ಬೆಂಗಳೂರು: ದಂತ ಚಿಕಿತ್ಸಾ ವಿಭಾಗದಲ್ಲಿ ಪ್ರಸ್ತುತ ಡಿಜಿಟಲಿಕರಣ ಹೇಗೆ ಆಗಿದೆ ಹಾಗೂ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ತಿಳಿಯುವ ಸಲುವಾಗಿ ಡಿಜಿ ಡೆಂಟ್ 2025ರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮೊದಲ ಸಮ್ಮೇಳನವನ್ನು ಬೆಂಗಳೂರಿನ ನಿಮಾನ್ಸ್ ಕನ್ವೆನ್ಷನ್ ಹಾಲ್ ನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಅಸೋಸಿಯೇಷನ್ ಆಫ್ ಡಿಜಿಟಲ್ ಡೆಂಟಲ್ ಇನ್ ಏಷ್ಯಾ ಸಂಸ್ಥೆಯು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನ ಕಾರ್ಯಕ್ರಮವನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ಅವರು ಉದ್ಘಾಟನೆ ಮಾಡಿ ಮಾತನಾಡಿ, ದಂತ ಚಿಕಿತ್ಸಾ ವಿಧಾನದ ತಿಳುವಳಿಕೆಯ ಬಗ್ಗೆ ಹಾಗೂ ಆಧುನಿಕ ಉಪಕರಣಗಳು ಹೇಗೆಲ್ಲಾ ಆವಿಷ್ಕಾರಗಳನ್ನು ಒಳಗೊಂಡಿವೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ವೈದ್ಯರು ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬುದರ ಬಗ್ಗೆ ಈ ಒಂದು ಸಮ್ಮೇಳನದಲ್ಲಿ ತಿಳಿದುಕೊಳ್ಳಬಹುದಾಗಿದೆ.
ವೈಜ್ಞಾನಿಕವಾಗಿ ಹಾಗೂ ತಂತ್ರಜ್ಞಾನವನ್ನು ಒಳಗೊಂಡ ಚಿಕಿತ್ಸಾ ವಿಧಾನಗಳು ಪ್ರಸ್ತುತ ಕಾಲಘಟ್ಟಕ್ಕೆ ಉಪಯೋಗಕಾರಿಯಾಗಿವೆ.
ಯುವ ಪೀಳಿಗೆಯ ದಂತ ವೈದ್ಯರಿಗೆ ಇದೊಂದು ಪ್ರೋತ್ಸಾಹದಾಯಕ ಹಾಗೂ ಕಲಿಕೆಗೆ ಉತ್ತಮ ಅವಕಾಶವಾಗಿದೆ. ಆಧುನಿಕ ಚಿಕಿತ್ಸಾ ವಿಧಾನಗಳನ್ನು ತಿಳಿದುಕೊಳ್ಳುವ ಮಹತ್ವದ ಸಮ್ಮೇಳನವಾಗಿದೆ. ಇದರಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕೆಲ ವೈದ್ಯರು ಆಧುನಿಕ ದಂತ ಚಿಕಿತ್ಸೆಯ ಬಗ್ಗೆ ಮಾತನಾಡುತ್ತಿದ್ದಾರೆ ಅವೆಲ್ಲವನ್ನು ತಿಳಿದುಕೊಳ್ಳುವ ಒಂದು ಸುಧಾವಕಾಶ ವಾಗಿದೆ ಎಂದು ತಿಳಿಸಿದರು.
ಅಸೋಸಿಯೇಷನ್ ಆಫ್ ಡಿಜಿಟಲ್ ಡೆಂಟಲ್ ಇನ್ ಏಷ್ಯಾ ಸಂಸ್ಥೆಯ ಅಧ್ಯಕ್ಷ ಡಾ. ರವೀಂದ್ರ ಸಾವಡಿ ಮಾತನಾಡಿ, ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯುವ ಎರಡು ದಿನದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ದಂತ ಚಿಕಿತ್ಸಾ ಸಮ್ಮೇಳನದಲ್ಲಿ ಅನೇಕ ನುರಿತ ಹಾಗೂ ಯುವ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದು. ಆಧುನಿಕ ಚಿಕಿತ್ಸಾ ವಿಧಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಜನ ತಜ್ಞರು ಹಾಗೂ ರಾಷ್ಟ್ರಮಟ್ಟದಲ್ಲಿ 12 ಜನ ತಜ್ಞರು ದಂತ ಚಿಕಿತ್ಸೆಯ ಹಾಗೂ ವಿಧಾನಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಂಡನೆ ಮಾಡುತ್ತಿದ್ದಾರೆ.
ಸಮ್ಮೇಳನದಲ್ಲಿ ಡಾ. ಶಿಲ್ಪ ಶೆಟ್ಟಿ, ಡಾ. ಸತೀಶ್ ಕುಮಾರ್ ಕೆಎಸ್ ,ಡಾ. ಶೋಭಿತ್ ಶೆಟ್ಟಿ, ಡಾ. ಪ್ರಮೋದ್ ಕೆಎಂ, ಡಾ. ಕೃಷ್ಣ ಪನಿಕರ್, ಡಾ. ಸಾಜನ್ ಸುಬ್ಬಯ್ಯ, ಡಾ. ಸೇಗಿನ್ ಚಂದ್ರನ್, ಡಾ. ವಿವೇಕ್ ಐತಾಳ್, ಡಾ. ವೇಣು ಮಾಧವ್, ಡಾ. ಅಕ್ಷಯ್ ಶೆಟ್ಟಿ, ಡಾ. ಚರಣ್ ಕುಮಾರ್ ಶೆಟ್ಟಿ, ಡಾ. ಸತ್ಯ ಬೋಧ್ ಗುಟ್ಟಾಳ್, ಸೇರಿದಂತೆ ಅನೇಕ ದಂತ ವೈದ್ಯರು ಹಾಗೂ ಸಂಘದ ಪದಾಧಿಕಾರಿಗಳು ಇದೆ ವೇಳೆ ಉಪಸ್ಥಿತರಿದ್ದರು.