ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಬೇಡ್ಕರ್ ಅವರು ದೇಶಕ್ಕೆ, ನಾಡಿಗೆ ಕೊಡುಗೆ ನೀಡಿರುವುದನ್ನು ಗುರುತಿಸಿ 200 ಮೀ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಬೀದರ್ ನಿಂದ ಬೆಂಗಳೂರಿನ ವರೆಗೆ ನಡಿಗೆ ಮಾಡಿ ಸರ್ಕಾರಕ್ಕೆ ಭೀಮ ಪ್ರಜಾ ಸಂಘ ದಿಂದ ಸಂಸ್ಥಾಪಕ ಅಧ್ಯಕ್ಷರಾದ ವೈಟ್ ಫೀಲ್ಡ್ ಮುರುಗೇಶ್ ಒತ್ತಾಯ ಮಾಡಿದರು.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 45 ದಿನಗಳ ಪಾದಯಾತ್ರೆ ಮುಗಿಸಿ ಭೀಮ್ ಪ್ರಜಾ ಸಂಘದ ಸಂಸ್ಥಾಪಕ ಮಾತನಾಡಿದರು, ಬೀದರ್ ನ ಜಿಲ್ಲಾಧಿಕಾರಿ ಕಚೇರಿಯಿಂದ ಮಾರ್ಚ್ 6ರಿಂದ ಪ್ರಾರಂಭವಾದ ಪಾದಯಾತ್ರೆ ಏ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕೊನೆಗೊಂಡಿದೆ.
200 ಮೀ ಎತ್ತರದ ಅಂಬೇಡ್ಕರ್ ಪುತ್ಥಳಿ ಮಾಡಬೇಕೆಂದು ಒತ್ತಾಯಿಸಿ 2023ರಲ್ಲಿ ಸಚಿವರಿಗೆ, ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಆದರೆ ಮನವಿಗೆ ಸ್ಪಂದನೆ ಮಾಡದಿದ್ದಾಗ ಜಾತ ಹಮ್ಮಿಕೊಳ್ಳಲಾಯಿತು ಎಂದರು. ಪುತ್ಥಳಿ ನಿರ್ಮಾಣ ಮಾಡಬೇಕೆಂದು 1035 ಕಿಮೀ ವರೆಗೆ ಕಾಲ್ನಡಿಗೆ ಮೂಲಕ ಜಾತ ಮಾಡಲಾಯಿತು.
ದಲಿತ ರಾಮಯ್ಯ ಎಂದು ಹೆಸರು ಪಡೆದಿದ್ದಾರೆ. ಆದರೆ ದಲಿತರ ಬಗ್ಗೆ ಕಾಳಜಿ ಇಲ್ಲದ ರೀತಿ ವರ್ತನೆ ಮಾಡಿದ್ದಾರೆ. ಈ ಬಗ್ಗೆ ಸಂಘಟನೆ ವತಿಯಿಂದ ಎಲ್ಲೆಡೆ ಅರಿವಿನ ಬೆಳಕು ಚೆಲ್ಲಿದರು. ಕೇವಲ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾತ್ರವಲ್ಲದೆ, ಸತ್ಯ ಮೇವ ಜಯತೆ ಹಿಂದಿಯಲ್ಲಿರುವುದನ್ನು ಸಂಸ್ಕೃತ ದಲ್ಲಿ ಹೋಲಿಕೆ ಆಗುವಂತೆ ಕನ್ನಡದಲ್ಲಿ ಬರೆಸಬೇಕೆ ಇದರ ಜೊತೆಗೆ ಹತ್ತು ಹಲವು ಬೇಡಿಕೆಗಳನ್ನಿಬ್ರಾಜಯ ಸರ್ಕಾರ ಮಾಡಬೇಕೆಂದು ಒತ್ತಾಯಿಸಿದರು.
ಬೀದರ್ ಜಿಲ್ಲೆ ಸ್ವಾಭಿಮಾನೀ ಸ್ಥಳವಾಗಿದ್ದು, ಬಸವಣ್ಣ ಹುಟ್ಟಿದ ಸ್ಥಳವಾಗಿದೆ. ಹೀಗಾಗಿ ತೆಲಂಗಾಣ, ಹೈದರಾಬಾದ ನಲ್ಲಿ ನೂರಾರು ಅಡಿ ಎತ್ತರದಲ್ಲಿ ಮಾಡಿರುವ ಹಾಗೆ ನಮ್ಮ ರಾಜ್ಯದಲ್ಲಿ ಅಂಬೇಡ್ಕರ ಅವರ ಪುತ್ಥಳಿ ನಿರ್ಮಾಣ ಮಾಡಬೇಕೆಂದರು. ದೇಶದಲ್ಲಿ ಅತ್ಯಂತ ಎತ್ತರದ ಅಂಬೇಡ್ಕರ್ ಪುತ್ಥಳಿ ಮಾಡುತ್ತೇವೆ ಎಂದು ಹೇಳುತ್ತಾರೆ, ಅದು ಒಂದು ಕಡೆ ಮಾಡಲಿ ಅದಕ್ಕಿಂತ ಮೊದಲು ರಾಜ್ಯದಲ್ಲಿ 200 ಮೀ ಎತ್ತರದ ಪುತ್ಥಳಿ ನಿರ್ಮಾಣ ವಾಗಬೇಕೆಂದು ಸರ್ಕಾರಕ್ಕೆ ಒತ್ತಾಯಸಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು, ಹಲವು ದಲಿತ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಭೀಮ ಅಭಿಮಾನಿಗಳು ಇದೇ ವೇಳೆ ಉಪಸ್ಥಿತರಿದ್ದರು.