ಬೆಂಗಳೂರು: ರಾಜ್ಯದಲ್ಲಿ ಅಧಿಕ ಖಾಲಿ ಇತುವ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭ ಮಾಡಿಕೊಳ್ಳಬೇಕು, ವಯೋಮಿತಿ ಸಡಿಲಿಕೆ, ನೇಮಕಾತಿ ವೇಳಾಪಟ್ಟಿ ರೂಪಿಸುವುದು, ಅರ್ಜಿಶುಲ್ಕ ವಿನಾಯಿತಿ, ಶಿಕ್ಷಕರ ನೇಮಕಾತಿ, UGC ಮಾನದಂಡಗಳ ಕಟ್ಟುನಿಟ್ಟಾದ ಪಾಲನೆ ಮತ್ತು KPSC ಸಂಬಂಧಿತ ಸಮಸ್ಯೆಗಳ ಪರಿಹಾರಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದಿಂದ ನೂರಾರು ವಿದ್ಯಾರ್ಥಿಗಳು ವಿಭಿನ್ನ ಧರಣಿ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆ ಗೊಂಡು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ, ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್, ರಾಹುಲ್ ಗಾಂಧಿ, ಭಾವಚಿತ್ರ ವೇದಿಕೆ ಮೇಲೆ ಇಟ್ಟು, ರಕ್ತದಲ್ಲಿ ಪತ್ರ ಬರೆಯುವ ಮೂಲಕ ತಿಥಿಕಾರ್ಯ ಮಾಡಿ ಎಳ್ಳು ನೀರು ಬಿಟ್ಟು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇ ವೇಳೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತ ಕುಮಾರ್ ಅವರ ನೇತೃತ್ವದಲ್ಲಿ ಬೃಹತ್ ಧರಣಿ ನಡೆಸಿ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ 2,76,386 ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು. ಈ ಹುದ್ದೆಗಳ ಭರ್ತಿಯಲ್ಲಿ ಉಂಟಾದ ವಿಳಂಬದಿಂದ ಆಡಳಿತಯಂತ್ರದ ಕಾರ್ಯಕ್ಷಮತೆ ಕುಸಿಯುತ್ತಿದ್ದು, ಜನಸಾಮಾನ್ಯರ ದಿನ ನಿತ್ಯದ ಜೀವನ, ಮಕ್ಕಳ ಶಿಕ್ಷಣ, ಸಾರ್ವಜನಿಕ ಆರೋಗ್ಯ ಸೇವೆ, ಗ್ರಾಮೀಣ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಗಂಭೀರತೊಂದರೆ ಉಂಟಾಗಿದೆ ಎಂದರು.
70,727 ಶಿಕ್ಷಕರ ಹುದ್ದೆಗಳು ಖಾಲಿ!
ಇದಕ್ಕೆ ಪೂರಕವಾಗಿ, 70,727 ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಶಾಲಾ ಶಿಕ್ಷಣ ವ್ಯವಸ್ಥೆಯ ಗುಣ ಮಟ್ಟಕ್ಕೆ ಅಪಾಯ ಉಂಟಾಗಿದೆ. ಅನೇಕ ಇಲಾಖೆಗಳ ನೇಮಕಾತಿ ಪ್ರಕ್ರಿಯೆಗಳು ವರ್ಷಗಳಿಂದ ಬಾಕಿ ಉಳಿದಿದ್ದು, ಯಾವುದೇ ಸಮಯ ಪಟ್ಟಿ ಅಥವಾ ಕ್ಯಾಲೆಂಡರ್ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವುದು ಯುವ ಜನರ ಭವಿಷ್ಯವನ್ನು ಸಂಕಟಕ್ಕೆ ತಳ್ಳುವಂತ್ತಿದೆ.
AKSAನ ಪ್ರಮುಖ ಬೇಡಿಕೆಗಳು:
1.ಎಲ್ಲಾ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ತಕ್ಷಣದ ಭರ್ತಿ. ಪ್ರಸ್ತುತ ರಾಜ್ಯದಾದ್ಯಂತ 2,76,386 ಸರ್ಕಾರಿ ಹುದ್ದೆಗಳು ಖಾಲಿ ಇವೆ.
