ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರದಿಂದ ಸೇಡಿನ ರಾಜಕಾರಣ- ಶಿವಮೊಗ್ಗ ಸಂಸದರ ಮನೆಗೆ ಮುತ್ತಿಗೆ -ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ.
ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಸೋನಿಯಾ, ರಾಹುಲ್ ಗಾಂಧಿ ಕೈವಾಡವಿದೆ ಎಂದು ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಆಸ್ತಿ ಮುಟುಗೋಲಿಗೆ ED ಮೂಲಕ ಪ್ರಯತ್ನ ಮಾಡಿದ ಕೇಂದ್ರ ಸರಕಾರದ ವಿರುದ್ಧ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಎಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಬೀದಿಗಿಳಿದು ಧರಣಿ ನಡೆಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಕೇಂದ್ರ ಸರ್ಕಾರದ ಪಾಲಿಗೆ ಸಿಂಹಸ್ವಪ್ನರಾಗಿರುವ ರಾಹುಲ್ ಗಾಂಧಿಯವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯದ (ಇಡಿ) ಕ್ರಮ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸೇಡಿನ ರಾಜಕಾರಣ – ವಿರೋಧಿಸಿ ಬಿಜೆಪಿ ಸಂಸದರ ಮನೆ ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ ರಂಗನಾಥ್, ಹೆಚ್.ಪಿ. ಗಿರೀಶ್, ಎಂ ಪ್ರವೀಣ್ ಕುಮಾರ್, ಎಸ್ ಎಂ ಶರತ್ ಮರಿಯಪ್ಪ, ಎಮ್ ರಾಹುಲ್, ಎಸ್.ಬಸವರಾಜ್, ಕವಿತಾ, ಕೆ ಎಲ್ ಪವನ್ , ಎಂ.ರಾಕೇಶ್, ಮೋಹನ್ ಸೋಮಿನಕೊಪ್ಪ, ರಾಜೇಶ್ ಮಂದಾರ, ದಿವಾಕರ್, ಗುರುಪ್ರಸಾದ್, ನದೀಮ್, ಇರ್ಫಾನ್ , ಸಂದೀಪ್ ಸುಂದರರಾಜ್ , ಭಾಸ್ಕರ್ , ರಾಹುಲ್ , ಪ್ರದೀಪ್ ರಾಮೀನ ಕೊಪ್ಪ, ಪುರ್ಲೆ ಮಂಜು ಎಸ್ ಸಿ ಪ್ರವೀಣ್ ಕುಮಾರ್, ಮಿಥುನ್, ವಸಂತ, ರಾಮ್ ಕುಮಾರ್, ಪುನೀಲ್, ಹಾಗೂ ಕಾರ್ಯಕರ್ತರು ಇದ್ದರು