ಬೆಂಗಳೂರು: ಕನ್ನಡ ಜಾನಪದ ಪರಿಷತ್ತು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಘಟಕದಿಂದ ಪ್ರಥಮ ಬಾರಿಗೆ ರಾಜ್ಯ ಕನ್ನಡ ಜಾನಪದ ಸಮ್ಮೇಳನವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಭಾರತ ದೇಶದಲ್ಲಿ ಅದರಲ್ಲೂ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು ಇಂತಹ ಜಾನಪದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ದಶಮಾನೋತ್ಸವದಲ್ಲಿ ಸಾಗುತ್ತಿದೆ ನಾಡಿನ ಉದ್ದಗಲಕ್ಕೂ ಸಾವಿರಾರು ಕಾರ್ಯಕ್ರಮಗಳನ್ನು ಆರಿಸಿಕೊಂಡು ಬರುತ್ತದೆ.
ಪುಸ್ತಕ ದಿನಗಳಲ್ಲಿ ಮನುಷ್ಯನಿಗೆ ನೆಮ್ಮದಿ ಹಾಗೂ ಸಮಾಧಾನ ನೀಡುವಲ್ಲಿ ಜಾನಪದ ಪ್ರಮುಖ ಪಾತ್ರವಹಿಸುತ್ತದೆ, ಮಾನವನ ಮಾನಸಿಕ ನೆಮ್ಮದಿಗೆ ಜಾನಪದ ಸಂಗೀತ, ಸಾಹಿತ್ಯ,ನೃತ್ಯ, ಕಲೆಗಳು, ಪೂರಕವಾಗಿವೆ. ಇಂತಹ ಸಂದರ್ಭಗಳಲ್ಲಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪಣತೊಟ್ಟು ರಾಜಧಾನಿ ಬೆಂಗಳೂರಿನ ಪ್ರತಿಷ್ಠ ಗೋವಿಂದರಾಜದಗ ವಿಧಾನಸಭಾ ಕ್ಷೇತ್ರದ ಪ್ರಥಮ ರಾಜ್ಯ ಕನ್ನಡ ಜಾನಪದ ಸಮ್ಮೇಳನ ಅದ್ದೂರಿಯಾಗಿ ನಡೆಯಿತು.
ಇನ್ನು ರಾಜ್ಯ ಕನ್ನಡ ಜಾನಪದ ಸಮ್ಮೇಳನದ ಸಮ್ಮೇಳನ ಅಧ್ಯಕ್ಷರನ್ನಾಗಿ ನಿವೃತ್ತ ಅಧಿಕಾರಿ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಆದ ಡಾ. ಸಿ ಸೋಮಶೇಖರ್ ಅವರನ್ನು ಮಾಡಲಾಯಿತು. ಅವರ ಗಣನೀಯ ಸೇವೆಯನ್ನು ಗುರುತಿಸಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.
ಇನ್ನೂ ಸಮ್ಮೇಳನದಲ್ಲಿ ಬೆಳಿಗ್ಗೆ ಯಿಂದ ಸಂಜೆಯವರೆಗೂ ಸಹ ವಿವಿಧ ಜಾನಪದ ಕಲಾ ಪ್ರಕಾರಗಳು ವೇದಿಕೆ ಮೇಲೆ ಮನಸೂರಗೊಂಡವು, ರಾಜ್ಯದ ವಿವಿಧ ಜಿಲ್ಲೆಗಳಿಂದ ಜಾನಪದ ಕಲಾವಿದರು ಆಗಮಿಸಿ ಸಮ್ಮೇಳನಕ್ಕೆ ಹೆಚ್ಚಿನ ಮೆರುಗು ನೀಡಿದರು. ಅಲ್ಲದೆ ವೇದಿಕೆ ಮೇಲೆ ಜಾನಪದ ಪ್ರಕಾರಗಳ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಇನ್ನು ಜಾನಪದ ಕ್ಷೇತ್ರದಲ್ಲಿ ಎಲೆಮರೆಕಾಯಿಯಂತೆ ದುಡಿಯುತ್ತಿರುವ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ 43ಜನ ಸಾಧಕರಿಗೆ ದಶಮಾನೋತ್ಸವ ಜಾನಪದ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದರ ಜೊತೆಗೆ ನೂರಕ್ಕಿಂತ ಹೆಚ್ಚು ಜಾನಪದ ಕಲಾವಿದರಿಗೆ ದಶಮಾನೋತ್ಸವ ರಾಜ್ಯ ಯುವ ಸಿರಿ ಪ್ರಶಸ್ತಿಯನ್ನು ನೀಡಿ ಇದೇ ವೇಳೆ ಗೌರವಿಸಲಾಯಿತು.
