ಬೆಂಗಳೂರು: ಕರ್ನಾಟಕ ಸರ್ಕಾರ ಇತ್ತೀಚೆಗೆ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ರಾಜ್ಯದಲ್ಲಿ ಗಣತಿ ಮಾಡಿದ್ದು ಈ ಸಮೀಕ್ಷೆಯಲ್ಲಿ ನೇಕಾರ ಸಮುದಾಯವನ್ನು ಸರಿಯಾದ ಮಟ್ಟದಲ್ಲಿ ಗಣನೆಗೆ ತೆಗೆದುಕೊಳ್ಳದೆ ಅಂಕಿ ಅಂಶಗಳು ಲೋಕದೋಷವಾಗಿದೆ, ಹಳೆಯ ಜನಸಂಖ್ಯೆಗೂ ಸಮೀಕ್ಷೆ ನಡೆಸಿದ ಜನಸಂಖ್ಯೆಗಳು ಅಜಗಜಾಂತರ ವ್ಯತ್ಯಾಸವಾಗಿದೆ ಎಂದು ಶ್ರೀ ವಿಶ್ವಕರ್ಮ ಸಂಪನ್ಮೂಲ ಚಾರಿಟೇಬಲ್ ಟ್ರಸ್ಟ್ ನ ಡಾ ಶ್ರೀ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಹೊರಡಿಸಿರುವ ಜಾತಿ ಗಣತಿ ಅಂಕಿ ಅಂಶಗಳ ದತ್ತಾಂಶ ಸಂಪೂರ್ಣವಾಗಿ ಲೋಪ ದೋಷಗಳಿಂದ ಕೂಡಿದ್ದು ವಿಶ್ವಕರ್ಮ ಸಮಾಜಕ್ಕೆ ತಪ್ಪು ಸಂದೇಶ ಹೋಗಿದೆ ನಮ್ಮ ವಿಶ್ವಕರ್ಮ ಸಮಾಜದಲ್ಲಿ ಗೊಂದಲ ಉಂಟಾಗಿದೇ. ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯ ಸರಿಸುಮಾರು 16 ರಿಂದ 17 ಲಕ್ಷ ಜನಸಂಖ್ಯೆಯನ್ನು ಹೊಂದಿದೆ ಆದರೆ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಕೇವಲ ಆರು ಲಕ್ಷ ಜನಸಂಖ್ಯೆ ಇರೋದನ್ನು ತೋರಿಸಲಾಗಿದೆ ಇದು ಅಸ್ಪಷ್ಟವಾಗಿದ್ದು ಸಮಾಜಕ್ಕೆ ಭಾರಿ ಪ್ರಮಾಣದಲ್ಲಿ ತಪ್ಪು ಸಂದೇಶ ರವಾನೆಯಾದಂತಾಗಿದೆ ಈ ಕೂಡಲೇ ಸರ್ಕಾರ ತಿದ್ದುಪಡಿ ಮಾಡಬೇಕೆಂದು ಸರ್ಕಾರಕ್ಕೆ ಸಮಾಜದಿಂದ ಮನವಿ ಮಾಡಿದರು.
ಸರ್ಕಾರದ ಪರೀಕ್ಷೆಯಲ್ಲಿ ಲೋಪ ದೋಷಗಳು ಆಗಿರುವುದನ್ನು ತಕ್ಷಣ ಮರು ಪರಿಷ್ಕರಣೆ ನಡೆಸಿ ವಿಶ್ವಕರ್ಮ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ. ಸಮಾಜದಲ್ಲಿ ಉಪ ಪಂಗಡಗಳಿದ್ದು ಅವುಗಳಲ್ಲಿ ಸಹ ಅಂಕಿ ಅಂಶಗಳ ಕೊರತೆ ಉಂಟಾಗಿದೆ. ಇದು ಜಾತಿ ಗಣತಿ ಅಲ್ಲದಿದ್ದರೂ ಸಹ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಸಮೀಕ್ಷೆ ಆಗಿದ್ದರು ಸಹ ಸರ್ಕಾರ ಯಾವ ಆಧಾರದ ಮೇಲೆ ನಮ್ಮ ಸಮುದಾಯ 6 ಲಕ್ಷ ಜನಸಂಖ್ಯೆ ಇದೆ ಎಂದು ಹೇಳಿರುವುದು ತಿಳಿಯಪಡಿಸಲಿ ಎಂದರು.
ವಿಶ್ವಕರ್ಮ ಜನಸೇವಾ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಡಾ. ವಸಂತ ಮುರಳಿ ಅವರು ಮಾತನಾಡಿ, ಸರ್ಕಾರದ ವತಿಯಿಂದ ಮಾಡಿರುವ ಸಮೀಕ್ಷೆ ನಮ್ಮ ಸಮುದಾಯದ ಮೇಲೆ ಸಾಕಷ್ಟು ವ್ಯಕ್ತಿತ್ವ ಅಂತ ಪರಿಣಾಮಗಳು ಬೀರುತ್ತವೆ ಅದಲ್ಲದೆ ಸಮೀಕ್ಷೆಯಲ್ಲಿನ ಅಂಕಿ ಅಂಶಗಳು ಸಾಕಷ್ಟು ಲೋಪ ದೋಷಗಳಿಂದ ಕೂಡಿದ್ದು ಮಾಡಬೇಕಾಗಿದೆ.
ವಿಶ್ವಕರ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸಿಎಂ ಸಿದ್ದರಾಮಯ್ಯ ಅವರು ಗಣನೆಗೆ ತೆಗೆದುಕೊಳ್ಳುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ಆಗಿರುವ ತೊಂದರೆಗಳನ್ನು ಸರಿಪಡಿಸುತ್ತಾರೆ ನಿಮ್ಮ ನಂಬಿಕೆ ಇದೆ, ನಾನು ಒಬ್ಬ ಕಾಂಗ್ರೆಸ್ನ ಪ್ರತಿನಿಧಿಯಾಗಿ ಹೇಳುವುದು ಇಷ್ಟೇ.
ಸಮೀಕ್ಷೆಯಲ್ಲಿ ಆಗಿರುವ ತೊಂದರೆಯನ್ನು ಮಾತ್ರ ನಾವು ಸರ್ಕಾರಕ್ಕೆ ಕೇಳಲು ಇಚ್ಛೆ ಪಡುತ್ತೇವೆ ಹೊರತು ನಾವು ಸರ್ಕಾರಕ್ಕೆ ಈ ಮೂಲಕ ಮನವಿ ಮಾಡುತ್ತೇವೆ ಆದರೆ ಯಾವುದೇ ಪ್ರತಿಭಟನೆ ಧರಣಿಗಳನ್ನು ಮಾಡುವ ಗೋಜಿಗೆ ಹೋಗುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಸ್ವಾಮೀಜಿಗಳು ಹಾಗೂ ವಿಶ್ವಕರ್ಮ ಜನ ಸೇವಾ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಇದೆ ವೇಳೆ ಉಪಸ್ಥರಿದ್ದರು.