ಮುಖ್ಯಾಂಶಗಳು:
.16ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮ
• ಕರ್ನಾಟಕದಲ್ಲಿ 50 ಲಕ್ಷ ಬುಡಕಟ್ಟು ಜನ
. 12 ಲಕ್ಷ ಬುಡಕಟ್ಟು ಜನರು ಕಾಡಲ್ಲಿ ಇದ್ದಾರೆ.
• ಬಜೆಟ್ನಲ್ಲಿ ಅರಣ್ಯ ವಾಸಿಗಳ ₹1800 ಕೋಟಿ ಮೀಸಲು
• ಕಾಡಲ್ಲಿ ವಿದ್ಯುತ್, ಕುಡಿಯುವ ನೀರು ಅಗತ್ಯ ಸೌಕರ್ಯ: ರಂದೀಪ್ ಮಾಹಿತಿ.
• ಸಮಾಜದ ಮುಖ್ಯ ವಾಹಿನಿ ತರಲು ರಾಜ್ಯ ಕೇಂದ್ರ ಸರ್ಕಾರದ ವಿರೋಧನ ಪ್ರಯೋಗ.
• ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರ ವಿನಿಮಯಕ್ಕೆ ವಿಶೇಷ ಕಾರ್ಯಗಾರ.
ಬೆಂಗಳೂರು: ರಾಜ್ಯದ ಬುಡಕಟ್ಟು ಸಮುದಾಯದ ಯುವ ಜನರಿಗೆ ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಲು ಹಾಗು ಸಂಸ್ಕೃತಿ ಸಂಸ್ಕಾರ ಕಲಿಸಲು ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಿ.ರಂದೀಪ್ ತಿಳಿಸಿದರು.
ನೆಹರು ಯುವ ಕೇಂದ್ರ ನಗರದ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯಲ್ಲಿ 16ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸುಮಾರು 50 ಲಕ್ಷ ಬುಡಕಟ್ಟು ಜನರಿದ್ದಾರೆ . 12 ಬುಡಕಟ್ಟು ಸಮುದಾಯ ಇಂದಿಗೂ ಕಾಡಿನಲ್ಲೇ ವಾಸಿಸುತ್ತಿದ್ದಾರೆ. ಬಜೆಟ್ನಲ್ಲಿ ಬುಡಕಟ್ಟು ಸಮುದಾಯಗಳಿಗಾಗಿ ವಿಶೇಷವಾಗಿ €1,800 ಕೋಟಿ ಮೀಸಲಿಡಲಾಗಿದೆ. ಕಾಡಿನಲ್ಲಿ ನೆಲೆಸಿರುವವರಿಗೆ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗದವರು ಬಾಕ್ಸಿಂಗ್ ಚೆನ್ನಾಗಿ ಆಡುತ್ತಾರೆ. ಅವರ ಪ್ರತಿಭೆ, ಸಾಮರ್ಥ್ಯಕ್ಕೆ ಪ್ರೋತ್ಸಾಹಿಸಿದ ಪರಿಣಾಮ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅದೇ ಬುಡಕಟ್ಟು ಜನರಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸುವ ಜೊತೆಗೆ ಮುಖ್ಯವಾಹಿನಿಯೊಂದಿಗೆ ಗುರುತಿಸಿಕೊಳ್ಳಲು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದರ ಜೊತೆಗೆ ಸಂಸ್ಕೃತಿ ಸಂಸ್ಕಾರವನ್ನು ಕಲಿಸುವ, ಸಮಾಜದ ಮುಖ್ಯ ವಾಹಿನಿಗೆ ಬಂದು ಜೀವನ ನಡೆಸುವ ಪದ್ಧತಿಗಳನ್ನು ಸಹ ಕಾರ್ಯಗಾರದಲ್ಲಿ ಕಲಿಸಲಾಗುತ್ತದೆ, ಕಾಡಲ್ಲಿರುವ ಅನೇಕ ಬುಡಕಟ್ಟು ಜನರಿಗೆ ಸಮಗ್ರ ಪೌಷ್ಠಿಕ ಆಹಾರವನ್ನು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಶ್ರಮಿಸುತ್ತಿವೆ ಎಂದು ರಣದೀಪ್ ತಿಳಿಸಿದರು.
ಸಿಆರ್ ಪಿಎಫ್ ಬೆಂಗಳೂರು ಗ್ರೂಪ್ ಸೆಂಟರ್ನ ಡಿಐಜಿ ಪದ್ಮ ಕುಮಾರ್ ಮಾತನಾಡಿ, ಆಂತರಿಕ ಭದ್ರತೆಯಲ್ಲಿ ಬುಡಕಟ್ಟು ಸಮುದಾಯದವರ ಕೊಡುಗೆ ಅಪಾರವಿದೆ. ಒಡಿಶಾ, ಛತ್ತೀಸ್ ಘಡ ರಾಜ್ಯಗಳಲ್ಲಿ ನಕ್ಸಲ್ ನಿಗ್ರಹಕ್ಕಾಗಿ ಬುಡಕಟ್ಟು ಬೆಟಾಲಿಯನ್ ಸ್ಥಾಪಿಸಲಾಗಿದೆ. ಬೆಂಗಳೂರು ಮತ್ತು ಕರ್ನಾಟಕ ಪ್ರವಾಸಕ್ಕೆ ಮಧ್ಯಪ್ರದೇಶ, ಒಡಿಶಾ ಮತ್ತು ಛತ್ತೀಸ್ಫಡದ 200 ವಿದ್ಯಾರ್ಥಿಗಳು ಸಿಲಿಕಾನ್ ಸಿಟಿ ಬೆಂಗಳೂರಿನ ಐಟಿ-ಬಿಟಿ ಉದ್ಯಮ, ಉದ್ಯೋಗಕಾಶಗಳ ಕಡೆಗೂ ಗಮನ ಹರಿಸಬೇಕು ಎಂದರು.
ಬುಡಕಟ್ಟುವಿಗೆ ವಿನಿಮಯ ಕಾರ್ಯಕ್ರಮದಲ್ಲಿ ಬುಡಕಟ್ಟು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತರಹೆವಾರಿ ಬುಡಕಟ್ಟು ಹಾಡುಗಳಿಗೆ ಹೆಜ್ಜೆ ಹಾಕಿದರು.
ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಅಶೋಕ್ ಕುಮಾರ್ದಾಶ್, ಸಿಆರ್ಪಿಎಫ್ ಡಿ ಐ ಪಿ ಜಿ ಆರ್ ಪದ್ಮ ಕುಮಾರ್, RICM ನ ಬೆಂಗಳೂರಿನ ನಿರ್ದೇಶಕರಾದ ಸುರೇಶ್ ಪಿಎನ್, ನಿವೃತ್ತ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶುಭಾಶ್ ಚಂದ್ರ ಕುಂಥೈ, ಎನ್ ವೈ ಕೆ ಜಿಲ್ಲಾ ಯುವ ಅಧಿಕಾರಿ ಎ ನಾಗಲಕ್ಷ್ಮಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.