ಬೆಂಗಳೂರು: ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ ವೈದ್ಯರ ದಿನಾಚರಣೆಯನ್ನು ಜುಲೈ 1ರಂದು ಭಾರತೀಯ ಸಂಘದಿಂದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಡಾ. ವಿವಿ ಚಿನಿವಾಲಾರ್ ತಿಳಿಸಿದರು.
ಬೆಂಗಳೂರಿನ ಪ್ರಸ್ಥಭನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,
1928 ರಲ್ಲಿ ಪ್ರಾರಂಭವಾದ ಭಾರತೀಯ ವೈದ್ಯಕೀಯ ಸಂಘವು ವಿಶ್ವದ ಅತಿದೊಡ್ಡ ವೈದ್ಯರ ಸಂಘವಾಗಿದ್ದು ಆಧುನಿಕ ವೈದ್ಯಪದ್ಧತಿಯನ್ನು ವೃತ್ತಿಯಾಗಿ ಸ್ವೀಕರಿಸಿರುವ ಭಾರತದ ವೈದ್ಯರ ಸ್ವಯಂ ಸೇವಾ ಸಂಘವಾಗಿದೆ. ಇದರಡಿಯಲ್ಲಿ 4 ಲಕ್ಷ ವೈದ್ಯರು 32 ರಾಜ್ಯಗಳ, 686 ಜಿಲ್ಲೆಯ, 1765 ಶಾಖೆಗಳ ಮೂಲಕ ಸದಸ್ಯತ್ವ ಹೊಂದಿದ್ದಾರೆ. ಅದರಲ್ಲಿ ಕರ್ನಾಟಕದ 180 ಶಾಖೆಗಳು ಹಾಗೂ ನಮ್ಮ 31000 ಸದಸ್ಯರುಗಳು ಸೇರಿದ್ದಾರೆ.
ನಮ್ಮ ಸಂಘದ ಉದ್ದೇಶಗಳು,
1.ವೈದ್ಯಕೀಯ ಕ್ಷೇತ್ರಕ್ಕೆ ಸಂಬಂದಪಟ್ಟ ವಿಷಯಗಳ ಕುರಿತುಸಮರ್ಥರಾದ ವೈದ್ಯವಿದ್ವಾಂಸರಿಂದ ಉಪನ್ಯಾಸಗಳನ್ನು ಏರ್ಪಡಿಸುವುದು.
2.ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುವ ಹೊಸ ಬೆಳವಣಿಗೆಗಳನ್ನು ತನ್ನ ಸದಸ್ಯರುಗಳಿಗೆ ವೈಜ್ಞಾನಿಕ ಉಪನ್ಯಾಸಗಳ ಮೂಲಕ ತಿಳಿಸುವುದು.
3. ವೈದ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ನಿರಂತರ ವೈದ್ಯ ಶಿಕ್ಷಣದ ಮೂಲಕ ವೇದಿಕೆ ಕಲ್ಪಿಸುವುದು.
4. ವೈದ್ಯವೃತ್ತಿಯಲ್ಲಿ ಅನುಪಮ ಸೇವೆ ಸಲ್ಲಿಸಿರುವ ಹಿರಿಯ ವೈದ್ಯರನ್ನು ಸನ್ಮಾನಿಸುವುದು.
5. ವೈದ್ಯ ಮತ್ತು ರೋಗಿಗಳ ಸಂಬಂಧಗಳನ್ನು ಗಟ್ಟಿಗೊಳಿಸುವ ಕುರಿತುಗೋಷ್ಠಿಗಳನ್ನು ನಡೆಸುವುದು.
6. ಸಮುದಾಯ ಆರೋಗ್ಯದಲ್ಲಿ ವೈದ್ಯರು ಭಾಗವಹಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. “ಐ.ಎಂ.ಎ. ನಡೆ ಶಾಲೆಯಕಡೆ” “ಐ.ಎಂ.ವಿ.ನಡೆ ಸೈನಿಕರಕಡೆ” “ಐ.ಎಂ.ವಿ.ನಡೆ ಹಳ್ಳಿಗಳ ಕಡೆ”
7. ಐ.ಎಂ.ಎ. ಕನ್ನಡ ವೈದ್ಯ ಬರಹಗಾರರ ಸಮಿತಿಯ ಮುಖಾಂತರ ಸಾರ್ವಜನಿಕರಿಗೆ ಸಾಮಾನ್ಯ ಖಾಯಿಲೆಗಳ ಬಗ್ಗೆ * ಪ್ರಕಟಿಸುವುದು. ಅರಿವು ಮೂಡಿಸುವ ಕೈಪಿಡಿಗಳನ್ನು ಪ್ರಕಟಿಸುವುದು.
ಡಾ ಬಿ ಸಿ ರಾಯ್ ರವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಹಾಗೂ ಮಹಾತ್ಮ ಗಾಂಧೀಜಿಯವರಿಗೆ ವೈದ್ಯಕೀಯ ಸಲಹೆಗಾರರಾಗಿದ್ದರು. 16 ವರ್ಷಗಳ ಕಾಲ ಬೆಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಇವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರಕಾರವು ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಡಾ ಬಿ ಸಿ ರಾಯ್ರವರ ಜನನದ ದಿನವಾದ ಜುಲೈ ಒಂದರಂದೇ ತಮ್ಮನ್ನಗಲಿರುವ ಇವರ ನೆನಪಿಗಾಗಿ ಪ್ರತೀ ವರ್ಷ ಜುಲೈ ಒಂದರಂದು “ಭಾರತದ ವೈದ್ಯರದಿನ” ವಾಗಿ ಆಚರಿಸಲಾಗುತ್ತದೆ. ಈ ದಿನದಂದು ವೈದ್ಯಕೀಯ ಸಾಮಾಜಿಕ ಮತ್ತು ಇನ್ನಿತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರತಿಷ್ಠಿತ ವೈದ್ಯರಿಗೆ ಸನ್ಮಾನಿಸಲಾಗುತ್ತಿದೆ. ಈ ಪರಂಪರೆ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ,ರಾಜ್ಯ ಮಟ್ಟದಲ್ಲಿ ಮತ್ತು ಶಾಖೆಗಳಲ್ಲಿಯೂ ವೈದ್ಯರನ್ನು ಸನ್ಮಾನಿಸಲಾಗುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯ ಶಾಖೆಯು ರಾಜ್ಯದ ಬೇರೆ ಬೇರೆ ಜಿಲ್ಲಾ, ತಾಲೂಕ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸೇವೆ ಸಲ್ಲಿಸಿದ 14 ಮಹನೀಯ ವೈದ್ಯರುಗಳಿಗೆ ಸನ್ಮಾನಿಸಲಾಗುತ್ತಿದೆ. ಈ ವರ್ಷ ಆಯ್ಕೆಯಾಗಿರುವವರಲ್ಲಿ ಸುಮಾರು 60 ವರ್ಷಗಳ ಹಿಂದೆಯೇ ರೋಣದಂದಹ ಕುಗ್ರಾಮಕ್ಕೆ ಆಧುನಿಕ ವೈದ್ಯ ಸೇವೆ ತಲುಪಿಸಿದ, 40 ವರ್ಷಗಳಿಂದ ಯಾವುದೇ ಅಧುನಿಕ ಸೌಲಭ್ಯಗಳಿಲ್ಲದ