ಬೆಂಗಳೂರು: ಎಲ್ಲಾ MNC ಸಂಸ್ಥೆಯಲ್ಲಿ ಕಾರ್ಮಿಕರು ಸಂಘವನ್ನು ಕಟ್ಟಿಕೊಂಡು ಕಾರ್ಮಿಕರ ಹಕ್ಕುಗಳ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ, ಅದರ ಜೊತೆಗೆ ಕಾರ್ಮಿಕರು ಎಲ್ಲರೂ ಒಂದಾಗಬೇಕು ಆಗ ಮಾತ್ರ ಸವಲತ್ತು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಂಡಿಯನ್ ಲಾ ಶಾಲೆಯ ಪ್ರೊ.ಬಾಬು ಮ್ಯಾತೀವ್ ತಿಳಿಸಿದರು.
ಬೆಂಗಳೂರು ಜಲಮಂಡಳಿ ಕಾರ್ಯನಿರತ ಹಾಗು ನಿವೃತ್ತ ನೌಕರರ ವೇದಿಕೆ ವತಿಯಿಂದ ಬೆಂಗಳೂರು ಜಲಮಂಡಳಿ ಒಂದು ಕೈಗಾರಿಕೆ 1978ರ ಸುಪ್ರೀಂನ ಐತೀರ್ಪು ಅಂದು ಇಂದು ಮುಂದು ಕುರಿತು ವಿಚಾರ ಸಂಕೀರ್ಣ ಉದ್ಗಾಟನೆ ಮಾಡಿ ಮಾತನಾಡಿದ ಅವರು, ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಕುರಿತು ಚರ್ಚೆ ಮಾಡಬೇಕು. ಕುಡಿಯುವ ನೀರು ಏಕೆ ಸಿಗುತ್ತಿಲ್ಲ ಎಂಬುದರ ಬಗ್ಗೆ ನಾವು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದರು. ಜನಪರವಾದ ನೀರಿನ ಸಮಸ್ಯೆಗಳು ಏನು, ಎಂಬುದರ ಬಗ್ಗೆ ಗಮನಹರಿಸಬೇಕು, ಬೆಂಗಳೂರಿನಲ್ಲಿ 400 ಕ್ಕಿಂತ ಹೆಚ್ಚು ಕೆರೆಗಳು ಇದ್ದವು ಅವೆಲ್ಲ ಈಗ ಮುಚ್ಚಿಹೋಗಿದ್ದಾವೆ. ಅವುಗಳನ್ನು ಮರು ಸ್ತಾಪಿಸಬೇಕಾದರೆ ಜಲಮಂಡಳಿಯವರು ಹೇಗೆಲ್ಲ ಕಾರ್ಯಪ್ರೌವೃತ್ತರಾಗಬೇಕು ಎಂದು ತಿಳಿಯಬೇಕು ಎಂದರು.
ಕಾರ್ಮಿಕ ಸಂಘಟನೆಯಲ್ಲಿ ಉತ್ತಮ ಲೀಡರ್ ಶಿಪ್ ಬೇಕಾಗಿದೆ. ನೀರಿನ ವಿಚಾರವಾಗಿ ಎಲ್ಲರು ಮುಂದೆ ಬಂದು ಹೋರಾಡಬೇಕು. ನಿಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ಕಾರ್ಮಿಕರೆಲ್ಲರೂ ಒಂದಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಕಾರ್ಮಿಕರು ಎಚ್ಚುಕೊಳ್ಳದಿದ್ದರೆ ಮುಂದೆ ಅಂಬಾನಿ,ಅದಾನಿಯಂತಹವರ ಸಂಸ್ಥೆಗಳು ವಶವಾಗಿ ಖಾಸಗಿ ಪಾಲಾಗುತ್ತದೆ. ಹೀಗಾಗಿ ಕಾರ್ಮಿಕರು ಎಚ್ಚತ್ತುಕೊಳ್ಳಬೇಕಾಗಿದೆ ಎಂದರು.
