕ್ರಮಗಳಂತೆ ಒಟ್ಟು 800 ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ.
ಮುಂದುವರಿದು, ಶಾಲೆಗಳಲ್ಲಿ IEC ಕಾರ್ಯಕ್ರಮವನ್ನು ಕೈಗೊಳ್ಳಲು THE KARNATAKA SOCIETIES REGISTRATION ACT, 1960 ರಡಿ ನೋಂದಾಯಿತ ಪ್ರಾಣಿ ಕಲ್ಯಾಣ ಸಂಸ್ಥೆ /ಪ್ರಾಣಿ ಪ್ರಿಯರು ಇದರಲ್ಲಿ ಭಾಗವಹಿಸಲು ಪಾಲಿಕೆಯ ಪಶು ಸಂಗೋಪನೆ ವಿಭಾಗದಿಂದ ಆಸಕ್ತಿ ವ್ಯಕ್ತಪಡಿಸುವಿಕೆ(EOI)ಗೆ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ನೋಂದಾಯಿತ ಪ್ರಾಣಿ ಕಲ್ಯಾಣ ಸಂಸ್ಥೆ/ಪ್ರಾಣಿ ಪ್ರಿಯರು ಪಾಲಿಕೆ ಕೇಂದ್ರ ಕಛೇರಿಯ ಅನೆಕ್ಸ್-03 ಕಟ್ಟಡದಲ್ಲಿರುವ ಪಶು ಸಂಗೋಪನಾ ಕಛೇರಿಗೆ 21ನೇ ಫೆಬ್ರವರಿ 2025 ರಂದು ಸಂಜೆ 4.00 ಗಂಟೆಯೊಳಗಾಗಿ ಮುಚ್ಚಿದ ಲಕೋಟೆಯಲ್ಲಿ ದಾಖಲಾತಿಗಳನ್ನು ಸಲ್ಲಿಸಲು ಪಶು ಸಂಗೋಪನೆ ವಿಭಾಗದ ಜಂಟಿ ನಿರ್ದೇಶಕರು ಕೋರಿರುತ್ತಾರೆ.
*ಹೆಚ್ಚಿನ ಸಂಪರ್ಕಕ್ಕಾಗಿ:* ಡಾ. ಚಂದ್ರಯ್ಯ, ಜಂಟಿ ನಿರ್ದೇಶಕರು(ಪಶು ಸಂಗೋಪನೆ),*ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.**ಮೊ.ಸಂ:* 99020 41310