ಬೆಂಗಳೂರು, : AYUSH TV ನೇತೃತ್ವದಲ್ಲಿ ಆಯೋಜಿಸಿದ್ದ ಗ್ಲೋಬಲ್ ವೆಲ್ ಬಿಯಿಂಗ್ ಕಾನ್ಫ್ಲೂಯೆನ್ಸ್ 2025 ಸಮಗ್ರ ಆರೋಗ್ಯದ ಕ್ರಾಂತಿಯೊಂದನ್ನು ಆರಂಭಿಸಿದ ಪ್ರಥಮ ಅಧ್ಯಾಯವಾಗಿದೆ, (GWC 2025) ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಭವ್ಯವಾಗಿ ನೆರವೇರಿಸಲಾಯಿತು. ಏಪ್ರಿಲ್ 11ರಿಂದ 14ರವರೆಗೆ ನಡೆದ ಈ ಸಮಾವೇಶವು ಆಯುಷ್ ಕ್ಷೇತ್ರದಲ್ಲಿ ವಿನೂತನ ಕಲ್ಪನೆ, ಆವಿಷ್ಕಾರ ಮತ್ತು ಏಕೀಕರಣಗಳ ಅಪೂರ್ವ ಸಂಯೋಜನೆಯಾಗಿ ಪರಿಣಮಿಸಿತು. ಒಟ್ಟಾರೆ ಆರೋಗ್ಯದ ಭವಿಷ್ಯಕ್ಕಾಗಿ ಧೃಢವಾದ ಹಾಗೂ ವಿನೂತನ ದೃಷ್ಟಿಕೋನವನ್ನು ಸಮಾವೇಶ ರೂಪಿಸಿದೆ.
ಕಾರ್ಯಕ್ರಮದ ಎರಡು ದಿನಗಳಲ್ಲಿ 5,000ಕ್ಕಿಂತ ಹೆಚ್ಚು ಆಯುಷ್ ವೈದ್ಯರು ಹಾಗೂ ವಿದ್ಯಾರ್ಥಿಗಳು ವಿಜ್ಞಾನಾಧಾರಿತ ಸಿದ್ಧಾಂತಗಳ ಮತ್ತು CME (ಮುಂದುವರೆದ ವೈದ್ಯಕೀಯ ಶಿಕ್ಷಣ) ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಉತ್ತಮ ಸಂವಾದಗಳಿಗೆ, ಜ್ಞಾನದ ವಿನಿಮಯಕ್ಕೆ ಮತ್ತು ಆಯುಷ್ ವ್ಯವಸ್ಥೆಗಳ ಕ್ಲಿನಿಕಲ್ ಉತ್ತೇಜನಕ್ಕೆ ಅಡಿಪಾಯವನ್ನು ರೂಪಿಸಲಾಯಿತು.
ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರು ಈ ಸಮಾವೇಶವನ್ನು ಉದ್ಘಾಟಿಸಿ, ಆಯುಷ್ ವೈದ್ಯ ಪದ್ಧತಿಯ ಉಪಯೋಗಗಳು ಸಾರ್ವಜನಿಕರಿಗೆ ಲಭಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಪರಿಶೀಲನೆ ಹಾಗೂ ಕಾನೂನಾತ್ಮಕ ಅಂಶಗಳ ಬಗ್ಗೆ ಚರ್ಚಿಸಿ ಜಾರಿಗೊಳಿಸುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಆರೋಗ್ಯ ಸಚಿವರ ಪ್ರೋತ್ಸಾಹ ಹಾಗೂ ಕಾಳಜಿಯ ಮಾತುಗಳು ಆಯುಷ್ ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದವು. ಹಾಗೂ ಆಯುಷ್ –ಆಧಾರಿತ ಏಕೀಕೃತ ಸೇವೆಗಳ ಭವಿಷ್ಯವನ್ನು ಮತ್ತಷ್ಟು ಬಲಪಡಿಸಿತು. ಈ ಸಮಾವೇಶದ ಪ್ರಮುಖ ಧ್ಯೇಯ ರೋಗ ನಿರೋಧಕ ಸ್ವಾಸ್ಥ್ಯ ಅಭಿಯಾನಕ್ಕೆ ಚಾಲನೆ ನೀಡುವುದಾಗಿದ್ದು.
