ಶಿವಮೊಗ್ಗ/ ಸಾಗರ : ತಾಲ್ಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಾಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲ್ಲೂಕು ಸಮಿತಿಯ ಸರ್ವ ಸದಸ್ಯರ ಸಭೆ ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ತಾಲ್ಲೂಕು ಸಮಿತಿಯ ರಚನೆಯನ್ನು ಮಾಡಲಾಯಿತು. ಸಾಗರ ತಾಲ್ಲೂಕು ಸಂಚಾಲಕರನ್ನಾಗಿ ಬೈರಾಪುರದ ಪ್ರೇಮ್ ರವರನ್ನು ಆಯ್ಕೆ ಮಾಡಲಾಯಿತು.
ತಾಲ್ಲೂಕು ಸಂಘಟನಾ ಸಂಚಾಲಕರನ್ನಾಗಿ ತ್ಯಾಗರ್ತಿಯಾ ಸಚಿನ್, ಕಾಗೋಡಿನ ಕೆಎನ್ ಸುಬ್ಬಪ್ಪ, ಕಾಗೋಡು ದಿಂಬದ ಸುಬ್ಬಪ್ಪ, ತಾಳಗುಪ್ಪದ ಲಕ್ಷ್ಮಣ, ಕಾಂಗ್ರೆಸ್ ಅಣ್ಣಪ್ಪ, ತ್ಯಾಗರ್ತಿಯಾ ಮಂಜು, ಕನ್ನೂರಿನ ಮಂಜಪ್ಪ ಹುರುಳಿಯ ನಾಗಪ್ಪ ಇವರುಗಳನ್ನು ಆಯ್ಕೆ ಮಾಡಲಾಯಿತು.
ತಾಲ್ಲೂಕು ಖಜಾಂಚಿಯಾಗಿ ಗಾಂಧಿನಗರದ ಎಚ್. ಸಿ.ಮಂಜಪ್ಪ ಇವರನ್ನು ಆಯ್ಕೆ ಮಾಡಲಾಯಿತು.ತಾಲ್ಲೂಕು ಸಮಿತಿಯ ಸದಸ್ಯರನ್ನಾಗಿ ಶೇಖರ್ ಬಾಳಗೋಡು ರವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಮಿತಿಯ ಸದಸ್ಯರನ್ನಾಗಿ ಬಂಗಾರಪ್ಪ ಶುಂಠಿಕೊಪ್ಪ ರವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಗೌತಮಪುರದ ಬೂದ್ಯಪ್ಪ ರವರನ್ನು ಆಯ್ಕೆ ಮಾಡಲಾಯಿತು.