ಬೆಂಗಳೂರು: ಬೆಂಗಳೂರಿನಲ್ಲಿ ಹೊಸದಾಗಿ ಬಿಡುಗಡೆ ಮಾಡಿದ ಎಮ್ಜಿ ವಿಂಡ್ಸರ್ ಪ್ರೋ ದ 150 ಯುನಿಟ್ಗಳನ್ನು ಜುಬಿಲಂಟ್ ಮೋಟರ್ವರ್ಕ್ಸ್ ಡೆಲಿವರಿ ಮಾಡಿದೆ. ಬೃಹತ್ ಕಾರ್ಯಕ್ರಮವು ಎಮ್ಜಿ ವಿಂಡ್ಸರ್ನ ಜನಪ್ರಿಯತೆಗೆ ಸಾಕ್ಷಿಯಾಗಿದೆ ಮತ್ತು ಪ್ರೋ ವೇರಿಯಂಟ್ ಅನ್ನು ಖರೀದಿ ಮಾಡಲು ಬೆಂಗಳೂರಿನ ಕಾರು ಖರೀದಿದಾರರಿಗೆ ಇರುವ ಆಸಕ್ತಿಯನ್ನು ಇದು ಮತ್ತಷ್ಟು ಬಲಪಡಿಸಿದೆ ಎಂದು ಜುಬಿಲಂಟ್ ಮೋಟರ್ವರ್ಕ್ಸ್ನ ಸಿಇಒ ಅಮಿತ್ ಜೈನ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜುಬಿಲಂಟ್ ಮೋಟರ್ವರ್ಕ್ಸ್ನ ಸಿಇಒ ಅಮಿತ್ ಜೈನ್ “ಬೆಂಗಳೂರಿನ ಇವಿ ಕಾರು ಮಾರುಕಟ್ಟೆಯಲ್ಲಿ ಎಮ್ಜಿ ವಿಂಡ್ಸರ್ ಬದಲಾವಣೆಯನ್ನು ತಂದಿದೆ. ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ಸುಸ್ಥಿರ ಚಾಲನೆ ಅನುಭವವನ್ನು ಒದಗಿಸುತ್ತಿರುವ ಎಮ್ಜಿ ವಿಂಡ್ಸರ್ ಅನ್ನು ನಗರದಲ್ಲಿ ಕಾರು ಖರೀದಿದಾರರು ಮೆಚ್ಚಿಕೊಂಡಿದ್ದಾರೆ. ಎಮ್ಜಿ ವಿಂಡ್ಸರ್ ಪ್ರೋ ದಲ್ಲಿ ಹೊಸ ತಂತ್ರಜ್ಞಾನ ಮತ್ತು ಸುರಕ್ಷತೆ ವೈಶಿಷ್ಟ್ಯಗಳನ್ನು ಸೇರಿಸಲಾಗಿರುವುದರಿಂದ, ವಿಂಡ್ಸರ್ನ ಯಶಸ್ಸನ್ನು ನಾವು ಇನ್ನೂ ಹೆಚ್ಚು ಎತ್ತರಕ್ಕೆ ಕೊಂಡೊಯ್ಯುತ್ತಿದ್ದೇವೆ. ಈ ಮೂಲಕ ಎಮ್ಜಿ ವಿಂಡ್ಸರ್ ಪ್ರೋದ ಎಲ್ಲ ಹೊಸ ಮಾಲೀಕರಿಗೆ ನಾವು ಅಭಿನಂದನೆಯನ್ನು ತಿಳಿಸುತ್ತಿದ್ದೇವೆ ಎಂದರು.