ರೋಗನಿರೋಧಕ ಶಕ್ತಿಯ ಬಲವರ್ಧನೆ ಮತ್ತು ತಡೆಗಟ್ಟುವಲ್ಲಿ ಆರೋಗ್ಯದ ಮಹತ್ವದ ಬಗ್ಗೆ ದೇಶಾದದ್ಯಂತ ಅರಿವು ಮೂಡಿಸುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ. ಸುಮಾರು 6,500ಕ್ಕೂ ಹೆಚ್ಚು ಸೌಹಾರ್ದ ಸಹಕಾರ ಸಂಘ ಸಂಸ್ಥೆಗಳು ಹಾಗೂ ಕನ್ನಡ ಚಲನಚಿತ್ರ ರಂಗದ ಬೆಂಬಲದಿಂದ, ಈ ಅಭಿಯಾನ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನವನ್ನುಂಟು ಮಾಡಿದ್ದು ಸಾರ್ವಜನಿಕ ಆರೋಗ್ಯದ ಜಾಗೃತಿಗೆ ನೂತನ ಅಧ್ಯಾಯ ಆರಂಭವಾಗಲಿದೆ ಕಾರ್ಯಕ್ರಮದ ಮತ್ತೊಂದು ಅವಿಸ್ಮರಣೀಯ ಕ್ಷಣವೆಂದರೆ, AYUSH TV ಉಪಾಧ್ಯಕ್ಷರಾದ ಶ್ರೀ ಹರೀಶ್ ಆರ್. ಅವರಿಗೆ “AYUSH ಬ್ರ್ಯಾಂಡಿಂಗ್ ವಿಷನರಿ ಲೀಡರ್” ಪ್ರಶಸ್ತಿ ಪ್ರದಾನ. GWC 2025 ಮತ್ತು ಇಮ್ಯೂನ್ ವೆಲ್ನೆಸ್ ಮೂವ್ಮೆಂಟ್ ಯೋಜನೆಯ ರೂಪು ರೇಷೆಗಳು ಹಾಗೂ ಧ್ಯೇಯದ ಕುರಿತು ಅಭಿಯಾನದ ಪ್ರಮುಖ ಸೂತ್ರದಾರರಾಗಿರುವ ಹರೀಶ್. ಆರ್ ಅವರ ಸ್ಫೂರ್ತಿದಾಯಕ ನುಡಿಗಳು ನೆರೆದಿದ್ದ ಸಮೂಹದ ಉತ್ಸಾಹವನ್ನು ಧ್ವಿ ಗುಣಗೊಳಿಸಿತು.
“ಇದು ಪ್ರಾರಂಭ ಮಾತ್ರ. ನಾವು ಬಿತ್ತಿದ ಬೀಜದ ಫಲವಾಗಿ, ಆಯುಷ್ ವೈದ್ಯ ಪದ್ದತಿಯು ಮುಂದೆ ಮಾನವ ಕಲ್ಯಾಣಕ್ಕಾಗಿ ಜಾಗತಿಕ ಶಕ್ತಿಯಾಗಿ ರೂಪುಗೊಳ್ಳಲಿದೆ.” ಎಂದು ಆಯುಷ್ ಟಿವಿ ಉಪಾಧ್ಯಕ್ಷರಾದ ಹರೀಶ್. ಆರ್ ರವರು ತಿಳಿಸಿದರು.
‘ಓಗ್ಗರಣೆ ಡಬ್ಬಿ’ ಖ್ಯಾತಿಯ ಶ್ರೀ ಮುರಳಿ ಅವರ ನೇತೃತ್ವದಲ್ಲಿ ನೆಡೆದ “ಆಯುಷ್ ಸೂಪರ್ ಚರ್ಫ್ ಚೆಫ್ ” ಸ್ಪರ್ಧೆಯು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿತು. ಹಲಸು ಹಾಗೂ ಮಾವಿನ ಹಣ್ಣುಗಳಿಂದ ತಯಾರಿಸಿದ ಸ್ವಾದಿಷ್ಟ ಭರಿತ ಸಾಂಪ್ರದಾಯಿಕ ತಿನಿಸುಗಳು ಪ್ರೇಕ್ಷಕರಿಗೆ ಆಕರ್ಷಕ ವಾಗಿದ್ದವು.
ಈ ಕಾರ್ಯಕ್ರಮವನ್ನು AYUSH TV ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರಿಕೃಷ್ಣ ರವರ ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿ ಹಾಗೂ ತಂಡದ ಪರಿಶ್ರಮದೊಂದಿಗೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಯಿತು.
ಗ್ಲೋಬಲ್ ವೆಲ್ಬೀಯಿಂಗ್ ಕಾನ್ಫ್ಲೂಯೆನ್ಸ್ 2025 ಕೇವಲ ದಾರಿಯನ್ನು ತೋರಿಸಿಲ್ಲ—ಇದು ಗುರಿಯನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನಿಸಿದೆ. ನೀತಿ ಮಾರುಕಟ್ಟೆಗಳಲ್ಲಿ ಪ್ರೇರಣೆ, ಶಕ್ತಿಶಾಲಿ ಪಾಲುದಾರಿಕೆಗಳ ನಿರ್ಮಾಣ ಮತ್ತು ಜಾಗತಿಕ ಏಕೀಕೃತ ಆಯುಷ್ ಭವಿಷ್ಯಕ್ಕಾಗಿ ಈ ಕಾರ್ಯಕ್ರಮವು ಶಾಶ್ವತ ಅಡಿಪಾಯವಾಗಿದೆ.