ಪ್ರತಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಯನ್ನು ತುರ್ತು ಆಧಾರದ ಮೇಲೆ ಪ್ರಾರಂಭಿಸಬೇಕು.
ನೇಮಕಾತಿ ವೇಳಾಪಟ್ಟಿ (Recruitment Calendar) ಅನ್ನು UPSC ಮಾದರಿಯಲ್ಲಿ ವರ್ಷಕ್ಕೊಮ್ಮೆ ಪ್ರಕಟಿಸಿ, ಅದರಲ್ಲಿ ಪ್ರತಿಯೊಂದು ಪರೀಕ್ಷೆಯ ದಿನಾಂಕ, ಅರ್ಜಿಆಹ್ವಾನ, ಪರೀಕ್ಷಾ ದಿನಾಂಕ, ಫಲಿತಾಂಶ ಘೋಷಣೆ ಮುಂತಾದಹಂತಗಳನ್ನು ನಿಗದಿಪಡಿಸಬೇಕು. ಮಧ್ಯದಲ್ಲಿ ನೇಮಕಾತಿ ಸ್ಥಗಿತಗೊಳಿಸುವ ಅಥವಾ ವರ್ಷಗಳ ಕಾಲ ಪ್ರಕ್ರಿಯೆಯನ್ನು ಬಾಕಿ ಇಡುವ ಕ್ರಮವನ್ನು ನಿಲ್ಲಿಸಬೇಕು ಎಂದರು.
2. ವಯೋಮಿತಿ ಸಡಿಲಿಕೆ ರಾಜ್ಯದ ಎಲ್ಲಾ ಇಲಾಖೆಗಳ ಸರ್ಕಾರಿ ನೇಮಕಾತಿಗಳ ಗರಿಷ್ಠ ವಯೋಮಿತಿಯನ್ನು 35 ವರ್ಷಗೊಳಿಸಬೇಕು.
ಮಹಿಳೆಯರು, ಎಸ್ಸಿ, ಎಸ್ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕಾನೂನಿನ ಪ್ರಕಾರ ಸಿಗುವ ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ಮುಂದುವರಿಸಬೇಕು. ರಾಜ್ಯದ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಾನ ಅವಕಾಶ ಪಡೆಯಲು ಇದು ಅಗತ್ಯ.
ಮಹಿಳೆಯರು, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಅರ್ಜಿಶುಲ್ಕ ಸಂಪೂರ್ಣ ವಿನಾಯಿತಿನೀಡಬೇಕು.
3. ಅರ್ಜಿ ಶುಲ್ಕ ವಿನಾಯಿತಿ – UPSC ಮಾದರಿ ಅನುಷ್ಠಾನUPSC ಅನುಸರಿಸುತ್ತಿರುವಂತೆ, OBC ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮಾತ್ರ ಅರ್ಜಿಶುಲ್ಕ ಪಾವತಿಸುವಂತಿರಬೇಕು. ಇದು ಆರ್ಥಿಕ ಹಿನ್ನಡೆಯಿಂದಾಗಿ ಅರ್ಜಿಸಲ್ಲಿಸಲು ಸಾಧ್ಯವಾಗದ ಪ್ರತಿಭಾವಂತರಿಗೆ ನ್ಯಾಯದೊರಕಿಸುತ್ತದೆ.
4. ಇದರಿಂದ ಶಾಲೆಗಳ ಶಿಕ್ಷಣ ಗುಣಮಟ್ಟ ಕುಸಿಯುತ್ತಿದ್ದು ಇದು ಮಕ್ಕಳ ಭವಿಷ್ಯಕ್ಕೆ ಮಾರಕ. ಈ ಹುದ್ದೆಗಳ ಭರ್ತಿಯನ್ನು ತಕ್ಷಣ ಪ್ರಾರಂಭಿಸಬೇಕು.
ಪ್ರಾಥಮಿಕ, ಪ್ರೌಢ, ಪದವಿ ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಕೊರತೆ ನಿವಾರಣೆಗಾಗಿ ತಾತ್ಕಾಲಿಕ ಮತ್ತು ಶಾಶ್ವತ ಹುದ್ದೆಗಳ ಭರ್ತಿಯನ್ನು ವೇಗಗೊಳಿಸಬೇಕು.
