ಬೆಂಗಳೂರು: ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘದಿಂದ ಸರ್ಕಾರಕ್ಕೆ 13 ಬೇಡಿಕೆಗಳನ್ನು ಇಟ್ಟಿದ್ದರು, ಅವುಗಳಲ್ಲಿ 10 ಈಗಾಗಲೇ ಈಡೇರಿಸಲಾಗಿದೆ, ಮುಂದಿನ ದಿನಗಳಲ್ಲಿ ಮತ್ತೆರಡು ಈಡೇರಿಸಲಾಗುತ್ತದೆ ಎಂದು ಸಾರಿಗೆ ಹಾಗು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘವು ದಕ್ಷಿಣ ವಿಭಾಗದ ಬಸ್ ಮಾಲೀಕರ ಸಮ್ಮೇಳನ 2025 ಪಯಣ 02 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಸಂಘದಿಂದ ಇಟ್ಟಿದ್ದರು, ಅವುಗಳೆಲ್ಲವೂ ಸಹಾ ಸರಳವಾಗಿದ್ದು, ಯಾವುದೇ ಈಡೇರಿಸಲಾಗದಂತ ಕೆಲಸಗಳೇನು ಅಲ್ಲ ಎಂಬುದನ್ನು ತಿಳಿಸಿದರು. 13 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು, ಅವುಗಳನ್ನು ಬಹುತೇಕವಾಗಿ ಸ್ವೀಕರಿಸಿ ಈಡೇರಿಸಿದ್ದೇನೆ, ಸರ್ಕಾರಕ್ಕೆ ಯಾವುದೇ ರೀತಿ ಬಸ್ ಮಾಲೀಕರಿಂದ ತೊಂದರೆಯಾಗಿಲ್ಲ, ಕಾನೂನುಬದ್ಧವಾಗಿ ವಾಹನಗಳನ್ನು ರಸ್ತೆಗೆ ಇಳಿಸಿದ್ದಾರೆ. ಸರ್ಕಾರಕ್ಕೆ ತೆರಿಗೆ, ಪರ್ಮಿಟ್, ವಾಹನ ಫಿಟ್ನೆಸ್, ಸರ್ಕಾರದ ನಿಯಮಾವಳಿ ಚಾಚುತ್ತಪಡೆ ಮಾಡಿಕೊಂಡು ಸಕಾಲಕ್ಕೆ ಕಟ್ಟುತ್ತಿದ್ದಾರೆ. ದಕ್ಷಿಣದ 6 ರಾಜ್ಯಗಳ ಬಸ್ ಮಾಲೀಕರ ಪ್ರತಿನಿಧಿಗಳನ್ನು ಒಂದು ಕಡೆ ಸೇರಿಸಿ ಅವರಲ್ಲಿರುವ ಸಮಸ್ಯೆ, ಸವಾಲುಗಳನ್ನು ಸಮ್ಮೇಳನದಲ್ಲಿ ವಿವರವಾಗಿ ವ್ಯಕ್ತಪಡಿಸಿದರು.
ಕರ್ನಾಟಕ ಬಸ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಹಾಗು ವಕೀಲ ನಟರಾಜ್ ಶರ್ಮಾ ಮಾತನಾಡಿ, ದಕ್ಷಿಣ ರಾಜ್ಯಗಳ ಬಸ್ ಮಾಲೀಕರ ಸಮೀಳನ ಪಯಣ 2 ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ. ಕಾರ್ಯಕ್ರಮಕ್ಕೆ ದಕ್ಷಿಣದ 6 ರಾಜ್ಯಗಳ ಮಾಲೀಕರು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದರು. ಕರ್ನಾಟಕ ಸರಕಾರಕ್ಕೆ ಸುಮಾರು 12 ಬೇಡಿಕೆಗಳನ್ನು ಇಡಲಾಗಿತ್ತು, ಅದರಲ್ಲಿ ಸಾರಿಗೆ ಮಂತ್ರಿಗಳಾದ ರಾಮಲಿಂಗಾರೆಡ್ಡಿ ಅವರು ಸುಮಾರು 10 ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಮತ್ತೆರಡು ಸಹ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.