ಇನ್ನು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರಾಮಪುರ ಅಲ್ಲಮ ಪ್ರಭು ಮಹಾಸ್ವಾಮಿಗಳು ಪೀಠಾಧ್ಯಕ್ಷರು ನಾಗನೂರು ರುದ್ರಾಕ್ಷಿಮಠ ಬೆಳಗಾವಿ ವಹಿಸಿದ್ದರು ಅದರ ಜೊತೆಗೆ ದಿವ್ಯ ಸಮ್ಮುಖದಲ್ಲಿ ಪರಮಪೂಜ್ಯ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಪೀಠಾಧ್ಯಕ್ಷರು ಅಥಣಿ ಶ್ರೀ ಮೋಟಗಿ ಮಠ.
ಸೋಬಾನ ಕನ್ನಡ ಸಂಚಿಕೆ, ಜಾನಪದ ನೂರೊಂದು ಕೃತಿ, ಜಾನಪದ ಬಂಡಿ ಬಾಗಲಕೋಟೆ ಸ್ಮರಣ ಸಂಚಿಕೆ ಜಾನಪದ ಕೃತಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾಕ್ಟರ್ ನಾಗಲಕ್ಷ್ಮಿ ಚೌದರಿ ಜಾನಪದ ವಿದ್ವಾಂಸ ಡಾಕ್ಟರ್ ಗುರುರಾಜ ಹೊಸಕೋಟೆ ಬಂಜಾರ ಅಕಾಡೆಮಿಯ ಅಧ್ಯಕ್ಷರಾದ ಗೋವಿಂದಸ್ವಾಮಿ ಸೇರಿದಂತೆ ಹಿರಿಯ ಜಾನಪದ ಕಲಾವಿದರು ಸಾಹಿತಿಗಳು ಉಪಸ್ಥಿತರಿದ್ದರು.
ಇನ್ನೂ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜಾಣಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ಆಗಮಿಸಿದರು, ಅವರಿಗೆ ಕವಿಗೋಷ್ಠಿಯನ್ನು ಸಹ ಮಾಡಲಾಯಿತು ಕವಿಗೋಷ್ಠಿಯಲ್ಲಿ ಅವರದೇ ಆದಂತಹ ಕವಿತೆಗಳ ಬಗ್ಗೆ ಹಾಗೂ ಸಾಹಿತ್ಯದ ಬಗ್ಗೆ ಸಾಕಷ್ಟು ಮಿಲಕನ್ನು ಸಹ ಹಾಕಿದರು.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಸಮ್ಮೇಳನವನ್ನು ಅದ್ದೂರಿಯಾಗಿ ಮಾದರಿಯ ಹಾಗೂ ಐತಿಹಾಸಿಕ ಸಮ್ಮೇಳನ ವನ್ನಾಗಿಸಲು ಶಾಲಾ ಕಾಲೇಜು, ವಿದ್ಯಾರ್ಥಿಗಳು, ಶಿಕ್ಷಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಕನ್ನಡ ಕಲಾಪಾನಿಗಳು ಹೆಚ್ಚಿನದಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಕನ್ನಡ ಜಾನಪದ ಸಮ್ಮೇಳನ ಯಶಸ್ವಿಯಾಗಲು ಕಾರಣ ಭೂತರಾಗಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾಕ್ಟರ್ ಜಾನಪದ ಎಸ್ ಬಾಲಾಜಿ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರಾದ ಡಾಕ್ಟರ್ ರಿಯಾಜ್ ಪಾಶ ಗೋವಿಂದರಾಜ ನಗರ ಕ್ಷೇತ್ರದ ಪರಿಷತ್ತಿನ ಮಹಿಳಾ ಅಧ್ಯಕ್ಷರಾದ ಸವಿತಾ ಎನ್ ಕುಮಾರ್ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಹಾಗೆ ಅಧ್ಯಕ್ಷರಾದ ರಾಮ್ ನರಸಿಂಹಮೂರ್ತಿ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು ಸದಸ್ಯರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅಲ್ಲದೆ ಶಿಸ್ತು ಬದ್ಧವಾಗಿ ಪ್ರಥಮ ರಾಜ್ಯ ಕನ್ನಡ ಜಾನಪದ ಸಮ್ಮೇಳನವನ್ನು ಯಶಸ್ವಿಗೊಳಿಸಿದರು.