ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರದ ಅಡುಗೋಡಿಯ ವಾರ್ಡ್ ನಲ್ಲಿ ಬರುವ ಕದಂಬ ಉದ್ಯಾನವನದ ಅಭಿವೃದ್ಧಿ ಕಾರ್ಯಕಗಳಿಗೆ ಗುದ್ದಲಿ ಪೂಜೆಯನ್ನು ಸಾರಿಗೆ ಹಾಗು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.
ಆಡುಗೋಡಿ ಕ್ಷೇತ್ರದ ಜನರಿಗೆ ಹಿರಿಯರಿಗೆ ನಡಿಗೆದಾರರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಉದ್ಯಾನವನ ಅಭಿವೃದ್ಧಿ ಮಾಡಲಾಗುತ್ತಿದೆ, ಅದರ ಪ್ರಯೋಜನವನ್ನು ಅಲ್ಲಿನ ಜನರು ಪಡೆದುಕೊಳ್ಳಲಿ ಎಂಬ ನಿಟ್ಟಿನಲ್ಲಿ, ಪರಿಸರ ಅಸಮತೋಲನವಾಗುತ್ತಿದ್ದು, ಹಾಳಾಗುತ್ತಿದ್ದು, ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ನಗರಗಳಲ್ಲಿ ಕಾಂಕ್ರಿಟ್ ಕಡಾಗುತ್ತಿದೆ,
ಹೀಗಾಗಿ ಸಿಟಿಗಳಲ್ಲಿ ಎಲ್ಲಿ ಜಾಗ ಸಿಗುತ್ತದೋ ಅಲ್ಲಿ ಉದ್ಯಾನವನ ನಿರ್ಮಾಣ ಮಾಡಿದರೆ, ಉತ್ತಮ ಗಾಳೆ, ಒಳ್ಳೆಯ ವಾತಾವರಣ ಸಿಗುತ್ತದೆ, ವಾಯು ಮಾಲಿನ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಹೀಗಾಗಿ ಮರ,ಗಿಡಗಳನ್ನು ಎಲ್ಲೆಡೆ ಹೆಚ್ಚಾಗಿ ಬೆಳಸಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ಆಡುಗೋಡಿ ಮೋಹನ್, ಆಡುಗೋಡಿ ದಕ್ಷಿಣ CAR DCP ಚೆನ್ನವೀರಪ್ಪ ಹಡಪರ್, ನಡೆಗೆದಾರರು,CAR ಕ್ವಾಟ್ರಸ್ ನಿವಾಸಿಗಳು, ಅಧಿಕಾರಿ ವರ್ಗದವರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.