5. UGC ಮಾನದಂಡಗಳ ಕಟ್ಟು ನಿಟ್ಟಾದಪಾಲನೆ ವಿಶ್ವ ವಿದ್ಯಾಲಯ ಅನುದಾನ ಆಯೋಗ (UGC) ನಿಗದಿಪಡಿಸಿದ ಅರ್ಹತೆಗಳ ಪ್ರಕಾರವೇ ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿ ನಡೆಯಬೇಕು. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಬೋಧನೆಗಾಗಿ ಕಡ್ಡಾಯವಾಗಿ UGC ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನಷ್ಟೇ ನೇಮಿಸಬೇಕು.
ಯಾವುದೇ ಕಾರಣಕ್ಕೂ UGC ಮಾನ ದಂಡಗಳಿಂದ ವಿಚಲಿಸಬಾರದು, ಇಲ್ಲವಾದರೆ ರಾಜ್ಯದ ಉನ್ನತ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆಯಾಗುತ್ತದೆ.
6. KPSC ಸಂಬಂಧಿತ ಬಾಕಿ ಸಮಸ್ಯೆಗಳ ಪರಿಹಾರ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ
(KPSC) ಮೂಲಕ ನಡೆದಿರುವ ಹಾಗೂ ಬಾಕಿ ಉಳಿದಿರುವ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ತಕ್ಷಣ ಪೂರ್ಣಗೊಳಿಸಬೇಕು.
ವರ್ಷಗಳಿಂದ ಬಾಕಿ ಉಳಿದಿರುವ ನೇಮಕಾತಿಗಳನ್ನು ಒಂದು ತುರ್ತು ಅವಧಿ ನಿಗದಿ ಮಾಡಿ ಮುಗಿಸಬೇಕು.
ಈ ಮನವಿ ಪತ್ರದಲ್ಲಿ ಲಗತ್ತಿಸಿರುವ ಬಾಕಿ ಉಳಿದಿರುವ ನೇಮಕಾತಿ ಪ್ರಕರಣಗಳ ಪಟ್ಟಿಯಲ್ಲಿ ಉಲ್ಲೇಖಿಸಿದ ಎಲ್ಲಾ ವಿಚಾರಗಳನ್ನು ಪ್ರಾಮುಖ್ಯತೆಯಿಂದ ಪರಿಶೀಲಿಸಿ, ತಕ್ಷಣ ಕ್ರಮಕೈಗೊಳ್ಳಬೇಕು.
ಸೇವೆಗಳ ಸಮರ್ಪಕ ನಿರ್ವಹಣೆಗಾಗಿ ಮೇಲ್ಕಾಣಿಸಿದ ಎಲ್ಲ ಬೇಡಿಕೆಗಳನ್ನು ಸರ್ಕಾರವು ಈಡೇರಿಸಬೇಕು ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ, ಕೆಹೆಚ್ ಮುನಿಯಪ್ಪ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ, 15 ದಿನಗಳ ಕಾಲ ಗಡುವನ್ನು ನೀಡಲಾಗುದ್ದು ಅಸ್ಟರಲ್ಲಿ ನಮ್ಮ ಬೇಡಿಕೆ ಜಾರಿಗೊಳಿಸಲು ಮನವಿಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಹಾಗು ಕೃಷಿ ಸಚಿವ ಚಲುವರಾಯ ಸ್ವಾಮಿ ಭೇಟಿ ಕೊಟ್ಟು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಸರ್ಕಾರ ಶೀಘ್ರ ನಿಮ್ಮ ಸಮಸ್ಯೆ ಬಗ್ಗೆ ತಿಳಿಸಿ ಬಗೆಹರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ AKSA ಉಪಾಧ್ಯಕ್ಷ ಶ್ರೇಯಸ್,ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್, ಸಂಗಟನಾ ಕಾರ್ಯದರ್ಶಿ ಕಿರಂಗೋಡು ಪೂಜಾರ್, ಖಜಾಂಚಿ ಧನುಶ್,ಮಹಿಳಾ ಸಾಹಾಯಕ ಕಾರ್ಯದರ್ಶಿ ಅರುಣಾ ಸೇರಿದಂತೆ ನೂರಾರು ಅಭ್ಯರ್ಥಿಗಳು ಉಪಸ್ಥಿತರಿದ್ದರು