ಬೆಂಗಳೂರು: ಅದಿತ್ಯ ಬಿರ್ಲಾ ಗ್ರೂವ್ ಅಡಿಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪುಸ್ ಪೇಂಟ್ಸ್ ಇಂದು ಬೆಂಗಳೂರಿನಲ್ಲಿ ತನ್ನ ಹೊಸ ಬಿರ್ಲಾ ಓಪಸ್ ಪೇಂಟ್ ಸ್ಪುಡಿಯೊ (ಕಂಪನಿ ಮಾಲೀಕತ್ವದ ಮತ್ತು ಕಂಪನಿ ನಿರ್ವಹಣೆಯ ಎಕ್ಷೀರಿಯೆನ್ಸ್ ಸ್ಪೋರ್) ವನ್ನು ಇಂದಿರಾನಗರದಲ್ಲಿ ಪ್ರಾರಂಭಿಸಿದೆ.
ಗುರುಗ್ರಾಮ್, ಲಖನೌ, ಮುಂಬೈ ಮತ್ತು ನವಿ ಮುಂಬೈಗಳಲ್ಲಿ ಯಶಸ್ವಿಯಾಗಿ ತನ್ನ ಪೇಂಟ್ ಸ್ಪುಡಿಯೊಗಳ ಯಶಸ್ವಿ ಪ್ರಾರಂಭದ ನಂತರ ಈ ವಿಸ್ತರಣೆಯು ಪೇಂಟ್ ಮತ್ತು ಅಲಂಕರಣದ ಉದ್ಯಮವನ್ನು ಅವಿಷ್ಕಾರ, ಪ್ರೀಮಿಯಂ ಕೊಡುಗೆಗಳು ಮತ್ತು ನೈಜ ತಲ್ಲೀನಗೊಳಿಸುವ ಗ್ರಾಹಕರ ಅನುಭವಕ್ಕೆ ಪರಿವರ್ತಿಸುವ ಬ್ರಾಂಡ್ ಬದ್ಧತೆಯನ್ನು ಮರು ದೃಢೀಕರಿಸಿದೆ.
ಬಿರ್ಲಾ ಓಪಸ್ ಪೇಂಟ್ಸ್ ಬೆಂಗಳೂರು ಸ್ಟುಡಿಯೊವನ್ನು ಸಾಮಾನ್ಯ ರೀಟೇಲ್ ಪ್ರಯಾಣವನ್ನು ಸ್ಪೂರ್ತಿದಾಯಕವಾಗಿ ಪರಿವರ್ತಿಸಲು ಆಲೋಚನಾಪೂರ್ವಕವಾಗಿ ರೂಪಿಸಲಾಗಿದೆ. ಪೇಂಟ್ ಸ್ಟುಡಿಯೊಗಳನ್ನು ಸೃಜನಶೀಲತೆಯ ಕೇಂದ್ರಗಳಾಗಿ ವಿನ್ಯಾಸಗೊಳಿಸಿದ್ದು ಅವು ಸಾಂಪ್ರದಾಯಿಕ ಪೇಂಟ್ ಮಳಿಗೆಗಳ ಆಚೆಗೆ ಮುಂದುವರಿದಿವೆ.
