ಬೆಂಗಳೂರು : ಮಾಜಿ ಪ್ರಧಾನಿ ಮಂತ್ರಿ ದಿವಂಗತ ರಾಜೀವ್ ಗಾಂಧಿಯವರ ಪುಣ್ಯತಿಥಿ ಅಂಗವಾಗಿ 34 ನೇ ರಾಜೀವ್ ಜ್ಯೋತಿ ಸಂದೇಶ ಯಾತ್ರೆಯ ಜ್ಯೋತಿಯನ್ನು ಸಂದೇಶ ಯಾತ್ರೆಯ ಅಧ್ಯಕ್ಷ ದೊರೈಯವರಿಗೆ ಹಸ್ತಾಂತರ ಮಾಡಲಾಯಿತು.
ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ರವರ ನಾಯಕತ್ವದಲ್ಲಿ ಸಾವಿರಾರು ಕಿಲೋಮೀಟರ್ ಪೆರಂಬದೂರಿ ನಿಂದ ಆಗಮಿಸಿದ ಜ್ಯೋತಿ ಸಂದೇಶ ಯಾತ್ರೆಯ ಜ್ಯೋತಿಯನ್ನು ಸಂದೇಶ ಯಾತ್ರೆ ಅಧ್ಯಕ್ಷರಾಧ ದೊರೈ ಅವರಿಗೆ ಅಸ್ಥಾಂತರಿಸಲಾಯಿತು.
ಬೆಂಬೆಂಗಳೂರಿನ ಹಾಡು ಬಿ ಎಂ ಪಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಆಡುಗೋಡಿ ಬಿ ಮೋಹನ್ ಅವರ ನಿವಾಸದ ಮುಂದೆ ಸಂದೇಶ ಯಾತ್ರೆ ಜ್ಯೋತಿಯನ್ನು ಬರಮಾಡಿಕೊಂಡರು, ನಂತರ ಸಂದೇಶ ಯಾತ್ರೆಯ ಅಧ್ಯಕ್ಷರಾದ ದೊರೆಯವರಿಗೆ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸಹ ಮಾಡಲಾಯಿತು.
ಇನ್ನೂ ರಾಜೀವ್ ಜ್ಯೋತಿ ಸಂದೇಶ ಯಾತ್ರೆಯನ್ನು ಆಡುಗೋಡಿಯ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಪಾಲಿಕೆಯ ಮಾಜಿ ಸದಸ್ಯ ಆಡುಗೋಡಿ ಬಿ ಮೋಹನ್ ಹಾಗೂ ಅವರ ಕುಟುಂಬದವರು, ಬಿಟಿಎಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ವಾರ್ಡ್ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದ್ದರು.