ಬೆಂಗಳೂರು :ಪಾಲಿಕೆಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ವಲಯ ಆಯುಕ್ತರ ನೇತೃತ್ವದಲ್ಲಿ ವಿವಿದೆಡೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
*ಇಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ಸ್ಥಳಗಳು ಈ ಕೆಳಗಿನಂತಿವೆ:*
*1. ಬಸವನಗುಡಿ ವಿಭಾಗ:*
ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೀದಿ
*2. ಬಿ.ಟಿ.ಎಂ ಲೇಔಟ್ ವಿಭಾಗ:* ಲಸ್ಕರ್ ಹೊಸೂರು ರಸ್ತೆ 20ನೇ ಮುಖ್ಯರಸ್ತೆಯ ಪೋರಂ ಮಾಲ್ನಿಂದ 80 ಅಡಿ ರಸ್ತೆಯ ಒಳಾಂಗಣ ಕ್ರೀಡಾಂಗಣದವರೆಗೆ.
*3. ಚಿಕ್ಕಪೇಟೆ ವಿಭಾಗ:* ಕನಕನಪಾಳ್ಯ ಜಯನಗರ 8ನೇ ಮುಖ್ಯರಸ್ತೆಯಿಂದ ಪಟ್ಟಾಲಮ್ಮ ಮುಖ್ಯರಸ್ತೆಯವರೆಗೆ
*4. ಜಯನಗರ ವಿಭಾಗ:*
4ನೇ ‘ಟಿ’ ಬ್ಲಾಕ್ ಜಯನಗರ 32ನೇ ‘ಇ’ ಅಡ್ಡರಸ್ತೆಯಿಂದ ಮಾರೇನಹಳ್ಳಿ ರಸ್ತೆ (ಮೆಟ್ರೋ ರಸ್ತೆ)
*5. ಪದ್ಮನಾಭನಗರ ವಿಭಾಗ:* ಕದಿರೇನಹಳ್ಳಿ ಕೆಳಸೇತುವೆಯಿಂದ ಕತ್ತರಿಗುಪ್ಪೆ ಸಿಗ್ನಲ್ವರೆಗೆ
*6. ವಿಜಯನಗರ ವಿಭಾಗ:* ಕಾರ್ಡ್ ರಸ್ತೆಯ ಅತ್ತಿಗುಪ್ಪೆ ಪೆಟ್ರೋಲ್ ಬಂಕ್ನಿಂದ ಸ್ಕೈಲೇನ್ ಆರ್ಪಾಟ್ಮೆಂಟ್ವರೆಗೆ
ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ಮಾಡಲಾಗಿದ್ದಂತಹ ಅಕ್ರಮ ಶೆಡ್ ಗಳು, ತಳ್ಳುವ ಗಾಡಿಗಳು, ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ಇರಿಸಿದ್ದ ಅಂಗಡಿ ಸಾಮಗ್ರಿಗಳು, ಶೀಟ್ ಗಳು ಹಾಗೂ ಇನ್ನಿತರ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ಮುಂದಿನ ದಿನಗಳಲ್ಲೂ ಮುಖ್ಯ ಆಯುಕ್ತರ ನಿರ್ದೇಶನದಂತೆ ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರ ಹಾಗೂ 2ನೇ ಮತ್ತು 4ನೇ ಶುಕ್ರವಾರದಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಿದ್ದು, ಒತ್ತುವರಿದಾರರು ಅತಿಕ್ರಮಿಸಿರುವ ಪಾದಚಾರಿ ಮಾರ್ಗವನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ಈ ಮೂಲಕ ತಿಳಿಯಪಡಿಸಿದೆ.
*ಸ್ವಚ್ಛತಾ ಅಭಿಯಾನ:*
ಪಾಲಿಕೆಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡು ನ್ಯಾಷನಲ್ ಕಾಲೇಜು ಫ್ಲೈ ಓವರ್, ಕದಿರೇನಹಳ್ಳಿ, ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೀದಿ, ಮಾರೇನಹಳ್ಳಿ ಮುಖ್ಯ ರಸ್ತೆ, ಬಿನ್ನಿ ಕಾರ್ಮಿಕರ ಬಡಾವಣೆ, ಯಾರಬ್ ನಗರ ಹಾಗೂ ಇನ್ನಿತರ ಪ್ರದೇಶಗಳಲ್ಲಿ ರಸ್ತೆ ಇಕ್ಕೆಲಗಳಲ್ಲಿನ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ಹೂಳು, ಕಸ ಹಾಗೂ ಘನತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.