ಬೆಂಗಳೂರು: ಪರಿಶಿಷ್ಟ ಜಾತಿಯವರ ಜಾತಿ ಸಮೀಕ್ಷೆಯ ಒಳ ಮೀಸಲಾತಿ ಜಾತಿ ಗಣತಿ ಜಾರಿ ಸಂಬಂಧ ಸಮೀಕ್ಷಾ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ಹೊಲೆಯ ಎಂದು ಖುದ್ದಾಗಿ ಸಮುದಾಯದ ಜನರೇ ಸೇರಿಸಬೇಕೆಂದು ಶ್ರಿ ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ ನಾಗೇಂದ್ರ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖಮಂತಿಗಳಾದ ಸಿದರಾಮಯನವರು ಸುಪ್ರೀಂಕೋರ್ಟ್ ನಿರ್ದೇಶನದಂತೆ ಒಳ ಮೀಸಲಾತಿ ಜಾತಿ ಗಣತಿಯನ್ನು ಮಾಡಲು ವಿಶ್ರಾಂತ ನಾಯಮೂರ್ತಿಗಳಾದ ಹೆಚ್ಎನ್ ನಾಗಮೋಹನ ದಾಸ್ ಅವರ ನೇತೃತದಲ್ಲಿ ಸಮಿತಿಯನ್ನು ನೇಮಿಸಿ, ಕರ್ನಾಟಕ ರಾಜ್ಯದಲಿರುವ ಪರಿಶಿಷ್ಟ ಜಾತಿಯವರ ಜಾತಿ ಸಮೀಕ್ಷೆಯನ್ನು ವೈಜಾನಿಕವಾಗಿ, ಸಮಗವಾಗಿ, ಪಾರದರ್ಶಕವಾಗಿ ಮಾಡಲು ಸೂಚನೆ ನೀಡಿರುವುದು ಸಾಗತಾರ್ಹ ಎಂದರು.
ಹೊಲೆಯರ ಭಾಷೆಗೆ ಲಿಪಿಯಿಲ್ಲ, ಜಾತಿ ಸೂಚಕವಾಗಿ ಕರೆಯಿರಿ
ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳಿದ್ದು ಅದರಲಿ ನಮ್ಮ ಜನಾಂಗವು ಸೇರಿರುತ್ತದೆ. ನಮ್ಮ ಜನಾಂಗದ ಜನರು ತಮಿಳು ಮಿಶ್ರಿತ ಕನ್ನಡ ಮಾತನಾಡುತಿದ್ದು ಕರ್ನಾಟಕ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗಾಮಾಂತರ, ಕೋಲಾರ,ಚಿಕಬಳಾಪುರ, ರಾಮನಗರ, ತುಮಕೂರು,ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖೆಯಲ್ಲಿ ವಾಸ ಮಾಡುತಿದ್ದಾರೆಂದರು. ನಮ್ಮ ಭಾಷೆಗೆ ಲಿಪಿ ಇರುವುದಿಲ್ಲ. ಇದುವರೆಗೆ ನಮ್ಮಜನಾಂಗವನ್ನು ಆದಿ ಕರ್ನಾಟಕ, ಆದಿ ದಾವಿಡ, ಆದಿ ಆಂಧ್ರ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತಿತ್ತು.
ಒಳ ಮೀಸಲಾತಿ ಸಂಬಂಧ ಜಾತಿಗಣತಿಗಾಗಿ ಸರ್ಕಾರದ ಸಮೀಕ್ಷಾ ತಂಡ ಬಂದಾಗ ನಮ್ಮ ಜಾತಿ ಸೂಚಕವಾಗಿರುವ ಹೊಲೆಯ ಎಂಬುದಾಗಿ ಬರೆಸಬೇಕೆಂದು ರೇಣುಕಾ ಯಲಮ್ಮ ಬಳಗದ ಅಭಿವೃದ್ಧಿ ಸಂಘ (ನೋಂದಣಿ)ವು ದಿನಾಂಕ 10.05.2025 ರಂದು ನಡೆದ ವಿಶೇಷ ಸಭೆಯಲ್ಲಿ ಕಾರ್ಯಕಾರಿ ಸಮಿತಿ ತೀರ್ಮಾನಿಸಿರುತ್ತದೆ ಎಂದು ತಿಳಿಸಿದರು.
ಆದುದರಿಂದ ನಮ್ಮ ಎಲ್ಲಾ ಸಮುದಾಯದ ಬಂಧುಗಳು ನಮ್ಮ ಜಾತಿ ಸೂಚಕ ಹೊಲೆಯ ಎಂದು ಸಮೀಕ್ಷಕರ ಮುಂದೆ ಬರೆಸಬೇಕೆಂದು ಎಂದು ಸಮುದಾಯದ ಜನರಿಗೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸಿ ರಾಮಯ್ಯ,ಗೌರವ ಅಧ್ಯಕ್ಷ ಬಿಎಸ್ ನಾಗರಾಜ್,ಜಂಟಿ ಕಾರ್ಯದರ್ಶಿ ಕೆ ಎಂ ಕೀರ್ತಿ ನಾರಾಯಣ ಸ್ವಾಮಿ,ಪ್ರಧಾನ ಕಾರ್ಯದರ್ಶಿ ಎಸ್ ಜಿ ಯಲ್ಲಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಕುಲ ಬಂದುಗಳು ಉಪಸ್ಥಿತರಿದ್ದರು.