ಅಂಕೋಲಾ: ನಮ್ಮ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ನಡೆದ ಲೋಕಸಭಾ ಚುನಾವಣೆಗೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ, ಈ ದಿನದಂದು ತಾವು ಚಲಾಯಿಸಿದ ಅಮೂಲ್ಯವಾದ ಮತವು ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬುದನ್ನು ಸ್ಮರಿಸುವುದು ನನ್ನ ಕರ್ತವ್ಯ ಎಂದು ಉತ್ತರ ಕನ್ನಡದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಪ್ರಜಾಪ್ರಭುತ್ವದ ಈ ಮಹತ್ವದ ದಿನದಂದು ತಮ್ಮ ಜವಾಬ್ದಾರಿಯುತ ಭಾಗವಹಿಸುವಿಕೆಯನ್ನು ಮೆಚ್ಚಿ, ತಮ್ಮೆಲ್ಲಾ ಮತದಾರರಿಗೂ ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಈ ಸಕ್ರಿಯ ಸಹಭಾಗಿತ್ವವು ನಮ್ಮ ಪ್ರಜಾಪ್ರಭುತ್ವದ ತಳಹದಿಯನ್ನು ಬಲಪಡಿಸಿದೆ ಮತ್ತು ರಾಷ್ಟ್ರದ ಪ್ರಗತಿಗೆ ಹೊಸ ಆಯಾಮವನ್ನು ನೀಡಿದೆ.
ಮುಂದಿನ ದಿನಗಳಲ್ಲಿಯೂ ಸಹ ನಾವು ಇದೇ ರೀತಿಯ ಪ್ರಜ್ಞಾವಂತ ನಾಗರಿಕರಾಗಿ, ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ದೇಶದ ಅಭಿವೃದ್ಧಿಗೆ ಕೈಜೋಡಿಸೋಣ”.