ಬೆಂಗಳೂರು : ಕರ್ನಾಟಕ ರಾಜ್ಯ ವಿವಿಧ ವರ್ಗಗಳ ಕೂಲಿ ಕಾರ್ಮಿಕರ ಚಾರಿಟೇಬಲ್ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಸೇವಾ ಟ್ರಸ್ಟ್ ನ ಸಂಸ್ಥಾಪಕ ಮುಖ್ಯಸ್ಥರಾದ ಬಿ ಎಲ್ ಪರಮೇಶ್ ಸಮಾಜಮುಖಿ ಕಾರ್ಯಕ್ರಮ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಬಡ ಕೂಲಿ ಕಾರ್ಮಿಕರ ಪರವಾಗಿ ಅವರ ಸಹಾಯಕ್ಕೆ ನಾವು ನಿಂತಿದ್ದು ಯಾರ ಅನುದಾನವಿಲ್ಲದೆ ಯಾರ ಪ್ರತಿಫಲ ಅಪೇಕ್ಷೆಗಳಿಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ಬಡ ಕೂಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ನಿತ್ಯ ಕಾಯಕವಾಗಿ ಶ್ರಮಿಸುತ್ತಿದ್ದೇವೆ ಎಂದರು.
ಸ್ವಾತಂತ್ರ್ಯ ದಿನಾಚರಣೆ, 2000 ಹಣ್ಣು ವಿತರಣೆ:
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ನಮ್ಮ ಸೇವಾ ಸಮಿತಿಯ ಪದಾಧಿಕಾರಿಗಳು ಸುಮಾರು 2000 ಕ್ಕಿಂತ ಹೆಚ್ಚು ಸೇಬು ಹಾಗೂ ಮೂಸಂಬಿ ಹಣ್ಣುಗಳನ್ನು ರೋಗಿಗಳಿಗೆ, ಪುರೋಹಿಗಳ ಸಂಬಂಧಿಕರಿಗೆ ಹಾಗೂ ಸಾರ್ವಜನಿಕರಿಗೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಗೆ ವಿತರಣೆ ವಿತರಣೆ ಮಾಡಿದರು.
ಸಹಾಯ ಹಸ್ತ ನೀಡಿದರೆ ಸಮಾಜ ಸೇವೆ ಮತ್ತಷ್ಟು ಹೆಚ್ಚಳ
ನಮ್ಮ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿಕೊಂಡು ಸರ್ಕಾರಗಳಾಗಲಿ ಸಂಘ ಸಂಸ್ಥೆಗಳಾಗಲಿ ಯಾವುದೇ ರೀತಿಯಿಂದಲೂ ಸಹ ಸಹಾಯ ಹಸ್ತ ನೀಡಿದರೆ ನಮ್ಮ ಸಮಾಜಮುಖಿ ಸೇವೆಯು ದುಪ್ಪಟ್ಟಾಗಲಿದೆ ಎಂದು ತಿಳಿಸಿದರು. ನಾನು ಒಬ್ಬ ಕೂಲಿ ಕಾರ್ಮಿಕನಾಗಿ ಕೂಲಿ ಕಾರ್ಮಿಕರ ಸಮಸ್ಯೆ ಬದುಕು ಭವಣೆ ನನಗೆ ಚೆನ್ನಾಗಿ ಅರಿವಿದೆ ಹೀಗಾಗಿ ಅವರ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಎನ್ನುವ ನಿಟ್ಟಿನಲ್ಲಿ ಅಳಿಲು ಸೇವೆ ಮಾಡಲು ಸುಮಾರು ಹದಿನೈದು ವರ್ಷಗಳಿಂದ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದೇನೆ.
