ಬೆಂಗಳೂರು,: ಲೈಫ್ಸ್ಟೈಲ್ ಮತ್ತು ರೀಟೇಲ್ ಅನುಭವವನ್ನು ನೀಡುವ ಬೆಂಗಳೂರಿನ ಪ್ರೀಮಿಯರ್ ಶಾಪಿಂಗ್ ತಾಣವಾಗಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಥಿಂಗ್ಸ್ ಟು ಡು ಸಹಭಾಗಿತ್ವದಲ್ಲಿ ಪ್ಲಾಜಾದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎರಡು ದಿನಗಳ ಜೋ ಚಾಹೆ ಮ್ಯಾಂಗೋ ಫೆಸ್ಟಿವಲ್ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಪ್ಲಾಜಾದಲ್ಲಿ ಏಪ್ರಿಲ್ 19 ಮತ್ತು 20 ರಂದು ನಡೆದ ಈ ಉತ್ಸವವನ್ನು ಹಣ್ಣುಗಳ ರಾಜನೆಂದೇ ಪ್ರಸಿದ್ಧಿಯಾಗಿರುವ ಮಾವಿಗೆ ಅರ್ಪಣೆ ಮಾಡಲಾಯಿತು. ಈ ಉತ್ಸವವು ಕುಟುಂಬಗಳು, ಆಹಾರ ಪ್ರಿಯರು ಮತ್ತು ಬೇಸಿಗೆಯನ್ನು ಇಷ್ಟಪಡುವ ಉತ್ಸಾಹಿಗಳನ್ನು ಒಟ್ಟಾಗಿ ಸೇರಿಸುವಲ್ಲಿ ಯಶಸ್ವಿಯಾಯಿತು. ಭಾರತದ ಅತ್ಯಂತ ನೆಚ್ಚಿನ ಹಣ್ಣು ಆಗಿರುವ ಮಾವಿನ ಹಣ್ಣನ್ನು ಕೇಂದ್ರೀಕರಿಸಿ ನಡೆಸಲಾದ ಈ ಉತ್ಸವವು ಅನನ್ಯ ಮತ್ತು ವಿನೂತನವಾಗಿತ್ತು.
ಈ ಉತ್ಸವದಲ್ಲಿ ವಿವಿಧ 20 ಮಾವಿನ ತಳಿಗಳು ಮತ್ತು ಮಾವಿನ ಹಣ್ಣಿನಿಂದ ತಯಾರಿಸಲಾದ 50 ಕ್ಕೂ ಹೆಚ್ಚು ಖಾದ್ಯಗಳನ್ನು ಪ್ರದರ್ಶಿಸಲಾಯಿತು. ಇದಕ್ಕೆಂದೇ 20 ಸ್ಟಾಲ್ಗಳನ್ನು ಸ್ಥಾಪಿಸಲಾಗಿತ್ತು. ಮಾವಿನಕಾಯಿಯ ಉಪ್ಪಿನಕಾಯಿಯ ವಿವಿಧ ಬಗೆಗಳು, ಮ್ಯಾಂಗೋ ಸುಶಿ ಮತ್ತು ಟ್ರಾಪಿಕಲ್ ಸ್ಮೂಥಿಗಳಂತಹ ಡೆಸರ್ಟ್ಗಳು ಅತಿಥಿಗಳನ್ನು ಕೈಬೀಸುವಂತೆ ಮಾಡಿದವು. ಈ ಖಾದ್ಯಗಳನ್ನು ಸವಿದ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ವರ್ಣರಂಜಿತ ಸಮ್ಮರ್-ಥೀಮ್ಡ್ ರೀತಿಯಲ್ಲಿ ಅಲಂಕಾರ
ಆಹಾರವಲ್ಲದೇ, ಜೋ ಚಾಹೆ ಮ್ಯಾಂಗೋ ಕೊಡುಗೆಯನ್ನೂ ನೀಡಲಾಯಿತು. ಈ ಉತ್ಸವಕ್ಕೆಂದೇ ಪ್ಲಾಜಾವನ್ನು ವರ್ಣರಂಜಿತ ಸಮ್ಮರ್-ಥೀಮ್ಡ್ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಕುಟುಂಬಗಳಿಗೆ ಮತ್ತು ಮಕ್ಕಳಿಗೆಂದೇ ವಿಶೇಷ ಸ್ಥಳಗಳನ್ನು ಮೀಸಲಿಡಲಾಗಿತ್ತು ಮತ್ತು ಫೋಟೋ ತೆಗೆದುಕೊಳ್ಳಲೆಂದೇ ವಿಶೇಷವಾಗಿ ಅಲಂಕಾರ ಮಾಡಲಾಗಿದ್ದ ಸ್ಥಳವನ್ನೂ ನಿಗದಿಪಡಿಸಲಾಗಿತ್ತು. ಇದಲ್ಲದೇ, ಲೈವ್ ಮ್ಯೂಸಿಕ್ ಪ್ರದರ್ಶನ, ಮಾವಿನ ಹಣ್ಣು ತಿನ್ನುವ ಸ್ಪರ್ಧೆಗಳು ಮತ್ತು ವಿವಿಧ ರೀತಿಯ ಗೇಮ್ಗಳನ್ನೂ ಅತಿಥಿಗಳಿಗಾಗಿ ಆಯೋಜಿಸಲಾಗಿತ್ತು. ಈ ಮೂಲಕ ವಾರಾಂತ್ಯವನ್ನು ಅತ್ಯಂತ ಮನೋರಂಜನದಾಯಕವಾಗಿಸಲಾಯಿತು.
ಈ ಉತ್ಸವಕ್ಕೆ ಎಲ್ಲಾ ವಯೋಮಾನದವರು, ಕುಟುಂಬಗಳು, ಜೋಡಿಗಳು ಮತ್ತು ಸ್ನೇಹಿತರ ಗುಂಪುಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು ಮತ್ತು ಅವರೆಲ್ಲಾ ಉತ್ಸವದ ಮನೋರಂಜನೆಯಲ್ಲಿ ಮಿಂದೆದ್ದರು. ಹೊಸ ತಳಿಯ ಮಾವಿನ ಹಣ್ಣಿನ ರುಚಿ ನೋಡುವುದಾಗಲಿ, ಸ್ಪರ್ಧೆ- ಚಟುವಟಿಕೆಗಳಲ್ಲಿ ಭಾಗಿಯಾಗುವುದಾಗಲೀ ಅಥವಾ ಸಂಜೆಯ ಲೈವ್ ಮ್ಯೂಸಿಕ್ ಕಾರ್ಯಕ್ರಮದಲ್ಲಿ ನೃತ್ಯ ಮಾಡುವುದಾಗಲೀ ಹೀಗೆ ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿತ್ತು. ಈ ಮೂಲಕ ಇಲ್ಲಿಗೆ ಆಗಮಿಸಿದವರೆಲ್ಲರೂ ಮಂದಹಾಸದಿಂದ ರಸಕ್ಷಣಗಳೊಂದಿಗೆ ತೆರಳುವಂತೆ ಮಾಡಲಾಯಿತು.