ಬೆಂಗಳೂರು: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ನಮ್ಮ ಸಂಘಟನೆ ಸದೃಢವಾಗಬೇಕು ಅದಕ್ಕೆ ಪದಾಧಿಕಾರಿಗಳು ಹಾಗೂ ಅನುದಾನಿತ ಶಾಲಾ ಶಿಕ್ಷಕರು ಎಲ್ಲರೂ ಸಹ ಒಂದು ಕಡೆ ಸೇರಿಕೊಂಡು ಸಂಘವನ್ನು ಬಲಿಷ್ಠಗೊಳಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಚಿಕ್ಕಸ್ವಾಮಿ ಎಸ್ ಕೆ ಅವರು ತಿಳಿಸಿದರು.
ಬೆಂಗಳೂರಿನ ಜಯನಗರದ ವಿಜಯ ಪದೇಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದವರು, ಈ ಸಂದರ್ಭದಲ್ಲಿ ನನಗೆ ದಿವಂಗತ ಅಬ್ದುಲ್ ಕಲಾಂ ಅವರು ನೆನಪಿಗೆ ಬರುತ್ತದೆ ಇಲ್ಲಿಯೂ ತಪ್ಪು ಮಾಡದೆ ಶ್ರದ್ಧಾ ಭಕ್ತಿಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋದರೆ ಯಾರಿಗೂ ಅಂಜದೆ ಹಳುಕ ಬೇಕಾಗಿಲ್ಲ ಹಾಗೂ ಹೆದರಬೇಕಾಗಿಲ್ಲ ಆದರೆ ತಪ್ಪು ಮಾಡಿದರೆ ಮತ್ತೊಬ್ಬರ ಕೈಕಾಲು ಹಿಡಿಯುವ ಪರಿಸ್ಥಿತಿ ಉಂಟಾಗುತ್ತದೆ ನಮ್ಮ ಸಂಘಟನೆಯಲ್ಲಿಯೂ ಸಹ ಅದೇ ಪರಿಸ್ಥಿತಿ ಆಗಿದೆ ಎಂದು ಅಸಮಾಧಾನವನ್ನು ಸಹ ವ್ಯಕ್ತಪಡಿಸಿದರು.
ಬಸವಣ್ಣ, ವಿವೇಕಾನಂದರಂತಹ ಮಹನೀಯರು ನಾವು ಎಂದೆಂದಿಗೂ ನೆನೆಸಿಕೊಳ್ಳಬೇಕಾಗಿದೆ, ಸಂಘಟನೆಗಳು ಇರುವುದು ಸಂಘದಲ್ಲಿನ ಸಮಸ್ಯೆಗಳು ದೇವೋದ್ದೇಶಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದರೆ ಸಂಘಟನೆಯಲ್ಲಿಯೇ ಹಿಂಜರಿಕೆಗಳು ಉಂಟಾದರೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಬಹಳ ಕಷ್ಟವಾಗುತ್ತದೆ ಎಂದರು.
ಸಂಘದ ಗೌರವಾಧ್ಯಕ್ಷರಾದ ಉಮೇಶ್ ಬಿಎಸ್ ಮಾತನಾಡಿ, ಅನುದಾನಿತ ಶಿಕ್ಷಕರೆಲ್ಲರೂ ಒಂದಾಗಬೇಕು ಆಗ ನಮ್ಮ ಹಕ್ಕು ಸಮಸ್ಯೆಗಳನ್ನು ಸುಲಲಿತವಾಗಿ ಪಡೆಯಬಹುದಾಗಿದೆ ಕಾಯಕವನ್ನು ಶ್ರದ್ಧೆಯಿಂದ ಮಾಡಬೇಕು ಆಗ ನಮಗೆ ಪ್ರತಿಫಲ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದರು. ಈ ಒಂದು ಕಾರ್ಯಕ್ರಮದಲ್ಲಿ 33 ಕಾಲೇಜಿನ ಪ್ರಾಂಶುಪಾಲರು ಬಂದಿದ್ದಾರೆ ಸಂಘದ ಉದ್ದೇಶವೇ ಬೇರೆ ಇರುತ್ತಿತ್ತು ಆದರೆ ಅವರೆಲ್ಲರೂ ಒಂದು ಕಡೆ ಬಾರದಿರುವುದು ಸಂಘಟನೆಯ ಪದಾಧಿಕಾರಿಗಳಿಗೆ ನೋವು ಉಂಟಾಗುತ್ತದೆ ಎಂದರು.