ಇದು ಎಕ್ಷೀರಿಯೆನ್ಸ್ ಸೆಂಟರ್ ಆಗಿದ್ದು ಇದು ಗ್ರಾಹಕರಿಗೆ ಹೊಸ ಐಡಿಯಾಗಳನ್ನು ಕಂಡುಕೊಳ್ಳಲು ಅವಕಾಶ ಕಲ್ಪಿಸುವುದಲ್ಲದೆ ಬಣ್ಣಗಳನ್ನು ನಿಜ ಜೀವನದ ಪರಿಸರದಲ್ಲಿ ಮುಟ್ಟುವ, ಭಾವಿಸುವ ಮತ್ತು ಅನುಭವ ಪಡೆದುಕೊಳ್ಳಲು ಅವಕಾಶ ನೀಡುತ್ತದೆ. ಗ್ರಾಹಕರು ಬಣ್ಣದ ಆಯ್ಕೆ, ರಚನೆಗಳು ಮತ್ತು ಬಳಕೆಯ ತಂತ್ರಗಳ ಕುರಿತು ವೈಯಕ್ತಿಕಗೊಳಿಸಿದ ಸಲಹೆಗಳ ಮೂಲಕ ಉಚಿತ ಪರಿಣಿತರ ಮಾರ್ಗದರ್ಶನ ಪಡೆದುಕೊಳ್ಳಬಹುದು.
ಸುಧಾರಿತ ವಿಶುಯಲೈಸೇಷನ್ ಸಾಧನಗಳು ಗೃಹ ಮಾಲೀಕರಿಗೆ ಅವರ ಆಯ್ಕೆ ಮಾಡಲಾದ ಬಣ್ಣಗಳು ನಿಜ ಜೀವನದ ಹಿನ್ನೆಲೆಗಳಲ್ಲಿ ಹೇಗೆ ಕಾಣುತ್ತವೆ ಎಂದು ಪ್ರಿವ್ಯೂ ಮಾಡಬಹುದು. ಪೇಂಟ್ಸ್ ಆಚೆಗೂ ಪೇಂಟ್ ಸ್ಟುಡಿಯೋ ವಾಲ್ ಪೇಪರ್ ಗಳು, ಡಿಸೈನರ್ ಫಿನಿಷ್ ಗಳು ಮತ್ತು ಸಮಗ್ರ ಅಲಂಕಾರಿಕ ಪರಿಹಾರಕ್ಕೆ ವಿಶೇಷ ಕೋಟಿಂಗ್ ಆಯ್ಕೆಗಳನ್ನು ಕೂಡಾ ಹೊಂದಿರುತ್ತದೆ.
ಈ ಮಳಿಗೆಯು 170+ ಹೆಚ್ಚು ಉತ್ಪನ್ನಗಳನ್ನು ಪ್ರದರ್ಶಿಸುವುದಲ್ಲದೆ ವಿಶೇಷ ಸೇವೆಗಳನ್ನೂ ಒದಗಿಸುತ್ತದೆ, ಅದರಲ್ಲಿ ಬಣ್ಣದ ಆಯ್ಕೆ ಆವಿಷ್ಕಾರಕ ಬಳಕೆ ತಂತ್ರಗಳು ಮತ್ತು ಪರಂಪರೆಯಿಂದ ಸ್ಫೂರ್ತಿ ಪಡೆದ ಕ್ಯುರೇಟೆಡ್ ಡೆಕೊರ್ ಪರಿಹಾರಗಳನ್ನು ಕುರಿತು ಪರಿಣಿತರ ಸಲಹೆಗಳನ್ನೂ ಪಡೆಯಬಹುದು. ಬಿರ್ಲಾ ಓಪಸ್ ಪೇಂಟ್ಸ್ ಭಾರತದಾದ್ಯಂತ ತನ್ನ ರೀಟೇಲ್ ವ್ಯಾಪ್ತಿ ವಿಸ್ತರಿಸು ಪ್ರಗತಿಯ ಕಾರ್ಯತಂತ್ರದಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಅನುಭವಪೂರ್ವಕ ರೀಟೇಲ್ ಗೆ ಹೆಚ್ಚು ಆದ್ಯತೆ ನೀಡಿ ಕಂಪನಿಯು ಮುಂದಿನ ತಿಂಗಳುಗಳಲ್ಲಿ ದೆಹಲಿ, ಹೈದರಾಬಾದ್, ಕೊಲ್ಕತಾ, ಜೈಪುರ, ಅಹಮದಾಬಾದ್ ಮತ್ತು ಸೂರತ್ ಗಳಲ್ಲಿ ಹೆಚ್ಚುವರಿ ಎಕ್ಷೀರಿಯೆನ್ಸ್ ಸೆಂಟ ಗಳನ್ನು ತೆರೆಯಲು ಯೋಜಿಸಿದೆ.
