ಬೆಂಗಳೂರು : 03.05.2025 50 0 4 10.30 ಕಲಾಕ್ಷೇತ್ರ ದಲ್ಲಿ ಬಸವ ವೇದಿಕೆ(ರಿ) ವತಿಯಿಂದ ನಡೆಯಲಿರುವ ರಾಜ್ಯಮಟ್ಟದ ‘ಬಸವ ಜಯಂತಿ’ ಮತ್ತು ‘ಬಸವಶ್ರೀ’ ಹಾಗೂ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಗಳ ಪ್ರದಾನ ಸಮಾರಂಭದ ಬಗ್ಗೆ “ಪತ್ರಿಕಾ ಪ್ರಕಟಣೆ”
ಬೆಂಗಳೂರಿನ ಬಸವ ವೇದಿಕೆ(ರಿ)ಯು ಕರ್ನಾಟಕದ ಒಂದು ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಬಸವಣ್ಣನವರ ಮತ್ತು ಶರಣರ ತತ್ವ ಸಿದ್ಧಾಂತಗಳನ್ನು ಕಳೆದ 34 ವರ್ಷಗಳಿಂದ ನಿರಂತರವಾಗಿ ರಾಷ್ಟ್ರದಾದ್ಯಂತ ಯಶಸ್ವಿಯಾಗಿ ಪ್ರಸಾರ ಮಡುತ್ತಾ ಬಂದಿದೆ.
ಪ್ರತಿl ವರ್ಷವು ಬಸವ ವೇದಿಕೆ(ರಿ)ಯು 12ನೇ ಶತಮಾನದ ಕ್ರಾಂತಿ ಪುರುಷರಾದ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಸುಮಾರು ಮೂರು ದಶಕಗಳಿಂದ ತುಂಬಾ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿರುತ್ತದೆ. ಈ ಸಮಾರಂಭವನ್ನು ಅರ್ಥಪೂರ್ಣಗೊಳಿಸುವ ದಿಸೆಯಲ್ಲಿ ಬಸವಾದಿ ಶರಣರ ವಿಚಾರಧಾರೆಗೆ ಅನುಗುಣವಾಗಿ ವಿಶಿಷ್ಟ ಸಾಮಾಜಿಕ ಸೇವೆಯನ್ನು ಸಲ್ಲಿಸಿರುವ ಒಬ್ಬ ಮಹಾನ್ ಸಾಧಕರಿಗೆ ‘ಬಸವಶ್ರೀ ‘ ಪ್ರಶಸ್ತಿಯನ್ನು ಪ್ರತಿವರ್ಷವೂ ನೀಡಿ ಗೌರವಿಸಲಾಗುತ್ತಿದೆ. ಬಸವ ವೇದಿಕೆ(ರಿ)ಯ “ಬಸವಶ್ರೀ” ಪ್ರಶಸ್ತಿಯು ರಾಜ್ಯಮಟ್ಟದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.
ಇದುವರೆವಿಗೂ ಸನ್ಮಾನ್ಯರುಗಳಾದ ಡಾ. ಬಿ.ಡಿ. ಜತ್ತಿಯವರು. ಶ್ರೀ ಎಸ್. ನಿಜಲಿಂಗಪ್ಪನವರು. ಡಾ.ಎಂ.ಸಿ. ಮೋದಿಯವರು, ಶ್ರೀ ಕೆ.ಎಂ. ನಂಜಪ್ಪನವರು, ಪ್ರೊ. ದೇ.ಜವರೇಗೌಡರವರು. ಡಾ. ಹೆಚ್. ನರಸಿಂಹಯ್ಯನವರು, ನ್ಯಾಯಮೂರ್ತಿ ಶಿವರಾಜ ಪಾಟೀಲ್, ನಾಡೋಜ ಡಾ. ಚಂದ್ರಶೇಖರ ಕಂಬಾರರವರು. ಡಾ.ಡಿ.ಎಂ.ನಂಜುಂಡಪ್ಪನವರು. ಶ್ರೀ ಪಾಟೀಲ ಪುಟ್ಟಪ್ಪನವರು, ನ್ಯಾಯಮೂರ್ತಿ ವಿ.ಎಸ್.ಮಳೀಮಠರವರು.
-ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ಜಿ.ಎಸ್.ಶಿವರುದ್ರಪ್ಪ. ಡಾ.ಸುಧಾಮೂರ್ತಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ನಾಡೋಜ ಡಾ.ಏಣಗಿ ಬಾಳಪ್ಪ, ನಾಡೋಜ ಚನ್ನವೀರ ಕಣವಿ ಮತ್ತು ಡಾ. ಕಲ್ಬುರ್ಗಿ, ಭಾರತರತ್ನ ಡಾ. ಸಿ.ಎನ್.ಆರ್.ರಾವ್, ಶ್ರೀ ವಿಜಯ ಸಂಕೇಶ್ವರ್, ಶ್ರೀ ರವೀಶಂಕರ್ ಗುರೂಜಿ, ಡಾ. ಪ್ರಭಾಕರ ಕೋರೆ, ಡಾ. ಎ.ಎಸ್. ಕಿರಣ್ ಕುಮಾರ್ ಹಾಗೂ ಸನ್ಮಾನ್ಯ ಪದ್ಮಶ್ರೀ ಡಾ. ಹೆಚ್.ಆರ್. ನಾಗೇಂದ್ರ, ಜಿ ಎಸ್. ಜಯದೇವ. ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರಂತಹ ನಾಡಿನ ಹತ್ತಾರು ಧೀಮಂತ ಸಾಧಕರಿಗೆ ಇದುವರೆಗೆ ‘ಬಸವಶ್ರೀ’ ಪ್ರಶಸ್ತಿಯನ್ನು ಹಾಗೂ ಶರಣ ಸಾಹಿತ್ಯ ಸಾಧಕರುಗಳಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಗಳನ್ನು ಅತ್ಯಂತ ಅಭಿಮಾನಪೂರ್ವಕವಾಗಿ ನೀಡಿ ನಾಡು-ನುಡಿಗೆ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಹೃತ್ತೂರ್ವಕವಾಗಿ ಅಭಿನಂದಿಸಲಾಗಿದೆ.
