ಬೆಂಗಳೂರು : ಎಸ್ ಸಿಎಸ್ಪಿ, ಟಿ ಎಸ್ ಪಿ ಕಾಯಿದೆ 2013 ಅನ್ವಯ ಪರಿಶಿಷ್ಟ ಪಂಗಡಗಳ ದಲಿತರ ಶ್ರೇಯೋಭಿವೃದ್ಧಿಗೆ ಹಾಗೂ ಆರ್ಥಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಇಟ್ಟಿದ್ದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಗಳೂರು ವಿಭಾಗ್ಯ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಆಗ್ರಹಿಸಿದರು.
ಈ ಸಂಬಂಧ ಬೆಂಗಳೂರಿನ ಪ್ರಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವಕಾಶ ವಂಚಿತ ಸಮುದಾಯಗಳು ಸಮಾಜದ ಮುಖ್ಯ ವಾಹಿನಿಗೆ ಬಂದು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಅವಕಾಶಗಳನ್ನು ಶಾಸನಬದ್ಧವಾಗಿ ಒಂದು ಸಲುವಾಗಿ ರಾಜ್ಯ ಸರ್ಕಾರ 2013ನೇ ಸಾಲಿನಲ್ಲಿ ಎಸ್ಸಿ ಎಸ್ಟಿ ವಿಶೇಷ ಘಟಕ ಯೋಜನೆ ಕಾಯ್ದೆಯನ್ನು ಜಾರಿಗೆ ತಂದು ರಾಜ್ಯ ಸರ್ಕಾರ ಪ್ರತಿವರ್ಷದ ಬಜೆಟ್ ನಲ್ಲಿ ಎಸ್ ಸಿ ಎಸ್ ಟಿ ಜನಸಂಖ್ಯೆಗೆ ಅನುಗುಣವಾಗಿ 24ರಷ್ಟು ಅನುದಾನವನ್ನು ಮೀಸಲಿಟ್ಟು ಆ ಹಣವನ್ನು ಎಸ್ ಸಿ ಎಸ್ ಟಿ ವರ್ಗಗಳ ಅಭಿವೃದ್ಧಿಗೆ ಬಳಸಬೇಕೆಂದು ಕಾಯ್ದೆ ರೂಪಿಸಲಾಯಿತು.
ಈ ಕಾಯಿದೆ 2014 ರಿಂದ ಅನುಷ್ಠಾನವಾಗಿ ಇದುವರೆಗೂ 4 ಲಕ್ಷ ಕೋಟಿಗಳಷ್ಟು ಮೀಸಲಾಹಣ ನಿಗದಿಯಾಗಿದೆ ಈ ಮೊತ್ತ ಸಂಪೂರ್ಣವಾಗಿ ದಲಿತರ ಅಭಿವೃದ್ಧಿಗೆ ವಿನಾಯಿಸಬೇಕು ಕಾಯ್ದೆಯಲ್ಲಿ ಕಲಂ 7ಸಿ ಮತ್ತು 7 ಡಿ ಅಳವಡಿಸಿ ಇದರ ಅನುಸಾರ ದಲಿತರ ಹಣ ಅನ್ಯ ಯೋಜನೆಗಳಿಗೆ ಬಳಸಬಾರದು ಎಂದು ಕಾನೂನಿನಲ್ಲಿ ಉಲ್ಲೇಖವಾಗಿದೆ ಆದರೆ ಎಲ್ಲಾ ಸರ್ಕಾರಗಳು ಸಹ ಅಂದರೆ 2014 ರಿಂದ ರಚನೆ ಎಲ್ಲಾ ಸರ್ಕಾರಗಳು ದಲಿತರನ್ನು ಮುಂಚಿತ ಬರುತ್ತಿರುವುದು ಸಂಗತಿ ಎಂದರು.