ಸಂಘದ ಉಪಾಧ್ಯಕ್ಷರಾದ ಡಾ. ಮಂಜುಳಾ ಜಿ ಅವರು ಮಾತನಾಡಿ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಈ ಸಂದರ್ಭದಲ್ಲಿ ನೆನಪಾಗುತ್ತಾರೆ ಅವರ ಉದ್ದೇಶಗಳಲ್ಲಿ ಒಂದಾಗಿರುವ ಶಿಕ್ಷಣ ಸಂಘಟನೆ ಹೋರಾಟ ಇವುಗಳ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬಹುದು ಎಂದರು. ಹೀಗಾಗಿ ಅನುದಾನಿತ ಶಾಲಾ ಶಿಕ್ಷಕರು ಎಲ್ಲರೂ ಸಹ ಒಂದಾಗಿ ಇಲ್ಲದಿದ್ದರೆ ಸಂಘದಲ್ಲಿ ಕೆಲಸ ಮಾಡುವವರಿಗೆ ಸಹಕಾರವನ್ನು ನೀಡಿರಿ ಎಂದು ಸಲಹೆಯನ್ನು ಸಹ ನೀಡಿದರು. ನಮ್ಮ ಸಂಘಟನೆಯನ್ನು ನೋಡಿ ಅಧಿಕಾರಿ ವರ್ಗದವರು ಸಹಾಯ ಮಾಡಲು ಮುಂದೆ ಬರುತ್ತಾರೆ ಇಲ್ಲದಿದ್ದರೆ ಯಾವುದೇ ಅನುಕೂಲಗಳು ಸಿಗುವುದಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ನ ನಾಯಕಿ ಹಾಗೂ ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷ ಸೌಮ್ಯ ರೆಡ್ಡಿ ಅವರು ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರ ಸಂಘದ ವಿಚಾರ ಕಾರ್ಯಗಳ ಬಗ್ಗೆ ವೇದಿಕೆಯಲ್ಲಿಯೇ ರಾಮೋಜಿ ಗೌಡ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಿ ಕೊಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸೌಮ್ಯ ರೆಡ್ಡಿ ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜು ನೌಕರರ ಸಂಘದ ಗೌರವಾಧ್ಯಕ್ಷರಾದ ಡಾ. ಎನ್ ಹರೀಶ್, ಡಾಕ್ಟರ್ ಕೃಷ್ಣಮೂರ್ತಿ ಆರ್, ಉಮೇಶ್ ಬಿಎಸ್ ಉಪಾಧ್ಯಕ್ಷರಾದ ಡಾ. ರಾಜಶ್ರೀ, ಮಂಜುಳಾ ಜಿ ಪ್ರಧಾನ ಕಾರ್ಯದರ್ಶಿ ಮಹದೇವ ಎಚ್ ಡಿ ಖಜಾಂಚಿ ಗೋವಿಂದಪ್ಪ ಕಾರ್ಯಾಧ್ಯಕ್ಷರಾದ ರಂಗಸ್ವಾಮಿ ಪ್ರಧಾನ ಸಂಗಮ ಕಾರ್ಯದರ್ಶಿ ನಾರಾಯಣಪ್ಪ ಸಂಘಟನಾ ಕಾರ್ಯದರ್ಶಿಗಳಾದ ಕಾಂತರಾಜ ಕೆ ರಂಗನಾಥ ಎ ಈರಮ್ಮ ರೆಡ್ಡಪ್ಪ ಪಿಎಚ್ ಸಂಘದ ಸದಸ್ಯರಾದ ಡಾಕ್ಟರ್ ಜಯಣ್ಣ ಆರ್ ಪಿ ಸೌಭಾಗ್ಯ ಮಲ್ಲಿಕಾರ್ಜುನ ಸೋಮನಾಥ ಶ್ರೀನಿವಾಸ ರೆಡ್ಡಿ ಎಂ ಟಿ, ಸಂಘದ ಉಪಾಧ್ಯಕ್ಷರುಗಳು ಜಂಟಿ ಕಾರ್ಯದರ್ಶಿಗಳು ಸಹ ಕಾರ್ಯದರ್ಶಿಗಳು ಸಂಘಟನಾ ಕಾರ್ಯದರ್ಶಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಸಲಹಾ ಸಮಿತಿ ಸದಸ್ಯರು ಇದೇ ವೇಳೆ ಉಪಸ್ತರಿದ್ದರು.