ಕಾರ್ಮಿಕರ ಪರವಾಗಿ ಹೋರಾಟ ಗಾರ್ತಿ ಮೈತ್ರೆಯಿ ಕೃಷ್ಣ ಮಾತನಾಡಿ, ಕಾರ್ಮಿಕರ ಹೋರಾಟ ಯಾವ ಕೋರ್ಟ್ ನಲ್ಲಿಯೂ ಪಡೆಯಲು ಸಾದ್ಯವಿಲ್ಲ, ಅದರಲ್ಲಿ ಸಾಕಸ್ಟು ಕಲಿಯುವ ವಿಚಾರ ಇರುತ್ತದೆ. Bwssb ಯಲ್ಲಿ ಅಂದು ಇಂದು ಕಾರ್ಮಿಕರು ಹೇಗೆಲ್ಲ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ ಎಂಬುದು ಬಹಳ ಮುಖ್ಯ. 1978 ರಲ್ಲಿ ಅಂದು 200 ರೂಪಾಯಿ ಕಾರ್ಮಿಕರಿಗೆ ಸಿಕ್ಕಿರುವ ಬೋನಸ್ ಅಂದಿಗೆ ದೊಡ್ಡದು, ನಂತರದಲ್ಲಿ ಸಾಕಸ್ಟು ಹಕ್ಕುಗಳ ಬದಲಾಗಿದೆ.
ಬೆಂಗಳೂರು ಜಲಮಂಡಳಿಯ ಹೊಸ ಪೀಳಿಗೆ ನೌಕರರಿಗೆ ಮಂಡಳಿಗೆ ಹಾಗೂ ನೌಕರರ ಸಂಘದ ಇತಿಹಾಸದ ಬಗ್ಗೆ ತಿಳಿಯಲು ಇದೊಂದು ಅವಶ್ಯಕವಾಗಿದೆ, ಸಂಘಟನೆ ಮಾಡುವುದು ಕಾರ್ಮಿಕರ ಹಕ್ಕು, ಅದು ಸಂವಿಧಾನದಲ್ಲಿ ಇದೆ. ಎರಡು ಸಂಘಗಳು ಸೇರಿಕೊಂಡು ಜೊತೆಯಾಗಿ ಪಡೆದುಕೊಳ್ಳಬೇಕು. ಜಲಮಂಡಳಿಯನ್ನು ಒಂದು ಕೈಗಾರಿಕೆಯಾಗಿ ನೋಡಬೇಕು. ಅದಕ್ಕೆ ಅಂದು ರಾಜಪ್ಪ ಕೋರ್ಟ್ ನಲ್ಲಿ ಕೇಸ್ ಗೆದ್ದು ಪ್ರಕರಣವೆ ಸಾಕ್ಷಿಯಾಗಿದೆ. ಕಾನೂನು ಬದ್ದವಾಗಿ ಕಾರ್ಮಿಕರು ಹಕ್ಕುಗಳನ್ನು ಕೇಳಬಹುದು. ಆದರೆ ಕಾನೂನು ಬಾಹಿರವಾಗಿ ಧರಣಿ ಮಾಡಿದರೆ ಅದು ಒಂದು ವೇಳೆ ಕಾನೂನಿನ ಅಡಿಯಲ್ಲಿ ಬಂದರೂ ಪ್ರಕರಣ ದಾಖಲು ಮಾಡಬಹುದು ಜೊತೆಗೆ 50 ಸಾವಿರ ತನಕ ದಂಡ ಹಾಕಬಹುದು. ಖಾಸಗಿಕರಣದಿಂದ ಸಂಘಕ್ಕೆ ಜನರಿಗೆ ತೊಂದರೆ ಇರುತ್ತದೆ.
ಗುತ್ತಿಗೆ ಕಾರ್ಮಿಕರ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ
ಗುತ್ತಿಗೆ ಪದ್ದತಿಯಿಂದ ಕಾರ್ಮಿಕರ ಮೇಲೆ ನಿರಂತರವಾಗಿ ಶೋಷಣೆಯಾಗುತ್ತಿದೆ. ಏಕೆ ಇಲಾಖೆಗಳಲ್ಲಿ ಕೇವಲ ಗುತ್ತಿಗೆದಾರರು ಮಾತ್ರ ಹೆಚ್ಚು ಕಾರಣರಾಗುತ್ತಿದ್ದಾರೆ. ಜಲಮಂಡಳಿಯಲ್ಲಿ ಏಕೆ ನೇಮಕಾತಿ ಮಾಡಲು ಸರ್ಕಾರ ಮುಂದಾಗುತ್ತಿಲ್ಲ ಎಂಬುದನ್ನು ನಾವೆಲ್ಲ ಸರ್ಕಾರಕ್ಕೆ ಪ್ರಶ್ನೆ ಮಾಡಬೇಕಾಗಿದೆ. ಒಂದು ಕಡೆ ವಿಜ್ನಾನ ಎಸ್ಟು ಮುಂದೆ ವರೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ, ಆದರೆ ಕಾರ್ಮಿಕರು ಇಂದಿಗೂ ಮ್ಯಾನ್ಯುಯಲ್ ನಲ್ಲಿ ಸ್ವಚ್ಚ ಮಾಡುವ ಪರಿಸ್ಥಿತಿ ಇರುವುದು ದುರಂತದ ಸಂಗತಿಯಾಗಿದೆ. ಕಾರ್ಮಿಕರೆಲ್ಲರೂ ಒಟ್ಟಾಗಿದ್ದರೆ ಅದರ ಶಕ್ತಿನೇ ಬೇರೆ ಎಂದು ಕಾರ್ಮಿಕರಿಗೆ ಕಿವಿ ಮಾತು ಹೇಳಿದರು.
