ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಬಿಬಿಎಂಪಿ ಸದಸ್ಯರಾದ ಆರ್ ವಿ ಯುವರಾಜ್ ಅವರ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.
ಕಾಂಗ್ರೆಸ್ನ ಯುವ ನಾಯಕನಾದ ಆರ್ ಬಿ ಯುವರಾಜ್ ಅವರ ಹುಟ್ಟುಹಬ್ಬವನ್ನು ಜೆಸಿ ರಸ್ತೆಯ ಅವರ ಕಚೇರಿಯಲ್ಲಿ ಪ್ರತಿವರ್ಷಕ್ಕಿಂತ ಈ ಬಾರಿ ವಿಶೇಷವಾಗಿ ತಮ್ಮ ಹುಟ್ಟು ಹಬ್ಬವನ್ನು ಆರ್ ವಿ ದೇವರಾಜ್ ಪ್ರತಿಷ್ಠಾನದಿಂದ ಆ ಯೋಜನೆ ಮಾಡಲಾಗಿತ್ತು . ಈ ಬಾರಿ ಮೂರು ಜನ ಧರ್ಮ ಗುರುಗಳನ್ನು ಕಾರ್ಯಕ್ರಮಕ್ಕೆ ಬಂದಿದ್ದು ಹುಟ್ಟುಹಬ್ಬಕ್ಕೆ ಮತ್ತಷ್ಟು ಮೆರೆಗನ್ನು ನೀಡಿದೆ. ಮೂರು ಧರ್ಮ ಗುರುಗಳು ಸಹ ಆರ್ ವಿ ಯುವರಾಜ್ ಅವರಿಗೆ ಶುಭ ಆಶೀರ್ವಾದವನ್ನು ನೀಡಿದರು.
ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಕಚೇರಿಯಲ್ಲಿ ಹೋಮ ಹವನ ಪೂಜಾ ಕೈಂ ಕರ್ಯಗಳು ಪುರೋಹಿತ ವರ್ಗದವರಿಂದ ಸಾಂಗವಾಗಿ ನಡೆದವು, ಕೆಟ್ಟ ಕಣ್ಣುಗಳು ಹಾಗೂ ರಾಜಕೀಯ ಹಾಗೂ ಜೀವನದಲ್ಲಿ ಯಾವುದೇ ಅಡೆತಡೆಗಳು ಎದುರಾಗಬಾರದು ಎಂಬ ನಿಟ್ಟಿನಲ್ಲಿ ವಿಶೇಷ ಪೂಜಾ ಕೈಂ ಕರ್ಯಗಳು ಸಾಂಗವಾಗಿ ಬೆಳಿಗ್ಗೆಯಿಂದ ನಡೆದವು, ಹೋಮ ಹವನ ಕಾರ್ಯಕ್ರಮದಲ್ಲಿ ಆರ್ ವಿ ಯುವರಾಜ ಅವರ ತಂದೆ ತಾಯಿ ಸಹೋದರಿಯರು ಅಭಿಮಾನಿಗಳು ಇದೆ ವೇಳೆ ಉಪಸ್ಥಿತರಿದ್ದರು.