ಆಗಸ್ಟ್ 21ಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಡಿಎಸ್ಎಸ್ ಧರಣಿ
ಡಿಎಸ್ಎಸ್ ಬೆಂಗಳೂರು ವಿಭಾಗೀಯ ಸಂಚಾಲಕರಾದ ಬೇಗೂರು ಮುನಿರಾಜು ಮಾತನಾಡಿ, ದಲಿತರಿಗೆ ಮೀಸಲಾಗಿ ಇಟ್ಟಿದ್ದ ಎಸ್ಸಿ ಎಸ್ ಪಿ ಟಿ ಎಸ್ ಪಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಸೇರಿದಂತೆ 2014 ರಿಂದ ಈಚೆಗೆ ಬಂದಿರುವ ಎಲ್ಲಾ ಸರ್ಕಾರಗಳು ಸಹ ಅನುದಾನವನ್ನು ಬಳಸಿಕೊಂಡು ದಲಿತರನ್ನು ಸೂಚನೆಗೆ ಒಳಪಡಿಸಿದ್ದಾರೆ ಕಾಲಂನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದ್ದರೂ ಸಹ ಅವೆಲ್ಲವನ್ನು ಗಾಳಿಗೆ ತೂರಿ ನಿಯಮ ಬಹಿರವಾಗಿ ಯೋಜನೆಯ ಅನುದಾನವನ್ನು ಬೇರೆ ಬೇರೆ ಯೋಜನೆಗಳಿಗೆ ಬಳಸಿಕೊಂಡಿರುವುದು ದುರಂತದ ಸಂಗತಿಯಾಗಿದೆ.
ಸೆವೆಂಟಿ ಸೆವೆಂಟಿ ಕಾಲಂ ಗಳನ್ನು ವೃದ್ಧಿಪಡಿಸುವಂತೆ ಅನೇಕ ದಲಿತ ಸಮುದಾಯಗಳು ಹಾಗೂ ಸಂಘಟನೆಗಳು ಸಾಕಷ್ಟು ಹೋರಾಟ ಮಾಡಿದವು ಇವೆಲ್ಲವುಗಳ ಫಲದಿಂದ ಕೇವಲ 70 ಮಾತ್ರ ರದ್ದು ಮಾಡಿ ಸೆವೆನ್ ಸಿ ಯನ್ನು ಉಳಿಸಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತದೆ. ಕಾಲಂನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿರುವಂತೆ ಎಸ್ ಸಿ ಎಸ್ ಪಿ ಟಿ ಎಸ್ ಪಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿದ್ದಲ್ಲೇ ಆದರೆ ಸಂಬಂಧ ಪಟ್ಟವರ ವಿರುದ್ಧ ಕ್ರಿಮಿನಲ್ ಮುಖದೊಮ್ಮೆ ಹಾಕುವ ಅವಕಾಶ ಇದೆ, ಇಷ್ಟೆಲ್ಲಾ ಇದ್ದರೂ ಸಹ ಸರ್ಕಾರ ಅಂಜದಗ ಅಳುತ್ತದೆ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದು ದಲಿತರನ್ನು ಶೋಷಿಸುವ ಸಲುವಾಗಿಯೇ ಎಂದು ತಿಳಿಯುತ್ತದೆ.
ದಲಿತರ ಪರವಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಹೇಳಿಕೊಳ್ಳುತ್ತಿದ್ದಾರೆ ಆದರೆ ಈ ವಿಚಾರಗಳನ್ನು ನೋಡಿದಾಗ ದಲಿತ ವಿರೋಧಿ ರಾಮಾಯ ಎಂದು ನಾವೆಲ್ಲರೂ ಬಾಸ ಮಾಡಿಕೊಳ್ಳಬೇಕಾಗುತ್ತದೆ. ಸರ್ಕಾರ ಎಚಿಕೊಂಡು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವ ಅನುದಾನವನ್ನು ಶೀಘ್ರ ಕೈಬಿಟ್ಟು ಬಳಸಿಕೊಂಡಿರುವ ಹಣವನ್ನು ಹಿಂದಿರುಗಿಸಿ ಬೇಕಾಗಿದೆ ಇಲ್ಲದಿದ್ದರೆ ಆಗಸ್ಟ್ 21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಧ್ಯೇಯ ವಾಕ್ಯದೊಂದಿಗೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ಸಹ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಬೆಂಗಳೂರು ನಗರ ಜಿಲ್ಲಾ ಸಂಚಾಲಕರಾದ ಸೂರ್ಯವಂಶ ಸುಬ್ರಮಣಿ ಚ್ವಿ ವೆಂಕಟೇಶ್ ಕುಮಾರ್ ಹೆಗ್ಗನಹಳ್ಳಿ ಮೂರ್ತಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.