ಬೆಂಗಳೂರು ಜಲಮಂಡಳಿ ಕಾರ್ಯನಿರತ ಹಾಗು ನಿವೃತ್ತ ನೌಕರರ ವೇದಿಕೆ ಅಧ್ಯಕ್ಷ ರಾಮಣ್ಣ ಮಾತನಾಡಿ, 2020ರಲ್ಲಿ bwssb ಯನ್ನು ಕೈಗಾರಿಕೆಯನ್ನಾಗಿ ಮಾಡಬೇಕು ಎಂಬುದು ಇತ್ತು, ಅದು ಆಗಲಿಲ್ಲ, ಸರ್ಕಾರಕ್ಕೆ,ಸಂಬಂದಪಟ್ಟ ಇಲಾಖೆಗೆ ಕಾರ್ಮಿಕರು ನಮಗೆ ಇರುವ ಹಕ್ಕುಗಳನ್ನು ಪಡೆದುಕೊಳ್ಳುವ ಬಗ್ಗೆ ಹೋರಾಟ ಮುಖ್ಯವಾಗುತ್ತದೆ. 1976 ಸಂಘ ಒ್ರಾರಂಭ ಮಾಡಿದಾಗಿನಿಂದ ರಾಜಪ್ಪ ಅವರು ಕಾರ್ಮಿಕರ ಪರವಾಗಿ ಹೋರಾಡಿ ಅನೇಕ ಕೇಸುಗಳನ್ನು ಹಾಕಿಸಿಕೊಂಡು 10 ವರ್ಷಗಳ ಕಾಲ ಕೋರ್ಟ್ ಗೆ ಅಲೆದಾಡಿದ್ದಾರೆ. ಅದನ್ನು ಇಂದಿನ ಕಾರ್ಮಿಕರು ಆರ್ಥ ಮಾಡಿಕೊಂಡು ಸಂಘ ಬೆಳೆಸಿಕೊಂಡು ಹೋಗಬೇಕು, ಸಂಘದಲ್ಲಿ ಕೆಲವರು ಸಂಘವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ, ಅದಕ್ಕೆ ಯಾರು ತಲೆಕೆಡಿಸಿಕೊಳ್ಳಬಾರದು, ಕಾರ್ಮಿಕರು ಹಕ್ಕುಗಳನ್ನು ಒಡೆದುಕೊಳುವಲ್ಲಿ ಯಾರು ಹಿಂದೆ ಬೀಳಬಾರದೆಂದು ಅಭಯ ಹಾಸ್ತ ನೀಡಿದರು.
ವಿಚಾರ ಸಂಕಿರಣದಲ್ಲಿ ಕಾರ್ಯಕ್ರಮದಲ್ಲಿ ರಾಜಪ್ಪ,ಸದಾಶಿವಾ, ಬಾಬು ಮ್ಯಾತೀವ್, ಮೈತ್ರಿ ಕೃಷ್ಣನ್, ರುದ್ರೇ ಗೌಡ, ಜಲಮಂಡಳಿ ರಾಮಚಂದ್ರ, ರಾಮಣ್ಣ,ಗಂಗಾದರ್, ಸೆರಿದಂತೆ ನೂರಾರು ಜನ ನಿವೃತ್ತ ನೌಕರರು, ಗುತ್ತಿಗೆ ನೌಕರರು, ಹಾಲಿ ನೌಕರರು ಉಪಸ್ಥಿತರಿದ್ದರು.