ಈ ವರ್ಷದ ಬಸವ ಜಯಂತಿ ಮತ್ತು ‘ಬಸವಶ್ರೀ’ ಹಾಗೂ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಿನಾಂಕ: 03.05.2025 ರಂದು ಶನಿವಾರ ಬೆಳಗ್ಗೆ 10:30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ. ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿಯ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳವರು ವಹಿಸಿಕೊಂಡು ಆಶೀರ್ವಚನ ನೀಡಲಿದ್ದಾರೆ. ಈ ಸಮಾರಂಭದಲ್ಲಿ ಕರ್ನಾಟಕದ ಗೃಹ ಸಚಿವರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಡಾ. ಜಿ. ಪರಮೇಶ್ವರ ಅವರು ಸಮಾರಂಭವನ್ನು ಉದ್ಘಾಟಿಸಿ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ನಿಕಟ ಪೂರ್ವ ಮುಖ್ಯಮಂತ್ರಿಗಳು ಹಾಗೂ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಬಸವರಾಜ ಎಸ್ ಬೊಮ್ಮಾಯಿಯವರು ವಹಿಸಲಿದ್ದಾರೆ. ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರಾದ ಸನ್ಮಾನ್ಯ ವಿ. ಸೋಮಣ್ಣನವರು ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಕರ್ನಾಟಕ ರಾಜ್ಯದ ಬೃಹತ್ ಕೈಗಾರಿಕೆ ಸಚಿವರಾದ ಸನ್ಮಾನ್ಯ ಎಂ. ಬಿ. ಪಾಟೀಲ್ ರವರು ಬಸವ ಜ್ಯೋತಿ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಿದ್ದಾರೆ.
ಬಸವ ವೇದಿಕೆ(ರಿ)ಯ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ರವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಅಂದು ಬೆಳಗ್ಗೆ 10.00 ಗಂಟೆಗೆ ಪ್ರಖ್ಯಾತ ಗಾಯಕಿಯಾದ ಎಂ. ಡಿ. ಪಲ್ಲವಿಯವರಿಂದ ವಚನ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಇದುವರೆಗೂ ಬಸವ ವೇದಿಕೆಯು 27 ಹಿರಿಯ ಮಹಾನ್ ಸಾಧಕರುಗಳಿಗೆ ಬಸವ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತದೆ. ಈ ವರ್ಷದ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ವಚನ ಸಾಹಿತ್ಯದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ನಾಡೋಜ ಗೊ. ರು. ಚೆನ್ನಬಸಪ್ಪ ರವರಿಗೆ ಹಾಗೂ ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ವಿಜಯಪುರದ ಬಿ. ಎಲ್. ಡಿ. ಇ ಸಂಸ್ಥೆಯ ವಚನ ಪಿತಾಮಹ ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ಹಾಗೂ ವಚನ ಸಂಗೀತ ಪ್ರಶಸ್ತಿಯನ್ನು ಪ್ರಖ್ಯಾತ ವಚನ ಗಾಯಕಿಯಾದ ಎಂ. ಡಿ.ಪಲ್ಲವಿಯವರಿಗೆ ನೀಡಿ ಗೌರವಿಸಲಾಗುವುದು.
ಈ ಸಮಾರಂಭದ ಸಂಪೂರ್ಣವಾದ ವಿವರಗಳನ್ನು ಒಳಗೊಂಡ ಆಹ್ವಾನ ಪತ್ರಿಕೆಯನ್ನು ಹಾಗೂ ಪ್ರಶಸ್ತಿ ಪುರಸ್ಕೃತರ ಬಗ್ಗೆ ಪರಿಚಯ ಹಾಗೂ ಅವರ ಭಾವಚಿತ್ರಗಳನ್ನು ಸಹ ತಮಗೆ ಈ ಮೂಲಕ ನೀಡಲಾಗುತ್ತಿದೆ.
ದಿನಾಂಕ: 03.05.2025 ರಂದು ಶನಿವಾರ ಬೆಳಗ್ಗೆ 10:30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ “ಬಸವ ಜಯಂತಿ” ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ತಮ್ಮ ಪ್ರತಿಷ್ಠಿತ ಪತ್ರಿಕೆ / ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳನ್ನು/ ಛಾಯಾಚಿತ್ರಗಾರರನ್ನು ಕಳುಹಿಸಿಕೊಟ್ಟು ಈ ಸಮಾರಂಭದ ವರದಿಯನ್ನು ತಮ್ಮ ಮಾಧ್ಯಮದ ಮೂಲಕ ನಾಡಿನಾದ್ಯಂತ ತಲುಪಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ.