ಬೆಂಗಳೂರು : ಒಳ ಮೀಸಲಾತಿಗೆ ಒತ್ತಾಯಿಸಿ ಸರ್ಕಾರ ಜರೂರಾಗಿ ಜಾರಿ ಮಾಡಬೇಕೆಂದು ಮಾದಿಗ ದಂಡೋರ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷರಾದ ಬಿ ನರಸಪ್ಪ ದಂಡೋರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಕಳೆದ ಮೂರು ದಶಕಗಳಿಂದ ರಾಜಕೀಯ ಪಕ್ಷಗಳು ದಲಿತರನ್ನು ಕಡೆಗಣಿಸುತ್ತಾ ಮೀಸಲಾತಿ ವಿಚಾರದಲ್ಲಿ ಸಾಕಷ್ಟು ಅನ್ಯಾಯವನ್ನು ಬಗೆಯುತ್ತ ಮಾದಿಗರಿಗೆ ದ್ರೋಹವನ್ನು ಎಸೆಹುತ ಬಂದಿದ್ದಾರೆ. ಮೀಸಲಾತಿ ವಿಚಾರದಲ್ಲಿ ಆಯೋಗಗಳು ನಡೆಸಿದ ಸಮೀಕ್ಷಾ ವರದಿಗಳು ಪೂರಕವಾಗಿದ್ದು ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ದಲಿತರ ಮೀಸಲಾತಿ ಜಾರಿಗೆ ಮಾಡಬೇಕು ಚಳಿಗಾಲದ ಅಧಿವೇಶನದಲ್ಲಿ ನಡೆಯುವ ಸಂದರ್ಭದಲ್ಲಿ ವಿಶೇಷ ಸಭೆಯನ್ನು ಹಮ್ಮಿಕೊಂಡು ಶೇಕಡ 7ರಷ್ಟು ಮೀಸಲಾತಿ ಜಾರಿ ಮಾಡಬೇಕೆಂದು ಇದೇ ವೇಳೆ ಪ್ರತಿಭಟನೆಯಲ್ಲಿ ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾದಿಗ ದಂಡೋರ ಸಮಿತಿಯ ಪದಾಧಿಕಾರಿಗಳು ಆಗು ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾದಿಗರು ತಮ್ಮ ಶಕ್ತಿ ಪ್ರದರ್ಶನವನ್ನು ತೋರಿಸಿದರು. ಇನ್ನೂ ಇದೆ ವೇಳೆ ಪ್ರತಿಭಟನಾ ನಿರತರು ಪ್ರತಿಭಟನೆಯ ಉಗ್ರ ಸ್ವರೂಪ ತಾಳುತ್ತಿದ್ದಂತೆ ಪೊಲೀಸರು ಎಚ್ಚರವಹಿಸಿ ಪ್ರತಿಭಟನಾ ನಿರತರನ್ನು ತಡೆದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ಮೀಸಲಾತಿಯನ್ನು ಅನುಷ್ಠಾನಕ್ಕೆ ತರದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ಸಹ ನೀಡಿದರು. ಸುರಿಯುತ್ತಿರುವ ಮಳೆಯಲ್ಲಿಯೂ ಸಹ ಪ್ರತಿಭಟನೆ ನಿರತರು ಕುಗ್ಗದೆ ಧರಣಿಯನ್ನು ಮುಂದುವರಿಸಿದರು.
ಪ್ರತಿಭಟನ ವೇಳೆ ರಚಿತಾ ಎಲ್ಲಾ ಜಿಲ್ಲಾ ಅಧ್ಯಕ್ಷರುಗಳು ಪದಾಧಿಕಾರಿಗಳು ಇದೇ ವೇಳೆ ಮಹಿಳಾ ಅಧ್ಯಕ್ಷರುಗಳು ಉಪಸ್ಥಿತರಿದ್ದರು.