ಆರ್ ವಿ ಕುಟುಂಬಕ್ಕೆ ಸಮಾಜ ಸೇವೆ ಮಾಡುವ ಶಕ್ತಿ ನೀಡಲಿ
ಬೇಲಿಮಠ ಮಹಾಸಂಸ್ಥಾನ ಪೀಠಾಧ್ಯಕ್ಷ ಶಿವರುದ್ರ ಸ್ವಾಮೀಜಿಗಳು ಮಾತನಾಡಿ, ಆರ್ ವಿ ದೇವರಾಜ ಅವರ ಪುತ್ರ ಆರ್ ವಿ ಯುವರಾಜ್ ಅವರು ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿ ಕ್ಷೇತ್ರದ ಜನರಿಗೆ ಕೆಲಸ ಕಾರ್ಯಗಳನ್ನು ಮಾಡುವ ಶಕ್ತಿ ನೀಡುವಂತಾಗಲಿ, ಅದೇ ರೀತಿ ಅವರ ಇಡೀ ಕುಟುಂಬಕ್ಕೆ ಸಮಾಜಮುಖಿ ಕೆಲಸಗಳನ್ನು ಮಾಡುವ ಶಕ್ತಿ ನೀಡಲಿ ಎಂದರು. ಕುಟುಂಬದವರ ಸಂಕಲ್ಪಗಳೆಲ್ಲವೂ ಸಹ ನೆರವೇರಲಿ. ದೊಡ್ಡ ದೊಡ್ಡ ಸ್ಥಾನಮಾನಗಳು ರಾಜಕೀಯ ಜೀವನದಲ್ಲಿ ಸಿಕ್ಕಿ ಎತ್ತರದ ಮಟ್ಟಕ್ಕೆ ಬೆಳೆದು ಮತ್ತಷ್ಟು ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿ ಎಂದು ಆಶಿಸಿದರು.
ಹಡ್ಸನ್ ಮೆಮೋರಿಯಲ್ ಚರ್ಚಿನ ಉಸ್ತುವಾರಿಗಳು ಮತ್ತು ಮತದತು ಮಹ್ಮದ್ ಹುಟ್ಟು ಹಬ್ಬದಲ್ಲಿ ಭಾಗಿಯಾಗಿ ಮಾತನಾಡಿದರು, ಆರೋಗ್ಯವನ್ನು ಎಷ್ಟೇ ದುಡ್ಡು ಕೊಟ್ಟು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಬೇರೆಯವರು ಕೊಡುವ ದೊಡ್ಡ ಕೃಪಾ ಆಶೀರ್ವಾದಗಳೇ ಉತ್ತಮ ಆರೋಗ್ಯ ಎಂದರು. ದೇಶಕ್ಕೆ ರಾಜ್ಯಕ್ಕೆ ಸಮಾಜಕ್ಕೆ ಹೆಚ್ಚು ಸೇವೆ ಮಾಡುವ ಆರೋಗ್ಯವನ್ನು ದೇವರು ಕರುಣಿಸಲಿ, ಅದೇ ರೀತಿ ದೇವರಾಜ ಅವರ ಇಡೀ ಕುಟುಂಬ ಆರೋಗ್ಯವಾಗಿದ್ದು ಮತ್ತಷ್ಟು ಕ್ಷೇತ್ರಕ್ಕೆ ಸೇವೆ ಮಾಡುವ ಶಕ್ತಿ ಅವರಿಗೆ ನೀಡಲಿ ಎಂದು ಆಶಿಸಿದರು.
ಮದ್ರಸ್ ಅರೇಬೀಯಾ ಸಂಸ್ಥೆಯ ಮುಖ್ಯಸ್ಥರಾದ ಅಶ್ರಪ್ ಅಲಿ ರಶೀದ್ ಮಾತನಾಡಿ, ಅಲ್ಲಾ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಖುರಾನ್ ನಲ್ಲಿ ಒಂದು ಸೂತ್ರವಿದೆ ಯಾರು ಜನಗಳ ಸೇವೆ ಮಾಡುತ್ತಾನೋ ಅವನು ಅವರ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವ ಮಾತಿದೆ. ಅದೇ ರೀತಿ ಆರ್ ವಿ ದೇವರಾಜ್ ಅವರ ಇಡೀ ಕುಟುಂಬ ಸಮಜ ಸೇವೆಯಲ್ಲಿ ತೊಡಗಿಕೊಳ್ಳಲಿ ಅವರ ಕುಟುಂಬ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಅಲ್ಲನಲ್ಲಿ ಬೇಡಿಕೊಂಡರು. ದೇಶ ರಾಜ್ಯದಲ್ಲಿ ಹೆಚ್ಚು ಹೆಸರು ಮಾಡುವಂತಹ ಕೆಲಸವಾಗಲಿ ಎಂದು ಭವಿಷ್ಯವನ್ನು ನುಡಿದರು.
ಹಿರಿಯ ಕಾಂಗ್ರೆಸ್ ಮುಖಂಡ ಕೆಎಂ ನಾಗರಾಜ್ ಅವರು ಮಾತನಾಡಿ, ಕುವೆಂಪು ಅವರ ಆಶಯದಂತೆ ವಿಶ್ವ ವಿಶ್ವಮಾನವನಾಗು ಎಲ್ಲಾ ಲಕ್ಷಣಗಳು ಅವರಲ್ಲಿ ಇವೆ ವಿಶ್ವಕ್ಕೆ ಮಾನವರಾಗಬೇಕಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬುದು ಇವರಿಗೆ ಹೇಳಿದಂತಾಗಿದೆ ಎಲ್ಲಾ ಧರ್ಮದವರು ಸಹ ಒಂದೇ ಎಂಬ ಭವನೆ ಮೂಡಬೇಕಾಗಿದೆ. ನಮ್ಮ ಭಾರತದ ಧರ್ಮ ವೇದ ಉಪನಿಷತ್ತುಗಳ ಆಧಾರದ ಮೇಲೆ ರೂಪಿತಗೊಂಡಿದೆ. ನಾವೆಲ್ಲರೂ ಸಹ ಉಪನಿಷತ್ತುಗಳ ಆಧಾರದ ಮೇಲೆ ನಡೆಯಬೇಕಾಗಿದೆ. ವೇದ ಉಪನಿಷತ್ತುಗಳು ಕೇವಲ ಜಾತಿ ಧರ್ಮಕ್ಕೆ ಸೀಮಿತವಾಗದೆ ಇಡೀ ಮಾನವನ ಕುಲಕ್ಕೆ ಬೇಕಾಗಿದೆ ಎಂದರು. ನಾವೆಲ್ಲರೂ ಒಂದೇ ಹೊಸ ದೈವಕುಟುಂಬಕಂ ಎಂಬ ಮಾತು ಇಲ್ಲಿ ಸೂಕ್ತವಾಗಿದೆ. ನಾವು ಯಾರು ಬೇರೆ ಬೇರೆ ಅಲ್ಲ ಸಮ ಬಾಳುವೆಯಾಗಿ ಜೀವಿಸೋಣ ಎಂದು ಮತ್ತೊಮ್ಮೆ ಆರ್ ವಿ ಯುವರಾಜ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳ ಜೊತೆಗೆ ಅವರ ಆರೋಗ್ಯ ಅಂತಸ್ತು ಐಶ್ವರ್ಯ ದೇವರು ಕರುಣಿಸಿ ಸಮಾಜ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.
ಆರ್ ವಿ ಯುವರಾಜ್ ಅವರ ತಂದೆ ತಾಯಿ ಮಾತನಾಡಿ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಮಗೆ ಜನರು ಆಶೀರ್ವಾದವನ್ನು ನೀಡಿ ಸಮಾಜ ಸೇವೆ ಮಾಡುವ ಕೆಲಸವನ್ನು ಕೊಟ್ಟಿದ್ದಾರೆ. ಅದನ್ನು ನಿರಂತರವಾಗಿ ಮಾಡಿಕೊಂಡ ಹೋಗುತ್ತೇವೆ, ನಮ್ಮ ಕಾಲಾವಧಿಯಲ್ಲಿಯೂ ಸಹ ಸಾಕಷ್ಟು ಜನ ಸೇವೆಗಳನ್ನು ಮಾಡಿಕೊಂಡು ಬಂದಿದ್ದೇವೆ. ಈಗ ನಾವು ಕ್ಷೇತ್ರದ ಜನರಿಗೆ ಹಾಗೂ ಸಾರ್ವಜನಿಕರಿಗೆ ಬದುಕುವ ಮಾರ್ಗವನ್ನು ಹೇಳುವ ಜತೆಗೆ ಕಲಿಸಿಕೊಡುತ್ತೇವೆ. ಅವರು ಜೀವನ ರೂಪಿಸಿಕೊಳ್ಳಲಿ ಎಂದರು. ಕ್ಷೇತ್ರದ ಜನರ ಆಶೀರ್ವಾದ ಇರುವ ತನಕ ಸಾಕಸ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೇವೆ. ನಾಡಿನ ಸಮಸ್ತ ಜನತೆಗೆ ಆರೋಗ್ಯವನ್ನು ಆ ದೇವರು ಕರುಣಿಸಲಿ ಎಂದು ತಿಳಿಸಿದರು.
