ಬೆಂಗಳೂರು: ಕರ್ನಾಟಕ ರಾಜ್ಯ ಮಡಿವಾಳರ ಸಂಘದಿಂದ 2025 26 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಯೊಬ್ಬ ಪುರಸ್ಕಾರ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ ನಂಜಪ್ಪ ಅವರು ತಿಳಿಸಿದರು.
ಬೆಂಗಳೂರಿನ ಪ್ಲಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಡಿವಾಳ ಜನಾಂಗ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದಿದ್ದು ಜನಾಂಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯದ ಎಲ್ಲಾ ಭಾಗದ ಮಡಿವಾಳ ವಿದ್ಯಾರ್ಥಿಗಳನ್ನು ಗುರುತಿಸುವ ಸಲುವಾಗಿ ಜಿಲ್ಲಾ ತಾಲ್ಲೂಕು ಗ್ರಾಮಾಂತರ ಮಟ್ಟದಲ್ಲಿರುವ ಸಮುದಾಯದ ಮಕ್ಕಳನ್ನು ಶೈಕ್ಷಣಿಕವಾಗಿ ಮೇಲೆತ್ತುವ ಸಲುವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮಕ್ಕಳಿಗೆ ನಗದು ಬಹುಮಾನ ಸೇರಿರುತ್ತದೆ ಹಾಗೆ ಮಡಿವಾಳ ಸಮುದಾಯದಲ್ಲಿ ಬಡ ಮಕ್ಕಳಿಗೆ ವಿದ್ಯಾರ್ಥಿ ನಿಲಯ ಸೌಲಭ್ಯವನ್ನು ಸಹ ಒದಗಿಸಿಕೊಡಲಾಗುತ್ತಿದ್ದು ಉಚಿತವಾಗಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ ಆರ್ ಪ್ರಕಾಶ್ ಮಾತನಾಡಿ ಇನ್ನೂ ಪ್ರತಿಭಾ ಪುರಸ್ಕಾರಕ್ಕೆ ಮಕ್ಕಳು ಹೆಸರು ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 80ಕ್ಕಿಂತ ಅಧಿಕ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡ 90 ಕ್ಕಿಂತ ಅಧಿಕ ಅಂಕ ಗಳಿಸಿರುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು 2025ರ ಅಂಕಪಟ್ಟಿ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳು ಆಧಾರ ಕಾರ್ಡ್ ಹಾಗೂ ಸ್ವಂತ ವಿಳಾಸ ಮೊಬೈಲ್ ಸಂಖ್ಯೆ ಎಲ್ಲಾ ಮಾಹಿತಿಗಳನ್ನು ಸಂಘದ ಕಚೇರಿ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳಿಸಬಹುದು, ಸಂಘದ ವಿಳಾಸ ಕರ್ನಾಟಕ ರಾಜ್ಯ ಮಡಿವಾಳರ ಸಂಘ ನಂಬರ್ 07 ಶಿರೂರು ಪಾರ್ಕ್ ರಸ್ತೆ ಶೇಷಾದ್ರಿಪುರಂ ಬೆಂಗಳೂರು ಇಲ್ಲಿಗೆ ಜುಲೈ 30ರೊಳಗಾಗಿ ಕಳಿಸುಕೊಡಬೇಕಾಗಿದೆ.
ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಂಘದ ದೂರವಾಣಿ 08023460946 ಹಾಗೂ ಪ್ರಧಾನ ಕಾರ್ಯದರ್ಶಿ, ಬಿ ಆರ್ ಪ್ರಕಾಶ್ ಅವರ ದೂರವಾಣಿ ಸಂಖ್ಯೆ 96166485 ಹಾಗೂ ನೌಕರ ಸಮಿತಿಯ ಉಪ ಚೇರ್ಮನಾದಂತಹ ಶಿವಕುಮಾರ್ ಈ ಎಚ್ ಅವರ ದೂರವಾಣಿ ಸಂಖ್ಯೆ 9980408392 ಹಾಗೂ ಪ್ರಧಾನ ಸಂಚಾಲಕರಾದಂತಹ ಪ್ರಭಾಕರ್ ಅವರ ದೂರವಾಣಿ ಸಂಖ್ಯೆ 994542124 ಗೆ ಸಂಪರ್ಕಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.