ಇನ್ನು ಇದೇ ವೇಳೆ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಪರಮೇಶ್ವರ್ ಅವರ ಸಂಸ್ಥೆಯ ಪದಾಧಿಕಾರಿಗಳು ಮಾತನಾಡಿ, ಪರಮೇಶ್ ಅವರ ಬೆನ್ನಿಗೆ ಸಂಸ್ಥೆಯ ಪದಾಧಿಕಾರಿಗಳು ನಿಂತು ಅವರ ಹೆಗಲಿಗೆ ಹೆಗಲು ಕೊಟ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುವುದು ನಮಗೆ ಅತಿ ಸಂತೋಷದಾಯಕವಾಗಿದ್ದು ಇನ್ನು ಮುಂದೆ ಇನ್ನೂ ಹಲವು ರೀತಿಯಲ್ಲಿ ಸಮಾಜ ಸೇವೆ ಮಾಡುವ ಮೂಲಕ ಬಡಬಗ್ಗರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ.
ಕೂಲಿ ಕಾರ್ಮಿಕರ ಮಕ್ಕಳಿಗೂ ಸಾರ್ವಜನಿಕರಿಗೂ ಸಹಾಯ ಹಸ್ತ:
ಬರೀ ಕೂಲಿ ಕಾರ್ಮಿಕರಿಗೆ ಅಲ್ಲದೆ ಕೂಲಿ ಕಾರ್ಮಿಕರ ಮಕ್ಕಳಿಗೆ ಪುಸ್ತಕ ಪೆನ್ನು ಹಾಗೂ ಸಮವಸ್ತ್ರಗಳನ್ನು ಸಹ ನೀಡುತ್ತಾ ಬಂದಿದ್ದೇವೆ. ಹಲವು ಸಮಾಜಮುಖಿ ಕಾರ್ಯಗಳನ್ನು 15 ವರ್ಷಗಳಿಂದ ಎಲೆಮರೆಕಾಯಿಯಂತೆ ಮಾಡಿಕೊಂಡು ಬರುತ್ತಿದ್ದೇವೆ ಎಂದರು. ಇಲ್ಲಿಯ ತನಕ ನಮ್ಮನ್ನು ಯಾರೂ ಸಹ ಗುರುತಿಸುವ ಕಾರ್ಯವನ್ನು ಮಾಡಿಲ್ಲ. ಸರ್ಕಾರವು ಸಹ ಇದರ ಬಗ್ಗೆ ಎಚ್ಚೆತ್ತುಕೊಂಡು ನಮಗೆ ಸಹಾಯ ಸಹಕಾರ ನೀಡಿದರೆ ನಮ್ಮಂತಹ ಸಂಘಟನೆಗಳು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಮಾಜ ಸೇವೆ ಮಾಡಲು ಮುಂದಾಗುತ್ತವೆ ಎಂದು ತಿಳಿಸಿದರು.
ದೊಡ್ಡ ಸಮಾವೇಶ ಮಾಡುವ ಗುರಿ:
ಕೂಲಿ ಕಾರ್ಮಿಕರ ಎಲ್ಲರನ್ನು ಸಹ ಒಟ್ಟು ಮಾಡಿಕೊಂಡು ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ದೊಡ್ಡ ಮಟ್ಟದಲ್ಲಿ ಸಮಾವೇಶವನ್ನು ಮಾಡುವುದಾಗಿ ಇದೆ ವೇಳೆ ಪರಮೇಶ್ ಅವರು ತಿಳಿಸಿದರು.
ಈ ವೇಳೆ ಪರಮೇಶ್, ಮುಖ್ಯಸ್ಥರು, ಪರಮೇಶ್ ಅವರ ಧರ್ಮಪತ್ನಿ ಮಕ್ಕಳು , ರವಿ ಕುಮಾರ್, ಗೌರವ ಅಧ್ಯಕ್ಷರು, ಶೈಲಜಾ, ಮಹಿಳಾ ಕಾರ್ಯದರ್ಶಿ, ನೀಲಮ್ಮ ಕೆ ಆರ್, ಉಪಾಧ್ಯಕ್ಷರು, ಬಿ.ಚಂದ್ರ ಬಾಯ್, ಅಧ್ಯಕ್ಷರು ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಇದೇ ವೇಳೆ ಉಪಸ್ಥಿತರಿದ್ದರು.