ಜನರ ಪ್ರೀತಿಗಳಿಸಲು ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ
ಯುವ ನಾಯಕ ಬಿಬಿಎಂಪಿ ಮಾಜಿ ಸದಸ್ಯ ಆರ್ ವಿ ಯುವರಾಜ್ ಮಾತನಾಡಿ, ಈ ಸಂದರ್ಭದಲ್ಲಿ ನಾನು ಏನು ಮಾತನಾಡಬೇಕು ಎಂಬುದು ನನಗೆ ತಿಳಿಯುತ್ತಿಲ್ಲ ಯಾವ ಜನ್ಮದ ಪುಣ್ಯವೋ ನನಗೆ ಗೊತ್ತಿಲ್ಲ ನನ್ನ ಕ್ಷೇತ್ರದ ಜನರು ಇಷ್ಟು ಅಭಿಮಾನದಿಂದ ನನ್ನನ್ನು ಸಮಾಜ ಸೇವೆ ಮಾಡುವ ಕೆಲಸಕ್ಕೆ ಪ್ರೋತ್ಸಾಹಿಸುತ್ತಿರುವುದು ನನಗೆ ಯಾವ ಜನ್ಮದಲ್ಲಿ ತೀರಿಸಲಿ ಎಂಬುದು ಗೊತ್ತಾಗುತ್ತಿಲ್ಲ ಎಂದರು.
ಈ ಹಿಂದೆಯೂ ಸಹ ಮೂರು ಜನ ಧರ್ಮಗುರುಗಳು ನಮ್ಮ ವಾರ್ಡ್ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಿರಿ ಅಲ್ಲಿಯೂ ಸಹ ನಮಗೆ ಆಶೀರ್ವಾದವನ್ನು ನೀಡಿದ್ದೀರಿ, ಅದೇ ರೀತಿ ನನ್ನ ಹುಟ್ಟುಹಬ್ಬಕ್ಕೆ ಈ ಬಾರಿ ಸಹ ಮೂರು ಜನ ಧರ್ಮ ಗುರುಗಳು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಾದವನ್ನು ನೀಡಿದರಿ ಎಂದರು. ಕಾಂಗ್ರೆಸ್ನ ಹಿರಿಯ ಮುಖಂಡರಾದ ಕೆಎಂ ನಾಗರಾಜ ಅವರನ್ನು ಹ್ಯೂಮನ್ ಎನ್ ಸೈಕ್ಲೋಪಿಡಿಯಾ ಎಂದು ನಾನು ಯಾವಾಗಲೂ ಕರೆಯುತ್ತೇನೆ, ಬೇರೆ ಕಾರ್ಯಕ್ರಮ ಇದ್ದರೂ ಸಹ ಅದನ್ನು ಹೊರತುಪಡಿಸಿ ನನ್ನ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದು ನಮಗೆ ಅತಿವ ಸಂತೋಷವಾಗಿದೆ ಎಂದರು.
