ಬೆಂಗಳೂರು: ಗ್ರಾಮ ಪಂಚಾಯತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದೆ, ನಡೆಯದಿದ್ದರೂ ನಕಲಿ ದಾಖಲೆ ಸೃಷ್ಟಿಸಿಕೊಂಡು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಘಟನೆ ಮಣೂರ ಗ್ರಾ.ಪಂಯಲ್ಲಿ ನಡೆದಿದೆ ಎಂದು ಜಾಂಭವ ಯುವ ಸೇನಾ ರಾಜ್ಯ ಸಮಿತಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರಾದ ಡಾ.ಮಲಕಪ್ಪ ಯ ಬಾಗೇವಾಡಿ ಅವರು ಗಂಭೀರ ಆರೋಪ ಮಾಡಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ, ದೇವರಹಿಪ್ಪರಗಿ ತಾಲೂಕಿನ ಮಣೂರ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಾದ ವಿನೋದ್ಧ ರಾಠೋಡ ಇವರು 15 ನೇ ಹಣಕಾಸು ಯೋಜನೆಯಡಿ.ಪಿ.ಆರ್.ಡಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದೆ ಅಧಿಕಾರಿಗಳ ಶಾಮಿಲಿನಿಂದ ಕೋಟ್ಯಾಂತರ ರೂಪಾಯಿ ಹಣ ಗುಳುಂ ಮಾಡುವ ಮೂಲಕ ಅವ್ಯವಹಾರವಾಗಿದೆ ಎಂದು ತಿಳಿಸಿದರು.
ವರ್ಗ 1 ರ ಅಡಿಯಲ್ಲಿ ಅವ್ಯವಹಾರ ಆಗಿದ್ದು ಪಿಡಿಓ ರವರನ್ನು ಸೇವೆಯಿಂದ ಅಮಾನತ್ತು ಮಾಡಿ ಗ್ರಾ.ಪಂ ಅಧ್ಯಕ್ಷರ ಸದಸ್ಯತ್ವ ರದ್ದು ಮಾಡಿ ದುರ್ಭಳಿಕೆ ಮಾಡಿಕೊಂಡಿರುವ ಹಣವನ್ನು ಸರಕಾರಕ್ಕೆ ಮರಲಿಸಬೇಕೆಂದು ಸರ್ಕಾರಕ್ಕೆ ಹಾಗು ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದ್ದಾರೆ.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ತಮಗೆ ತಿಳಿಸುವುದೆನಂದರೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಣೂರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರಾದ ಲಕ್ಷ್ಮಿಬಾಯಿ, ಬಿರಾದರ ಹಾಗೂ ಗ್ರಾ.ಪಂ.ಅಭಿವೃದ್ಧಿ ವಿನೋದ ರಾಠೋಡ ಇವರು ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಯಾವುದೆ ಕಾಮಗಾರಿ ಮಾಡದೆ, ಎಸ್ಪಿಮೇಂಟ್ ಮತ್ತು ಕ್ರಿಯಾಯೋಜನೆ ಮಾಡದೆ ಮನಸ್ಸಿಗೆ ಬಂದ ಹಾಗೆ ಗ್ರಾ.ಪಂ.ಹಣವನ್ನು ಕೊಳ್ಳೆ ಹೊಡೆದಿರುತ್ತಾರೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಪಿಡಿಆರ್ ಯೋಜನೆಯಡಿ ದುರ್ಭಳಿಕೆಯಾದ ಮೊತ್ತ. 71,90,45 (ಎಪ್ಪತ್ತೊಂದು ಲಕ್ಷ ತೊಂಬತ್ತು ಸಾವಿರದ 45 ರೂಪಾಯಿಗಳು) (0) ದೇವೂರ 265-4350-00, (2) – 2122995 -00, (3) -2412700 =00 ಈ ಮೂರು ಗ್ರಾಮಗಳಲ್ಲಿ ಯಾವುದೆ ರಿತಿಯಾಗಿ ಕಾಮಗಾರಿ ಮಾಡದೆ ಅನಾಮತ ಹಣ ಡ್ರಾ ಮಾಡಿಕೊಂಡಿರುತ್ತಾರೆ. ಇದು ಸರಿಯಾದ ಕ್ರಮವಲ್ಲ.
