ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿದೆ ಅದಕ್ಕೆ ನಾನು ಚಿರಋಣಿಯಾಗಿದ್ದೇನೆ, ಸರ್ಕಾರ ಮತ್ತೊಂದು ಯೋಜನೆಗೆ ನನ್ನನ್ನು ಮುಖ್ಯಸ್ಥರನ್ನಾಗಿ ಮಾಡಿರುವುದು ಸಂತೋಷದಾಯಕವಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿಜಯಲಕ್ಷ್ಮಿ ದೇಶ ಮಾನೆ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಕರ್ನಾಟಕ ಹಾಗು ಭಾರತೀಯ ವೈದ್ಯಕೀಯ ಸಂಘ ಆಯೋಜನೆ ಮಾಡಿದ್ದ ವಿಶ್ವ ಮಹಿಳಾ ದಿನಾಚರಣೆ,ವಿಶ್ವ ತಾಯಂದಿರ ದಿನಾಚರಣೆ,ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಗಲಿ ನಾನು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿಕೊಂಡು ಇದ್ದೇನೆ ಅನುಭವಿಸಿದ್ದೇನೆ ಕೇಂದ್ರ ಸರ್ಕಾರ ಇವೆಲ್ಲವನ್ನು ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಕೇಂದ್ರ ಸರ್ಕಾರ ಮತ್ತೊಂದು ಜವಾಬ್ದಾರಿಯನ್ನು ನೀಡಿದೆ, ಕೇರಳದ ಕಮಾಂಡೋ ಟ್ರೈಬಲ್ ಐಟಿ ಯೋಜೆಗೆ ಮುಖ್ಯಸ್ಥರನ್ನಾಗಿ ನಿಯೋಜನೆ ಮಾಡಿದೆ. ಕೆಲಸ ಮಾಡಲು ಉತ್ಸಾಹಿತನಾಗಿದ್ದೇನೆ ಎಂದರು. ಆಧುನಿಕವಾಗಿ ಕೃತ ಬುದ್ಧಿಮತ್ತೆ ಸಾಕಷ್ಟು ಕೆಲಸ ಮಾಡುತ್ತದೆ ಎಂದರು. ನನಗೆ ಕೇಂದ್ರ ಸರ್ಕಾರ ನೀಡಿರುವ ಪ್ರಶಸ್ತಿಯು ನಮಗೆ ಮತ್ತಸ್ಟು ಖುಷಿ ತಂದಿದೆ ಎಂದರು.
ಭಾರತೀಯ ವೈದ್ಯಕೀಯ ಸಂಘ ಅಧ್ಯಕ್ಷರು ಡಾ.ವಿಜಯಾನಂದ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಬಹಳ ಮುಖ್ಯ, ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಸಾದನೆ ಮಾಡುತ್ತಾರೆ, ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ಸಾಧನೆ ಮಾಡಿದರೆ, ಮಹಿಳೆಯರು ಕ್ಷೇತ್ರದಲ್ಲಿ ಶ್ಲಾಘನೀಯವಾಗಿ ಕೆಲಸವನ್ನು ಮಾಡಿದ್ದಾರೆ, ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅವರನ್ನು ಗುರುತಿಸಿ ಸನ್ಮಾನ ಮಾಡಲಾಗಿದೆ.