ನನ್ನ ಹುಟ್ಟುಹಬ್ಬಕ್ಕೆ ನೂರಾರು ಜನ ಬಂದು ಹಾರೈಸಿದ್ದಾರೆ ಅವರ ಸೇವೆ ಮಾಡುವ ಕಾಯಕಕ್ಕೆ ದೇವರು ನನ್ನನ್ನು ಹುಟ್ಟಿಸಿದ್ದಾನೆ ಎಂಬ ಮಾತನ್ನು ಅವರು ಹೇಳಿದರು. ಇದು ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ ಎಂದರು. ರಾಜಕೀಯದಲ್ಲಿ ಒಮ್ಮೆ ಸೋತರೆ ಅವನ ರಾಜಕೀಯ ಭವಿಷ್ಯವೇ ಮುಗಿದಂಗೆ ಆಗುತ್ತದೆ, ಆದರೂ ಸಹ ಒಂದು ಎಂಎಲ್ಎ ಆಗಲಿ ಕಾರ್ಪೊರೇಟ್ ಸ್ಥಾನಕ್ಕೆ ಆಗಲಿ ಸೋತರೆ ಅವನ ಇಡೀ ಜೀವನವೇ ಶೂನ್ಯ ಅಂದಹಾಗೆ ಇವೆಲ್ಲದರ ಮಧ್ಯೆ ನಮ್ಮ ಕ್ಷೇತ್ರದ ಜನರು ಪ್ರತಿ ಬಾರಿಯೂ ನಮ್ಮನ್ನು ಪ್ರೋತ್ಸಾಹಿಸಿ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಕೆಲಸಗಳನ್ನು ಮಾಡುವ ಹಾಗೆ ಮಾಡಿದ್ದಾರೆ, ಹಾಗೂ ಸಮಾಜಸೇವೆ ಮಾಡುವ ಹಾಗೆ ಪ್ರೋತ್ಸಾಹಿಸಿರುವುದು ಮರೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಇವೆಲ್ಲದರ ಮಧ್ಯೆ ನಮ್ಮ ತಂದೆ ಪಕ್ಷದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಕೆಳ ಹಂತದಿಂದ ಸಾಕಷ್ಟು ಕೆಲಸ ಕಾರ್ಯಗಳನ್ನು ಹಾಗೂ ಜನ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ, ಆ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ, ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತೇನೆ ಎಂದು ಸಾರ್ವಜನಿಕರಲ್ಲಿ ಹಾಗೂ ಕ್ಷೇತ್ರದ ಜನರಲ್ಲಿ ಅಭಯ ಹಸ್ತ ನೀಡಿದರು.
ಹುಟ್ಟುಹಬ್ಬ ಹಿನ್ನೆಲೆ ಆರೋಗ್ಯ ಶಿಬಿರ ಹಾಗೂ ಅನ್ನದಾನ
ಇನ್ನು ಆರ್ ವಿ ಯುವರಾಜ ಅವರ ಹುಟ್ಟುಹಬ್ಬ ಹಿನ್ನೆಲೆ ಅವರ ಕಚೇರಿಯಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಸಹ ಆರೋಗ್ಯ ಶಿಬಿರವನ್ನು ಸಾರ್ವಜನಿಕರಿಗೆ ಉಚಿತವಾಗಿ ಆಯೋಜನೆ ಮಾಡಲಾಗಿತ್ತು, ಕ್ಷೇತ್ರದ ಸಾಕಷ್ಟು ಜನರು ಈ ಒಂದು ಆರೋಗ್ಯ ಶಿಬಿರದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಪರೀಕ್ಷೆಗಳನ್ನು ಮಾಡಿಸಿಕೊಂಡು ಚಿಕಿತ್ಸೆಯನ್ನು ಪಡೆದುಕೊಂಡರು, ಅದರ ಜೊತೆಗೆ ಹುಟ್ಟು ಹಬ್ಬದ ನಿಮಿತ್ತ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸಹ ಅನ್ನದಾನವನ್ನು ಸಹ ಆಯೋಜನೆ ಮಾಡಲಾಯಿತು.
ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಹರ್ಷದ್, ತ್ಯಾಗರಾಜ್, ಬಲಿಜ ಸಮಾಜದ ಮುಖಂಡರು, ಕಿಶೋರ್,ಕೆ ವಿ ಗೌತಮ್, ಕಾಂಗ್ರೆಸ್ ಮುಖಂಡರು ಸೇರಿದಂತೆ ನೂರಾರು ಆರ್ ವಿ ಯುವರಾಜ್ ಅವರ ಅಭಿಮಾನಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.