ಬೆಂಗಳೂರು: ತಂತ್ರಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯ. ನಮ್ಮ ದೇಶದಲ್ಲಿರುವ ಜ್ಞಾನದ ಭಂಡಾರ ಪ್ರಪಂಚದಲ್ಲಿ ಎಲ್ಲೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕುಮಾರ ಪಾರ್ಕ್ ಪಶ್ಚಿಮ ವ್ಯಾಪ್ತಿಯ ಕಿಯೋನಿಕ್ಸ್ ಸಂಸ್ಥೆಯ ಆವರಣದಲ್ಲಿ ಕಿಯೋನಿಕ್ಸ್ ಸಂಸ್ಥೆಯ ಇ-ಕಾಮರ್ಸ್ ಪೆÇೀರ್ಟಲ್ ಉದ್ಘಾಟಿಸಿ ಮಾತನಾಡಿದ ಅವರು, ಈ ಪೆÇೀರ್ಟಲ್ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಯಗಳಲ್ಲಿನ ಇ-ಪೆÇ್ರಕ್ಯೂರ್ಮೆಂಟ್ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ ಎಂದು ತಿಳಿಸಿದರು.
ನಾನು ಶಾಲೆಯಲ್ಲಿ ಓದುವಾಗ ಎಲೆಕ್ಟ್ರಾನಿಕ್ ಸಿಟಿ ಅಸ್ತಿತ್ವಕ್ಕೆ ಬಂದಿತು. ಕೇಂದ್ರದಲ್ಲಿ ಎಸ್.ಎಂ ಕೃಷ್ಣ ಅವರು ಹಾಗೂ ರಾಜ್ಯದಲ್ಲಿ ವೀರಪ್ಪ ಮೊಯ್ಲಿ ಕೈಗಾರಿಕಾ ಸಚಿವರಾಗಿದ್ದರು. ಎಲೆಕ್ಟ್ರಾನಿಕ್ ಸಿಟಿ ಬೆಳೆದು ಈಗ ಪ್ರಪಂಚವೇ ನಮ್ಮ ಬೆಂಗಳೂರನ್ನು ನೋಡುತ್ತಿದೆ. ನಮ್ಮ ರಾಜ್ಯ ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸಿದೆ ಎಂದು ತಿಳಿಸಿದರು.
ಕಿಯೋನಿಕ್ಸ್ ಸಂಸ್ಥೆ ಗ್ರಾಮೀಣ ಪ್ರದೇಶದ ಯುವಜನತೆಗೆ ತಂತ್ರಜ್ಞಾನ ಕುರಿತು ಶಿಕ್ಷಣ ನೀಡಿದೆ. ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸಿರುವ ಸಂಸ್ಥೆಯು ಎರಡು ವರ್ಷ ಮಂಕಾಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ತಂಡವು ಕಿಯೋನಿಕ್ಸ್ ಗೆ ಹೊಸ ರೂಪಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷ ಶರತ್ಬಚ್ಚೇಗೌಡ ಮಾತನಾಡಿ ಕಿಯೋನಿಕ್ಸ್ನಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ ಸುಮಾರು ಒಂದು ವರ್ಷದ ಸತತ ಪ್ರಯತ್ನದಿಂದ ಇಂದು ಕಿಯೊನಿಕ್ಸ್ ಸಂಸ್ಥೆಯ ಇ-ಕಾಮರ್ಸ್ ಪೆÇೀರ್ಟಲ್ ಉದ್ಘಾಟನೆಯಾಗಿದೆ.
ಕಂಪ್ಯೂಟರ್ ಆಧಾರಿತ ಆದೇಶ, ಪಾವತಿ, ವಿತರಣೆಯವರೆಗಿನ ಎಲ್ಲಾ ಹಂತಗಳು ಇ-ಕಾಮರ್ಸ್ ಪೆÇೀರ್ಟಲ್ ನಲ್ಲಿ ತರಲಾಗಿದೆ. ಇದರಿಂದ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಯಗಳಲ್ಲಿನ ಇ-ಪೆÇ್ರಕ್ಯೂರ್ಮೆಂಟ್ ಪ್ರಕ್ರಿಯೆಯನ್ನು ಸುಲಭಗೊಳ್ಳುವುದರ ಜೊತೆಗೆ ಕೆಲಸ ವಿಳಂಬವಾಗುವುದು ತಪ್ಪುತ್ತದೆ. ತ್ವರಿತ, ಪಾರದರ್ಶಕ, ಕಾಗದ ರಹಿತ ಆಡಳಿತ ವ್ಯವಸ್ಥೆ ತರಲು ಸಹಕಾರಿಯಾಗಿದೆ. ಇ-ಕಾಮರ್ಸ್ ಬಟನ್ ಒತ್ತಿದರೆ ವಿತರಣೆಯಾಗುವವರೆಗೆ ಒಂದು ಪೆÇೀರ್ಟಲ್ ನಲ್ಲಿ ಎಲ್ಲಾ ವಿಷಯಗಳನ್ನು ಒಳಪಡಿಸಲಾಗಿದೆ. ಸಂಸ್ಥೆಯಲ್ಲಿನ ಜಡತ್ವ ಬಿಡಿಸುವ ಕೆಲಸವನ್ನು ಗ್ರಾಮೀಣಾಭಿವೃದ್ದಿ ಸಚಿವರು ಮಾಡಿದ್ದಾರೆ. ಸಚಿವರ ಮಾರ್ಗದರ್ಶನದಿಂದ ಸಂಸ್ಥೆಯ ಲೋಪದೋಷಗಳನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಿಯೋನಿಕ್ಸ್ ಸಂಸ್ಥೆಯ ಸಾಧನೆ ಕುರಿತ ವಿಡಿಯೋ ಹಾಗೂ ಬ್ರೊಚರ್ ಅನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನಾವರಣಗೊಳಿಸಿದರು.
ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಪವನಕುಮಾರ್ ಮಾಲಪಾಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ, ಐಟಿಬಿಟಿ ಕಾರ್ಯದರ್ಶಿ ಏಕ್ರೂಪ್ ಕೌರ್ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.