ಬಸ್ ಮಾಲೀಕರ ಸಂಘದ ಸಾಧನೆಗಳು
ಬಸ್ ಮಾಲೀಕರ ಸಂಘದಿಂದ ಸಾಕಷ್ಟು ಸಾದನೆಗಳನ್ನು ಮಾಡಿಕೊಂಡು ಬರುತ್ತಿದೆ, ಅದರಲ್ಲಿ ಸುಮಾರು 13 ವಿಶೇಷವಾಗಿವೆ. ಸರ್ಕಾರಕ್ಕೆ 3 ತಿಂಗಳಿಗೊಮ್ಮೆ ತೆರಿಗೆ ಕಟ್ಟುವುದು,ಕಾಲಾವಧಿ ಹೆಚ್ಚಳ,ಪರ್ಮಿಟ್ ಕಾಲಾವಧಿ ಮುಂದುವರೆಸುವುದು,ಶಾಲಾ ವಾಹನಗಳ ಪರ್ಮಿಟ್ ಅಮೆಡ್ ಮೆಂಟ್ ಪ್ರತ್ಯೇಕವಾಗಿ ಮಾಡುವುದು, ಅಂತರ್ಜಾಲದಲ್ಲಿ ಪ್ರತ್ಯೇಕವಾಗಿ ವಾಹನ-4 ಮೂಲಕ ಪರ್ಮಿಟ್ ಮಾಡುವುದು, ಮೋಟಾರ್ ಸಾರಿಗೆ ಮಂಡಳಿ ಪ್ರತ್ಯೇಕವಾಗಿಸುವುದು, ಕೋವಿಡ್ 19 ಸಾಂಕ್ರಾಮಿಕ ಸಂದರ್ಭದಲ್ಲಿ ಬಸ್ ಮಾಲೀಕರಿಗೆ ಆರೋಗ್ಯ ವಿಮೆ ಸಾಕಷ್ಟು ಸಮಸ್ಯೆಗಳು ಎದುರಾದವು, ಕೊವಿಡ್ ವೇಳೆ ಬಸ್ ಗಳ ಮಾಲೀಕರು ರಸ್ತೆ ತೆರಿಗೆ ಕಟ್ಟುವ ಬಗ್ಗೆ ಕಾಲಾವಕಾಶ ಕೇಳಿದ ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕ ಮೊದಲನೆಯದಾಗಿದೆ ಎಂದರು. ಸರ್ಕಾರಕ್ಕೆ ನಮ್ಮ ಸಂಘದ ಬಲವನ್ನು ಎಲ್ಲಾ ಆಯಾಮದಲ್ಲಿ ತೋರಿಸಲಾಗಿದೆ, ಅದರ ಜೊತೆ ಹೂಡಿಕೆದಾರರೊಂದಿಗೆ,ಕೈಗಾರಿಕೋದ್ಯಮಿಗಳಿಗೆ, ಸರ್ಕಾರದ ಮಂತ್ರಿಗಳೊಂದಿಗೆ ಮತ್ತು ಸಾರಿಗೆ ಅಧಿಕಾರಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಲಾಗಿದೆ ಎಂದರು.
ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘ (KSBOA) 2020 ರಲ್ಲಿ COVID-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ರಚನೆಯಾಯಿತು, ಈ ಸಮಯದಲ್ಲಿ ಸಾರಿಗೆ ಉದ್ಯಮವು ಅಭೂತಪೂರ್ವ ಸವಾಲುಗಳನ್ನು ಎದುರಿಸಿತು.
ಕೋವಿಡ್ ವೇಳೆ ಇತರ ವಲಯಗಳು ಸರ್ಕಾರದ ಬೆಂಬಲ ಮತ್ತು ಪ್ರಯೋಜನಗಳನ್ನು ಪಡೆದರೂ, ಸಾರಿಗೆ ಉದ್ಯಮವನ್ನು ಹೆಚ್ಚಾಗಿ ನಿರ್ಲಕ್ಷಿಸಲಾಯಿತು. KSBOA ಅನ್ನು 2021 ರಲ್ಲಿ ಅಧಿಕೃತವಾಗಿ ನೋಂದಾಯಿಸಲಾಯಿತು ಮತ್ತು ಅಂದಿನಿಂದ ಬಸ್ ಮಾಲೀಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಸಮರ್ಪಿತ ಪ್ರಯತ್ನಗಳು ಮತ್ತು ನಿರಂತರ ವಕಾಲತ್ತುಗಳ ಮೂಲಕ, ಸಂಘವು ಹಲವಾರು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ ಎಂದರು. ಪಯಣ 1 ಕಳೆದ ವರ್ಷ ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಾಡಲಾಗಿತ್ತು, ಆದರೆ ಈ ಭಾರಿ ಬೃಹತ್ ಸಮಾವೇಶ ಮಾಡುವ ಮೂಲಕ ಎಲ್ಲ ರಾಜ್ಯಗಳಿಗೆ ದೊಡ್ಡ ಸಂದೇಶ ಮುಟ್ಟಿಸಲಾಗಿದೆ ಎಂದರು.
ಇನ್ನು ಇದೇ ವೇಳೆ ಬಸ್ ಮಾಲೀಕರ ಸಂಘವು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ವೇದಿಕೆ ಮೇಲೆ ದಕ್ಷಿಣ ಭಾರತದ ಆಂಧ್ರಪ್ರದೇಶ, ತಮಿಳುನಾಡು, ಕೇರಳ,ಕರ್ನಾಟಕ, ತೆಲಂಗಾಣ,ಗೋವಾದ 6 ರಾಜ್ಯಗಳಲ್ಲಿ ಬಸ್ ಮಾಲೀಕರಿಗೇ ಸನ್ಮಾನವನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ,ಕರ್ನಾಟಕ, ತೆಲಂಗಾಣ,ಗೋವಾದ ಬಸ್ ಮಾಲೀಕರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.