3 ನೇ ಹಣಕಾಸು ಯೋಜನೆಯಡಿ ಅಧ್ಯಕ್ಷರಾದ ವಾಲುಬಾಯಿ ಕೇಸ್ ರಾಠೋಡ್ ಹಾಗೂ ಗ್ರಾಪಂ ವಿನೋದ ಅರೊಡ ಇವರು ಕೂಡಿಕೊಂಡು ಸೂಮಾರು ಅಂದಾಜು ಮೊತ್ತ 13475874=00 (ಒಂದುಕೊಟಿ ಮೂವತ್ತು ನಾಲ್ಕು ಹದ ಎಪ್ಪತ್ತೈದು ಸಾವಿರದ ಎಂಟನೂರ ಎಪ್ಪತ್ತನಾಲ್ಕು ರೂಪಾಯಿಗಳು ಖರ್ಚು ಹಾಕಿದ್ದು, ಇವರು ಯಾವುದೇ ಕಾಮಗಾರಿ ಇಲ್ಲದೆ ವಾಟರ್ ಸಪ್ಲಾಯಿಗೆ ಅಂತ ಹಣ ದುರ್ಭಳಕೆ ಮಾಡಿಕೊಂಡಿದ್ದಾರೆ.
ಮನೆ ತೆರಿಗೆಯಲ್ಲಿ ವಸೂಲಿಯಾದ ಹಣ ವರ್ಗ 1 ರ ಖಾತೆಗೆ ಜಮೆಯಾದ ಹಣ 1387283-00 (ಹದಿಮೂರು ಲಕ್ಷ ಎಂಬತ್ತೇಳು ಸಾವಿರದ ಎರಡು ನೂರಾ ಎಂಬತ್ತೂ ಮೂರು) ರೂಪಾಯಿಗಳು ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಯಾವೊಬ್ಬ ಸದಸ್ಯರಗೂ ಕೂಡಾ ಗೊತ್ತಾಗದ ಹಾಗೆ ಹಣ ದುರ್ಭಳಿಕೆ ಮಾಡಿ ಕೊಂಡಿದ್ದಾರೆ. ವರ್ಗ 1 ರ ಖಾತೆಗೆ ಜಮೆಯಾದ ಶಿಶುಪಾಲನದ ಅನುದಾನ ಹಾಗೂ ಎಸ್ಸಿ-ಎಸ್ಪಿ ಜನಾಗದ ಸಮಾಜದ ವಾರ್ಡಿನಲ್ಲಿ ಕೆಲಸ ಮಾಡದೆ ಹಣ ದುರುಪಯೊಗ ಮಾಡಿಕೊಂಡಿದ್ದಾರೆ.
ಅಕ್ರಮವಾಗಿರುವ ಗ್ರಾಮ ಪಂಚಾತಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಅವ್ಯವಹಾರ ಆಗಿರುವ ಬಗ್ಗೆ ಸತ್ಯ ಕಂಡುಬಂದಲ್ಲಿ ಸದರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಶಾಮಿಲ್ಲಾಗಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಿ ಗ್ರಾ.ಪಂ.ಅಧ್ಯಕ್ಷರ ಸದಸ್ಯತ್ವ ರದ್ದು ಮಾಡಿ ಸರಕಾರಕ್ಕೆ ಮೊಸ ಮಾಡಿ ಸಾರ್ವಜನಿಕರ ತೆರಿಗೆ ಹಣ ದುರ್ಭಳಕೆ ಮಾಡಿ ಕೊಂಡಿರುವ ಸಂಬಂಧಪಟ್ಟ ಪ್ರಕರಣವನ್ನು ದಾಖಲಿಸಿ ಶಿಸ್ತು ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರ ತೆರಿಗೆ ಹಣ ನ್ಯಾಯಯುತವಾಗಿ ಕಾಪಾಡಿಕೊಂಡು ಇಲ್ಲಿನ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಬೆಕೆಂದು ಸಂಬಂಧಪಟ್ಟ ಅಧಿಕಾರಿಗಳು ಹಾಗು ಇಲಾಖೆಗೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸೇನಾದ ಸಂಸ್ಥಾಪಕ ಅಧ್ಯಕ್ಷ ಡಾ.ರಮೇಶ್ ಚಕ್ರವರ್ತಿ ಸೇರಿದಂತೆ ಸೇನಾದ ಪದಾಧಿಕಾರಿಗಳು ಭಾಗವಹಿಸಿದ್ದರು.