ಶ್ರೇಷ್ಠತೆ ಮತ್ತು ಗ್ರಾಹಕರ ಅನುಭದ ಹೆಚ್ಚಿಸಲು ನಮ್ಮ ಬದ್ಧತೆಯನ್ನು ಪ್ರತಿನಿಧಿಸುತ್ತದೆ, ಪ್ರತಿ ಅಂಶವನ್ನೂ ಗೃಹ ಮಾಲೀಕರು ಅದರ ಸ್ಥಳಗಳನ್ನು ನೈಜ ಮಾಸ್ಟರ್ ಪೀಸ್ ಗಳಾಗಿ ಪರಿವರ್ತಿಸಲು ಸನ್ನದ್ಧವಾಗಿರುವಂತೆ ಎಚ್ಚರಿಕೆಯಿಂದ ರೂಪಿಸಲಾಗಿದೆ. ನಮ್ಮ ಗುರಿ ಗ್ರಾಹಕರು ಪೇಂಟ್ಸ್ ನ ಪರಿವರ್ತವೀಯ ಶಕ್ತಿಯನ್ನು ಪೂರ್ಣವಾಗಿ ಅನುಭವಿಸುವ ಪರಿಸರಗಳನ್ನು ಸೃಷ್ಟಿಸುವ ಮೂಲಕ ಲಭ್ಯ ಹಾಗೂ ಸ್ಫೂರ್ತಿಯುತವಾಗಿಸುವುದು” ಎಂದರು.
ಪ್ರತಿಯೊಂದು ಬಿರ್ಲಾ ಓಪಸ್ ಸ್ಪುಡಿಯೊ ವಾಸ್ತುಶಿಲ್ಪಿಗಳು ಮತ್ತು ಒಳಾಂಗಣ ವಿನ್ಯಾಸಕರಿಗೆ ಸಂಪನ್ಮೂಲಗಳು, ನಮೂನೆಗಳು ಮತ್ತು ಪರಿಣಿತರ ಬೆಂಬಲದ ಮೂಲಕ ವೃತ್ತಿಪರರನ್ನು ಸಹಯೋಗ ಸಾಧಿಸಲು ಮತ್ತು ಸುಲಭವಾಗಿ ಸೃಷ್ಟಿಸಲು ಅಗತ್ಯವಾದ ವಿಶೇಷ ಕೆಲಸದ ತಾಣವಾಗಿ ಕೆಲಸ ಮಾಡುತ್ತದೆ. ಈ ಎಕ್ಷೀರಿಯನ್ಸ್ ಸೆಂಟರ್ ಗಳು ನಮ್ಮ ಪೇಂಟ್ ಕ್ರಾನ್ಸ್ ಪೇಂಟಿಂಗ್ ಸೇವೆಯ ಮೂಲಕ ಪೇಂಟಿಂಗ್ ಸೇವೆಗಳನ್ನೂ ಒದಗಿಸುತ್ತಿದ್ದು ಪ್ರತಿ ಪೇಂಟ್ ಸ್ಟುಡಿಯೊ ಕೂಡಾ ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಸ್ಪೂರ್ತಿ ಪಡೆದ ಬಣ್ಣಗಳನ್ನು ಹೊಂದಿವೆ.
ನೂತನ ಮಳಿಗೆ ಉದ್ಘಾಟನೆ ಯಲ್ಲಿ ಸಂಸ್ಥೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು, ಮಾರುಕಟ್ಟೆ ಮುಖ್ಯಸ್ಥರು ಇದೇ ವೇಳೆ ಉಪಸ್ಥಿತರಿದ್ದರು.