ಸಂಘದ ಮಹಿಳಾ ವಿಭಾಗದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾದನೆ ಮಾಡಿದವರಿಗೆ ಪ್ರಶಸ್ತಿ ಕೊಡುವುದರಿಂದ ಮತ್ತಷ್ಟು ಪ್ರೋತ್ಸಾಹ ಕೊಟ್ಟಂಗೆ ಆಗುವ ದೃಷ್ಟಿಯಿಂದ ಪ್ರತಿವರ್ಷವೂ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತದೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು ಹೇಗೆ ಆರೋಗ್ಯ ಕಾಪಡಿಸ್ಕೊಳ್ಳುವುದು, ಸಮಸ್ಯೆಗಳು ಎದುರಾದಾಗ ಹೆದರಿಸಿ ಹೇಗೆ ನಿಲ್ಲುವುದು ಎಂಬುದನ್ನು ಚರ್ಚೆಗಳನ್ನು ಸಹಾ ನಡೆದವು. ಆರೋಗ್ಯ ಮತ್ತು ಜೀವನ ಶೈಲಿ ಬಗ್ಗೆ , ಮಹಿಳೆಯರಲ್ಲಿನ ಪ್ರತಿಭೆಗಳನ್ನು ಹುಡುಕಿ, ಸಮಾಜಕ್ಕೆ ತೂರಿಸಿ, ಪ್ರೇರೇಪಿಸುವುದು ಸಂಘದ ಮುಖ್ಯ ಕರ್ತವ್ಯವಾಗಿದೆ ಎಂದರು. ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
Ima ರಾಜ್ಯ ಹಾಗು ಭಾರತೀಯ ಶಾಖೆ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಹಲ್ಲೆ ತಡೆಯುವ, ಶಿಕ್ಷಿಸುವ ಕಾನೂನು ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡಿದಾಗ ಆ ವಿಚಾರದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಕೋಮದಲ್ಲಿರುವ ರೋಗಿಗಳಿಗೆ ಮರಣ ನೀಡುವ ಕಾನೂನು ಇದೆ, ಬದುಕಲು ಸಾಧ್ಯವಿಲ್ಲ ಎನ್ನುವ, ಹಲವು ವರ್ಷಗಳು ಆಸ್ಪತ್ರೆಯಲ್ಲಿ ನೋಡಿಕೊಳ್ಳುವ ಪ್ರಮೇಯ ಬಂದಾಗ ಅಂತಹವರಿಗೆ ಸರ್ಕಾರ ಕಾನೂನು ತಂದಿದೆ, ಕುಟುಂಬಸ್ಥರಿಗೆ ತಿಳಿಸಿ, ಸಾಮಾನ್ಯ ಜನರು ಸರ್ಕಾರದಲ್ಲಿ ನೀಡುವ ಉಚಿತವಾಗಿ ನೀಡುವ ಆರೋಗ್ಯ ವಿಮೆಯನ್ನು ಉಪಯೋಗಿಸ ಬೇಕಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ ವಿಜಯಲಕ್ಷ್ಮಿ ದೇಶ ಮಾನೆ ಅವರು ಭಾಗವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ಮನೆ ಅವರಿಗೆ ಕೇರಳದ ಕಮಾಂಡೋ ಟ್ರೈಬಲ್ ಐಟಿ ಯೋಜೆಗೆ ಮುಖ್ಯಸ್ಥರನ್ನಾಗಿ ನಿಯೋಜನೆ ಮಾಡಿದೆ. ಸ್ಥಾನ ಹಾಗು ಕ್ಯಾನ್ಸರ್ ಬಗ್ಗೆ ನಮಗೆ. ನಿಯೋಜನೆ ಮಾಡಲಾಗಿದೆ. ಕೃತ ಬುದ್ಧಿಮತ್ತೆ ಸಾಕಷ್ಟು ಕೆಲಸ ಮಾಡುತ್ತದೆ ಎಂದರು. ನನಗೆ ಕೇಂದ್ರ ಸರ್ಕಾರ ನೀಡಿರುವ ಪ್ರಶಸ್ತಿಯು ನಮಗೆ ಮತ್ತಸ್ಟು ಖುಷಿ ತಂದಿದೆ ಎಂದರು.
ಇದೇ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರನ್ನು ಗುರುತಿಸಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ IMA ಸಂಘದ ಅಧ್ಯಕ್ಷಡಾ.ವಿಜಯಾನಂದ ಎಸ್ ಅಧ್ಯಕ್ಷರು, ಕಾರ್ಯದರ್ಶಿ ಡಾ.ಮಹೇಶ್ ಕೆ ಎಂ, ಖಜಾಂಚಿ ನರಸಿಂಹಮೂರ್ತಿ, ಡಾ.ಸುಜಾತ ರಾಠೋಡ್, ಡಾ.ವೀಣಾ, ಅರುಣಾ, ಡಾ.ರಾಜೇಶ್ವರಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು