ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ವಿರೋಧ ಪಕ್ಷದ ಮುಖಂಡ, ಹಾಗು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಪಂಚಾಯತ್ ರಾಜ್ ಅಭಿವೃದ್ಧಿ ಸಚಿವ ಪ್ರಿಯಾಂಕಾ ಖರ್ಗೆ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಚಿಂತಕ ರವಿಕುಮಾರ ಭಾಗಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ. ಜೊತೆಗೆ ಯಾರೂ ಸರ್ವಶ್ರೇಷ್ಠರಲ್ಲ. ಹಾಗೆಯೇ ಯಾರೂ ಪ್ರಶ್ನಾತೀತರಲ್ಲ. ರಾಷ್ಟ್ರಪತಿಯೇ ಆಗಿರಲಿ, ಪ್ರಧಾನಮಂತ್ರಿಯೇ ಆಗಿರಲಿ, ಮುಖ್ಯಮಂತ್ರಿಯೇ ಆಗಿರಲಿ, ಸಚಿವರೇ ಆಗಿರಲಿ, ಶಾಸಕರೇ ಆಗಿರಲಿ ಇವರೆಲ್ಲರೂ ಪ್ರಜಾಪ್ರಭುತ್ವ ಸೇವಕರೇ ಹೊರತು ಯಾರಿಗೂ ಧಣಿಗಳಲ್ಲ. ಇವರು ಸೇವಕರಾಗಿರುವುದರಿಂದ ಈ ದೇಶದ ಪ್ರತಿಯೊಬ್ಬರೂ ಇವರನ್ನು ಪ್ರಶ್ನೆಮಾಡುವ ಹಕ್ಕುಳ್ಳವರಾಗಿದ್ದಾರೆ.
ಮೊನ್ನೆ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ‘ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ‘ತಿರಂಗಾಯಾತ್ರೆ’ ಕಾಠ್ಯಕ್ರಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ‘ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವವರನ್ನು ಹಾಗೂ ಪ್ರಶ್ನೆ ಮಾಡುವವರನ್ನು ನಾವು ಸಹಿಸುವುದಿಲ್ಲ. ಮೋದಿಯವರು ಆನೆ ಇದ್ದ ಹಾಗೆ ಅವರ ಬಗ್ಗೆ ಮಾತನಾಡುವವರು ನಾಯಿ ಇದ್ದ ಹಾಗೆ ಎಂದು ಅಸಂವಿಧಾನಿಕ ಪದ ಬಳಸಿ ಪ್ರಿಯಾಂಕ್ ಖರ್ಗೆಯವರನ್ನು ನೇರವಾಗಿ ನಾಯಿ ಎಂದು ಅವಮಾನಿಸಿ ತೇಜೋವಧೆ ಮಾಡಿದ್ದಾರೆ’.
ಇಷ್ಟಕ್ಕೂ ನರೇಂದ್ರ ಮೋದಿಯವರನ್ನು ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆಮಾಡುವುದು ತಪ್ಪೆ? ಮೋದಿಯವರೇನು ಪ್ರಶ್ನಾತೀತರೇ? ಮೋದಿಯವರು ಅವರಿಗೆ ನಾಯಕ ಆಗಿರಬಹುದು. ನಮ್ಮೆಲ್ಲರ ಪ್ರಧಾನ ಮಂತ್ರಿ ಮತ್ತು ಪ್ರಧಾನ ಸೇವಕರು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಅಧ್ಯಕ್ಷ ಮಾವಳ್ಳಿ ಶಂಕರ್ ಮಾತನಾಡಿ, ಛಲವಾದಿ ನಾರಾಯಣಸ್ವಾಮಿಯವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದಕ್ಕೋಸ್ಕರ ಇತರ ದಲಿತ ನಾಯಕರನ್ನು ವಿನಾಕಾರಣ ನಿಂದಿಸುವುದು ಅವರ ಅಕ್ಷಮ್ಯ ನಡವಳಿಕೆಯಾಗಿದೆ. ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆಯವರನ್ನು ವೀರಾವೇಶದಿಂದ ಬೈದು, ‘ನಾಯಿ’ ಎಂದು ನಿಂದಿಸಿ, ಅವಮಾನಿಸಿ ನಂತರ ನಾನು ಬಸವಣ್ಣನ ವಚನ ಹೇಳಿದೆ. ಗಾದೆ ಮಾತನ್ನು ಹೇಳಿದೆ ಹಾಗೆ ಹೀಗೆ ಎಂದು ವಿಷಾಧಿಸಿ ಕ್ಷಮೆ ಕೇಳಿದರು. ಇದು ಸರಿಯಾದ ಕ್ರಮವಲ್ಲ ಎಂದರು.
ಪೊಲೀಸರು ಭದ್ರತೆಯ ಕಾರಣದಿಂದ ಅಲ್ಲೇ ಉಳಿಸಿದ್ದರು ಮತ್ತು ಸಹಕರಿಸಿದರು ಎಂದೆಲ್ಲಾ ಹೇಳಿ ನಂತರ ಅಲ್ಲಿಂದ ಬೇಂಗಳೂರಿಗೆ ಬಂದು ಪ್ರಿಯಾಂಕ್ ಖರ್ಗೆಯವರ ಬೆಂಬಲಿಗರು ನನ್ನನ್ನು ದಿಗ್ಧಂಧನದಲ್ಲಿ ಇಟ್ಟಿದ್ದರು. ಹಲ್ಲೆ ಮಾಡಿದರು ಎಂದು ಸಂತ್ರಸ್ಥರ ಹಾಗೆ ರಾಜ್ಯಪಾಲರಿಗೆ ಹಾಗೂ ಸಭಾಪತಿಯವರಿಗೆ ದೂರುನೀಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜಾರಿ ನಿರ್ದೇಶನಾಲಯವನ್ನು (ಈಡಿ) ತನ್ನ ಗುರಾಣಿಯನ್ನಾಗಿ ಬಳಸುತ್ತಿದೆ. ತಮ್ಮ ಸರ್ಕಾರದ ವಿರುದ್ಧ ವಿರೋಧ ಪಕ್ಷದ ಯಾರೇ ನಾಯಕರು ಮಾತನಾಡಿದರೂ ಅವರ ವಿರುದ್ಧ ಈಡಿ ಯನ್ನು ಬಳಸಿ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ. ಇದೊಂದು ರೀತಿಯಲ್ಲಿ ಬಿಜೆಪಿ ಸಕಾರದ ಸೇಡಿನ ಅಪ್ರಜಾತಾಂತ್ರಿಕ ನಡೆಯಾಗಿದೆ. ಈಡಿ ಕೂಡ ತನ್ನ ಸ್ವಂತಿಕೆಯನ್ನು ಬಿಟ್ಟು ಕೇಂದ್ರ ಸರ್ಕಾರದ ಬಾಲಂಗೋಚಿಯಂತೆ ವರ್ತಿಸುತ್ತಿದೆ. ಇದರ ಪಕ್ಷಪಾತ ಪೂರಿತ ನಡವಳಿಕೆಯಿಂದ ಇಡೀ ದೇಶದ ಜನರೆದುರು ಬೆತ್ತಲುಗೊಂಡಿದೆ. ಇದು ಸಾಲದು ಎಂಬಂತೆ ಮೊನ್ನೆ ಮೊನ್ನೆ ಕರ್ನಾಟಕ ಸರ್ಕಾರದ ಗೃಹಮಂತ್ರಿ ಜಿ. ಪರಮೇಶ್ವರ್ ಅವರ ಮೇಲೆ ಈಡಿ ಧಾಳಿ ಮಾಡಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷಗಳ ವಿಷಯದಲ್ಲಿ ಯಾವುದಾದರೂ ನೆಪ ಸಿಕ್ಕರೆ ಸಾಕು ಕೂಡಲೇ ಈಡಿಯನ್ನು ಚೂ ಬಿಡುತ್ತದೆ ಎಂದು ಸಮಾಜದಲ್ಲಿ ಯಾರು ಸಹಿಸುವುದಿಲ್ಲ ಎಂದು ಆಗ್ರಹಿಸಿದರು.
ಛಲವಾದಿ ನಾರಾಯಣ ಸ್ವಾಮಿ ಅವರು ಕೇಂದ್ರದ ಮಂತ್ರಿ ವರ್ಗ, ಪ್ರದಾನ ಮಂತ್ರಿ ಅವರ ಹೆಸರನ್ನು ಬಳಸಿಕೊಂಡು ರಾಜ್ಯದಲ್ಲಿ ದುರಾಡಳಿತ ನಡೆಸುವುದಲ್ಲದೆ, ಸಮಾಜದಲ್ಲಿ, ಸಮುದಾಯಕ್ಕೆ ಕೆಟ್ಟ ಸಂದೇಶ ತಿಳಿಸುವಲ್ಲಿ ಪ್ರಮುಖ ವಹಿಸುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರು ಸಮಾಜದ ಮುಂದೆ ,ಸರ್ವಜ್ಞ ಇಜರ ಮುಂದೆ ಕ್ಷಮೆ ಕ್ಷಮೆಯಾಚಿಸಬೇಕು ಎಂದು ತಿಳಿಸಿದರು.