ಎಮ್ಜಿ ವಿಂಡ್ಸರ್ ಪ್ರೋನ ಇತಿಹಾಸ ಮತ್ತು ಕಾರ್ಯಗಳು
ಎಮ್ಜಿ ವಿಂಡ್ಸರ್ ಪ್ರೋ 2025 ಮೇ 6 ರಂದು ಭಾರತಕ್ಕೆ ಕಾಲಿಟ್ಟಿತು. ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲಿ 8,0000 ಬುಕಿಂಗ್ ಆಗಿವೆ. ವಿಂಡ್ಸರ್ ಪ್ರೋ ಅನ್ನು “ಎಸೆನ್ಸ್ ಪ್ರೋ” ವೇರಿಯಂಟ್ನಲ್ಲಿ ಒದಗಿಸಲಾಗುತ್ತಿದ್ದು, ಇದರ ಬಿಎಎಸ್ ದರವು ರೂ. 13.09 ಲಕ್ಷ ಹಾಗೂ ರೂ. 4.5/ಕಿ.ಮೀ ಕ್ಕಿಂತ ಹೆಚ್ಚು ಆಗಿದೆ ಮತ್ತು ಎಕ್ಸ್ ಶೋರೂಮ್ ದರವು ರೂ.18,09,800 ಆಗಿದೆ. ಹೊಸ ಎಮ್ಜಿ ವಿಂಡ್ಸರ್ ಪ್ರೋ ದೊಡ್ಡ 52.9 ಕಿ.ವ್ಯಾ.ಗಂ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಪ್ರಮಾಣಿತ ರೇಂಜ್ 449 ಕಿ.ಮೀ ಇದೆ. ಇದು 136 ಪಿಎಸ್ ಪವರ್ ಮತ್ತು 200 ಎನ್ಎಂ ಇನ್ಸ್ಟಂಟ್ ಟಾರ್ಕ್ ನೀಡುತ್ತದೆ. ಶಕ್ತಿಯುತ ಮತ್ತು ದಕ್ಷ ಡ್ರೈವಿಂಗ್ ಅನುಭವವನ್ನು ಒದಗಿಸುತ್ತದೆ.
ಎಮ್ಜಿ ವಿಂಡ್ಸರ್ ಪ್ರೋ ನಲ್ಲಿ ತಂತ್ರಜ್ಞಾನ ಬಳಕೆ
ಕಾರಿನಲ್ಲಿ ಲೆವೆಲ್ 2 ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ಎಡಿಎಎಸ್) ಹಾಗೂ 12 ಪ್ರಮುಖ ವೈಶಿಷ್ಟ್ಯಗಳು ಮತ್ತು 3 ಲೆವೆಲ್ ಎಚ್ಚರಿಕೆ ವ್ಯವಸ್ಥೆ ಇದ್ದು, ತನ್ನ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಎಮ್ಜಿ ವಿಂಡ್ಸರ್ ಪ್ರೋದಲ್ಲಿ ಹೊಸ ತಂತ್ರಜ್ಞಾನವಿದೆ. ಅಲ್ಲದೆ, ವೆಹಿಕಲ್ ಟು ಲೋಡ್ ಹಾಗೂ ವೆಹಿಕಲ್ ಟು ವೆಹಿಕಲ್ ಸೌಲಭ್ಯವಿದ್ದು, ಕನೆಕ್ಟಿವಿಟಿ ಮತ್ತು ಅನುಕೂಲವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರ ಜೊತೆಗೆ, ವಿಂಡ್ಸರ್ ಪ್ರೋ ಈಗ ಪವರ್ಡ್ ಟೇಲ್ಗೇಟ್ ಅನ್ನೂ ಹೊಂದಿದೆ. ಮೂರು ಆಕರ್ಷಕ ಕಲರ್ ಆಯ್ಕೆಗಳಾದ ಸೆಲಡಾನ್ ಬ್ಲ್ಯೂ, ಅರೋರಾ ಸಿಲ್ವರ್ ಮತ್ತು ಗ್ಲೇಜ್ ರೆಡ್ ಇದೆ.
ಎಮ್ಜಿ ವಿಂಡ್ಸರ್ ಪ್ರೋ ಗ್ರಾಹಕರಿಗೆ ಕಾರುಗಳು ಬೇಡಿಕೆಗಳು ಹೆಚ್ಚಾಗುತ್ತಿದ್ದು, ಅದರ ಬಣ್ಣ, ಕಾರ್ಯ ಕ್ಷಮತೆ, ವಾಹನದಲ್ಲಿ ಅಳವಡಿಸಿರುವ ತಂತ್ರಜ್ಞಾನ, ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ವಿಶಿಷ್ವವಾಗಿದ್ದು ವಾಹನ ಪ್ರಿಯರು ಕಾರುಗಳ ಬುಕ್ಕಿಂಗ್ ಮಾಡಲು ಮುಗಿಬಿದ್ದಿದ್ದಾರೆ.